ಬೆಂಗಳೂರು: ನಗರದ ಜ್ಞಾನಭಾರತಿ ಕ್ಯಾಂಪಸ್ ಒಳಗಿನ ಲೇಡೀಸ್ ಹಾಸ್ಟೆಲ್ ಒಂದಕ್ಕೆ ರಾತ್ರಿ ವೇಳೆ ಬಿರ್ಲಾ ಹಾಕಿಕೊಂಡ ಯುವಕನೊಬ್ಬ ಹೊಕ್ಕಿದ್ದು, ಆತನನ್ನು ಹಿಡಿದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ ವೇಳೆ ತನ್ನ ಸ್ನೇಹಿತೆಯನ್ನು ಭೇಟಿ ಮಾಡುವ ಸಲುವಾಗಿ ಆರೋಪಿ ಯುವಕ ಬುರ್ಖಾ ಹಾಕಿಕೊಂಡು ಹಾಸ್ಟೆಲ್ ಪ್ರವೇಶ ಮಾಡಿದ್ದ. ಇದನ್ನು ಗಮನಿಸಿದ ಇತರ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸರು ಹಾಸ್ಟೆಲ್‌ಗೆ ಬಂದು ಆರೋಪಿ ಯುವಕನನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವಕ ತನ್ನ ಗೆಳತಿಯನ್ನು ಭೇಟಿ ಮಾಡಲು ಬಂದಿದ್ದಾಗಿ ತಿಳಿಸಿದ್ದು, ಹಾಸ್ಟೆಲ್‌ಗೆ ಬರಲು ಅನುಕೂಲವಾಗಲೆಂದು ಯುವತಿಯೇ ತನಗೆ ಬುರ್ಖಾ ನೀಡಿದ್ದಳು ಎಂದು ತಿಳಿಸಿದ್ದಾನೆ. ಈ ಸಂಬಂಧ ಪೊಲೀಸರು ಯುವಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.