ಮಣಿಪಾಲ: ಡ್ರಗ್ಸ್ ಸೇವಿಸಿದ ಮೂವರು ಆರೋಪಿಗಳನ್ನು ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಸಾಹಿಲ್ ಮೆಹ್ತಾ, ಶೌನಕ್ ಮುಖ್ಯೋಪಾಧ್ಯಾಯ, ವಾಲುಸ್ಟಾ ಮಾರ್ಟಿನ್ಸ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಇಪ್ಪತ್ತು ವರ್ಷದ ಆಸುಪಾಸಿನವರಾಗಿದ್ದಾರೆ. ನಗರದ ಉಪೇಂದ್ರ ಪೈ ಸರ್ಕಲ್ ಬಳಿಯಲ್ಲಿನ ವೈನ್‌ಶಾಪ್ ಒಂದರ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ಈ ಮೂವರು ಆರೋಪಿಗಳು ಗಾಂಜಾ ಮತ್ತಿನಲ್ಲಿ ತೇಲಾಡುತ್ತಿದ್ದರು. ಇವರನ್ನು ಪೊಲೀಸರು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಆರೋಪಿಗಳು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.