ದೆಹಲಿ: ಮಾರ್ಚ್ 21, 2026 ರ ವೇಳೆಗೆ ಭಾರತ ನಕ್ಸಲಿಸಂ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ. ಮಾವೋವಾದವನ್ನು ರಾಜಕೀಯ ಎಂದು ಪರಿಗಣಿಸುವ ಸರ್ಕಾರ ಮತ್ತು ಭದ್ರತೆ - ಅಭಿವೃದ್ಧಿಗಾಗಿ ಕೆಲಸ ಮಾಡುವ ಸರ್ಕಾರ ಇದ್ದಾಗ ಏನಾಗುತ್ತದೆ ಎನ್ನುವುದನ್ನು ಗಮನಿಸಿ. ಛತ್ತೀಸ್‍ಘಡ್‌ನಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ಬಳಿಕ ಒಂದೇ ವರ್ಷದಲ್ಲಿ 380 ಕ್ಕೂ ಹೆಚ್ಚು ನಕ್ಸಲರನ್ನು ಹತ್ಯೆ ಮಾಡಲಾಗಿದೆ. 1194 ನಕ್ಸಲರನ್ನು ಬಂಧಿಸಲಾಗಿದೆ. 1045 ನಕ್ಸಲರು ಶರಣಾಗಿದ್ದಾರೆ. ಸಕ್ರಿಯ ನಕ್ಸಲರ ಸಂಖ್ಯೆ ಇಳಿಮುಖ ಕಂಡಿದೆ. ಈಗಲೂ ಅದೇ ಪೊಲೀಸ್, ಅದೇ ಭದ್ರತಾ ಸಿಬ್ಬಂದಿ, ಅದೇ ಭಾರತವಿದೆ. ಕಾಂಗ್ರೆಸ್ ಆಡಳಿತದಲ್ಲಿದ್ದಿದ್ದರೆ ಇದು ಸಾಧ್ಯವಾಗುತ್ತಿತ್ತೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. ನಾವು ಅಧಿಕಾರ ವಹಿಸಿಕೊಂಡ ಬಳಿಕ ಎಲ್ಲಾ ಸಶಸ್ತ್ರ ಸಂಘಟನೆಗಳ ಜೊತೆಗೆ ಮಾತುಕತೆ ನಡೆಸಿದ್ದೇವೆ. 2019 ರಿಂದ ಸುಮಾರು 12 ಮುಖ್ಯ ಶಾಂತಿ ಒಪ್ಪಂದ ಗಳಿಗೆ ಸಹಿ ಹಾಕಲಾಗಿದೆ. ಹತ್ತು ಸಾವಿರಕ್ಕೂ ಹೆಚ್ಚು ಯುವಕರು ಶಸ್ತ್ರತ್ಯಾಗ ಮಾಜಿ ಮುನ್ನೆಲೆಗೆ ಬಂದಿದ್ದಾರೆ. ಆ ಯುವಕರು ಈಗ ಅಭಿವೃದ್ಧಿಯ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದವರು ಹರ್ಷ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರ ಭಯೋತ್ಪಾದನೆ, ಹಿಂಸಾಚಾರವನ್ನು ಸಹಿಸುವುದಿಲ್ಲ. ಭಾರತಕ್ಕೆ ಕಾಶ್ಮೀರದ ಭಯೋತ್ಪಾದನೆ, ಎಡಪಂಥೀಯ ಉಗ್ರವಾದ, ಈಶಾನ್ಯದ ದಂಗೆ ಬಹುದೊಡ್ಡ ಸವಾಲುಗಳಾಗಿವೆ. ಇವೆಲ್ಲವುಗಳನ್ನು ಹತ್ತಿಕ್ಕಲು ಪಿಎಂ ಮೋದಿ ಸರ್ಕಾರ ಸಂಘಟಿತ ಪ್ರಯತ್ನ ನಡೆಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.