ತುಮಕೂರು: ಡ್ರಗ್ಸ್ ಸಾಗಾಟಗಾರರು, ಮಾರಾಟಗಾರರ ಮೇಲೆ ಜಿಲ್ಲೆಯ ಪೊಲೀಸ್ ಪಡೆ ಕಣ್ಣಿಟ್ಟಿದ್ದು, ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, 13,60,000 ರೂ. ಮೊತ್ತದ 17.89 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮೈಸೂರಿನ ರಾಕೇಶ್ ಮತ್ತು ಶ್ರೀರಂಗಪಟ್ಟಣದ ಹರ್ಷ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 17.89 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಮೌಲ್ಯ ಸುಮಾರು ಹದಿಮೂರು ಲಕ್ಷದ ಅರವತ್ತು ಸಾವಿರ ರೂ. ಎಂದು ತಿಳಿದು ಬಂದಿದೆ. ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.