ಬೆಂಗಳೂರು: ಉದ್ಯಮಿಯೋರ್ವರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಗರದ ಬಿಜಿಎಸ್ ಲೇಔಟ್‌ನ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ. ಲೋಕನಾಥ್ ಸಿಂಗ್ (37) ಎಂಬವರೇ ಮೃತ ದುರ್ದೈವಿ. ಲೋಕನಾಥ್ ಅವರಿಗೆ ವಿವಾಹ ನಿಶ್ಚಯವಾಗಿತ್ತು. ಅವರ ಕೊಲೆಯಾದ ಬಳಿಕ ಅವರ ಗನ್‌ಮ್ಯಾನ್ ನಾಪತ್ತೆಯಾಗಿದ್ದು, ಆ ಬಳಿಕ ಪೊಲೀಸ್ ಠಾಣೆಗೆ ಬಂದಿದ್ದಾರೆ. ಸದ್ಯ ಈತನನ್ನು ವಶಕ್ಕೆ ಪಡೆದು ಪೊಲೀಸರು ಕೊಲೆ ಸಂಬಂಧ ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ.