ಬೆಂಗಳೂರು: FIR ದಾಖಲಿಸುವ ಮುನ್ನವೇ ಸಾಕ್ಷ್ಯಗಳನ್ನು ಸಂಗ್ರಹ ಮಾಡುವುದು ಲೋಕಾಯುಕ್ತ ದೋಷ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘನೆ ಮಾಡಿದಂತೆ ಎಂದು ಹೈಕೋರ್ಟ್ ತಿಳಿಸಿದೆ. ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಭ್ರಷ್ಟಾಚಾರ ನಿಯಂತ್ರಣ -1983 ಸೆಕ್ಷನ್ 17A ಅಡಿಯಲ್ಲಿ ಲೋಕಾಯುಕ್ತ ಅನಾಮಧೇಯ ದೂರುಗಳು ಬಂದಲ್ಲಿ ಸರ್ಕಾರಿ ಸೇವಕರ ವಿರುದ್ಧ FIR ದಾಖಲು ಮಾಡುವುದು ತಪ್ಪು ಎಂದು ವಿವರಿಸಿದೆ. ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವ ಮೊದಲೇ ಪ್ರಾಥಮಿಕ ತನಿಖೆ ಮಾಡುವುದು, ಅಧಿಕಾರಿಗಳನ್ನು ವಿಚಾರಣೆ ಮಾಡುವುದು, ಸಾಕ್ಷಿ ಸಂಗ್ರಹ ಮಾಡುವುದು, ದಸ್ತಾವೇಜು ನಿರ್ಮಿಸುವುದು ಮಾಡಲಾಗುತ್ತಿದೆ. ಹೀಗೆ ಮಾಡಿದಲ್ಲಿ ಕಾಯ್ದೆಯ ಸೆ. 17 ಎ ಯನ್ನು ರೂಪಿಸಿದ ಶಾಸಕಾಂಗ ಉದ್ದೇಶಗಳನ್ನು ನಿಷ್ಕ್ರಿಯ ಮಾಡಿದಂತೆ ಎಂದು ಕೋರ್ಟ್ ಹೇಳಿದೆ.