ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಜಾಮರ್ ಬಳಕೆ ಮಾಡಲಾಗಿದ್ದು, ಇದರಿಂದಾಗಿ ಸ್ಥಳೀಯ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶದ ಜನರಿಗೆ ನೆಟ್ವರ್ಕ್ ಸಮಸ್ಯೆ ಆರಂಭವಾಗಿದೆ. ಜೈಲಿನ ಸುತ್ತಮುತ್ತಲಿನ ಮನೆಗಳು, ಫ್ಲ್ಯಾಟ್‌ಗಳು, ಅಂಗಡಿಗಳು, ಕಾಲೇಜ್, ಹೊಟೇಲ್ ಸೇರಿದಂತೆ ನಾಗರಿಕ ಸಮುದಾಯ ಈ 5G ಜಾಮರ್‌ನಿಂದ ಸಮಸ್ಯೆ ಅನುಭವಿಸುವಂತಾಗಿದೆ. ಜಿಯೋ ಬಳಕೆದಾರರಿಗೆ ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿದೆ .ಉಳಿದ ನೆಟ್ವರ್ಕ್ ಬಳಕೆದಾರರು ಸಹ ಸ್ವಲ್ಪ ಮಟ್ಟಿಗೆ ನೆಟ್ವರ್ಕ್ ಸಮಸ್ಯೆ ಅನುಭವಿಸುವ ಹಾಗಾಗಿದೆ. ಈ ವಿಚಾರದಿಂದ ಜೈಲಧಿಕಾರಿಗಳ ವಿರುದ್ಧ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಜಾಮರ್ ಬದಲು ಮೊಬೈಲ್ ಡಿಟೆಕ್ಟರ್‌ಗಳನ್ನು ಬಳಕೆ ಮಾಡುವಂತೆ ಆಗ್ರಹಿಸಿದ್ದಾರೆ. ಖೈದಿಗಳು ಮೊಬೈಲ್ ಬಳಸುವುದನ್ನು ಕಂಡುಹಿಡಿಯಲಾಗದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸುಧಾರಿತ ತಂತ್ರಜ್ಞಾನ ಬಳಕೆ ಮಾಡುವಂತೆ ಸಲಹೆ ನೀಡಿದ್ದಾರೆ.