ಕಲ್ಬುರ್ಗಿ: ಜಿಮ್ಸ್ (ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ಆಸ್ಪತ್ರೆಯ ಐಸಿಯು ಘಟಕದಲ್ಲಿ ವಿದ್ಯುತ್ ಸ್ಥಗಿತವಾದ ಪರಿಣಾಮ ಕೆಲಕಾಲ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆಸ್ಪತ್ರೆಯ 4 ನೇ ಮಹಡಿಯಲ್ಲಿರುವ 429 ನೇ ವಾರ್ಡ್ ಐಸಿಯುನ ಮೊದಲ ಮತ್ತು ಎರಡನೇ ಬೆಡ್‌ನ ವೆಂಟಿಲೇಟರ್‌ಗಳ ಬ್ಯಾಟರಿ ಸಾಮರ್ಥ್ಯದ ಕೊರತೆಯ ಕಾರಣಕ್ಕೆ ಕೆಲ ಕಾಲ ಕಾರ್ಯ ನಿರ್ವಹಣೆ ಸ್ಥಗಿತಗೊಳಿಸಿದವು. ಇದರಿಂದಾಗಿ ರೋಗಿಗಳು ಸಮಸ್ಯೆ ಅನುಭವಿಸಿದ್ದು, ದಾದಿಯರು ತಕ್ಷಣವೇ ಬೈನ್ ಸರ್ಕ್ಯೂಟ್ ಮೂಲಕ ಆಕ್ಸಿಜನ್ ಪೂರೈಕೆ ಮಾಡಿದರು. ವಿದ್ಯುತ್ ಸಂಪರ್ಕ ಮರುಸ್ಥಾಪನೆಗೊಳ್ಳುವ ವರೆಗೆ ಇದೇ ಪರಿಸ್ಥಿತಿ ಮುಂದುವರೆದಿತ್ತು. ಈ ಕಾರಣಕ್ಕೆ ಆಸ್ಪತ್ರೆಯ ಸಿಬ್ಬಂದಿಯನ್ನು ರೋಗಿಗಳ ಸಂಬಂಧಿಕರು ತರಾಟೆಗೆ ತೆಗೆದುಕೊಂಡ ಘಟನೆ ಸಹ ನಡೆದಿದೆ. ಸಾರ್ವಜನಿಕ ವಲಯದಲ್ಲೂ ಜಿಮ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.