ಬೆಂಗಳೂರು: ನಗರದ ಬಿಜಿಎಸ್ ಲೇಔಟ್‌ನಲ್ಲಿ ನಡೆದ ಉದ್ಯಮಿ ಲೋಕನಾಥ್ ಸಿಂಗ್ ಹತ್ಯೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಲೋಕನಾಥ್ ಪತ್ನಿ ಮತ್ತು ಅತ್ತೆ ಸೇರಿ ಅವರನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಲೋಕನಾಥ್ ತಮ್ಮ ಪತ್ನಿಯ ಹೆತ್ತವರಿಗೆ ಬ್ಲಾಕ್‌ಮೇಲ್ ಮಾಡಿ ವಿವಾಹ ಮಾಡಿಕೊಂಡಿದ್ದರು. ಆ ಬಳಿಕ ಅವರ ಪತ್ನಿಗೆ ತಮ್ಮ ಪತಿಯ ವರ್ತನೆ ಸರಿಯಾಗಿಲ್ಲ ಎನ್ನುವುದು ತಿಳಿದು ಬಂದಿದೆ. ಈ ಎಲ್ಲಾ ಘಟನೆಗಳಿಂದ ಬೇಸತ್ತ ಪತ್ನಿಯ ತಾಯಿ ಮತ್ತು ಪತ್ನಿ ಸೇರಿಕೊಂಡು ಲೋಕನಾಥ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದಾರೆ. ಲೋಕನಾಥ್‌ಗೆ ಸೇರಿದ ಪ್ರಾಪರ್ಟಿಯಲ್ಲಿ ಪತ್ನಿ ಅವರ ಪತಿ ಲೋಕನಾಥ್‌ಗೆ ಪಾರ್ಟಿ ನೀಡುವುದಾಗಿ ತಿಳಿಸಿ ಕರೆದುಕೊಂಡು ಬಂದು ಆಹಾರದಲ್ಲಿ ನಿದ್ದೆ ಮಾತ್ರೆ ಹಾಕಿ ನೀಡಿದ್ದರು. ಆತ ನಿದ್ದೆಗೆ ಜಾರುತ್ತಿದ್ದ ಹಾಗೆ ಅವರ ಅತ್ತೆ ಹರಿತವಾದ ಆಯುಧ ಬಳಸಿ ಲೋಕನಾಥ್ ಕತ್ತು ಸೀಳಿ ಕೊಲೆ ನಡೆಸಿದ್ದಾರೆ. ಸದ್ಯ ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.