ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಆರೋಪಿ, ನಟಿ ರನ್ಯಾ ರಾವ್ ಜಾಮೀನು ಅರ್ಜಿ ಆದೇಶವನ್ನು ಮಾ. 27 ಕ್ಕೆ ಕಾಯ್ದಿರಿಸಿ ಕೋರ್ಟ್ ಆದೇಶ ನೀಡಿದೆ. ಬೆಂಗಳೂರಿನ 64 ನೇ ಸಿಸಿಎಚ್ ಕೋರ್ಟ್ ರನ್ಯಾ ಜಾಮೀನು ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ್ದು ವಾದ - ವಿವಾದವನ್ನು ಆಲಿಸಿದೆ. ಮಾ. 27 ಕ್ಕೆ ಜಾಮೀನು ಆದೇಶವನ್ನು ಕಾಯ್ದಿರಿಸಿ ಆದೇಶ ನೀಡಿರುವುದಾಗಿದೆ.