ಬೆಂಗಳೂರು: ಮತ್ತು ಹಿಡಿದು ರೀಲ್ಸ್ ಮಾಡಿ ಪೊಲೀಸರ ವಾಸವಾಗಿದ್ದ ಬಿಗ್‌ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಮತ್ತೆ ಪೊಲೀಸರ ವಾಸವಾಗಿದ್ದಾರೆ. ಈ ಹಿಂದೆ ಪೊಲೀಸರಿಗೆ ಫೈಬರ್ ಮಾರಕಾಸ್ತ್ರ ಒಪ್ಪಿಸಿ, ನಾವು ಇದರಲ್ಲೇ ರೀಲ್ಸ್ ಮಾಡಿದ್ದು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ಗಾಗಿ ಮೂರು ದಿನಗಳಿಗೆ ಪೊಲೀಸರು ವಶಕ್ಕೆ ಪಡೆದಿರುವುದಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈ ನಡುವೆ ಪೊಲೀಸರು ಅವರನ್ನು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ರಜತ್ ಮತ್ತು ವಿನಯ್ ತಾವು ಫೈಬರ್ ಮಚ್ಚು ಬಳಸಿ ರೀಲ್ಸ್ ಮಾಡಿದ್ದಾಗಿ ಹೇಳಿ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಪೊಲೀಸರ ಹಾದಿ ತಪ್ಪಿಸಲು ನೋಡಿದ್ದರು. ಈ ಹಿಂದೆ ಅವರು ಒಪ್ಪಿಸಿದ ಆಯುಧ ರೀಲ್ಸ್‌ಗೆ ಬಳಕೆ ಮಾಡಿದ ಆಯುಧಗಳಾಗಿರಲಿಲ್ಲ. ಈ ಹಿನ್ನೆಲೆ ಮತ್ತೆ ಅವರನ್ನು ವಿಚಾರಣೆಗೆ ಕರೆದಾಗ ಇಬ್ಬರೂ ಗೊಂದಲದ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಾ. 28 ರ ವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.