ಬೆಂಗಳೂರು: ನಟಿ, ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಡಿಆರ್‌ಐ ಬಲೆಗೆ ಬಿದ್ದ ರನ್ಯಾ ರಾವ್ ಪ್ರಕರಣದ ಮೂರನೇ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಬಳ್ಳಾರಿಯ ಬ್ರಾಹ್ಮಿನ್ ರಸ್ತೆಯ ಸಾಹಿಲ್ ಸಕಾರಿಯಾ ಜೈನ್ ಎಂದು ಗುರುತಿಸಲಾಗಿದೆ. ಸಾಹಿತಿ ಆರೋಪಿ ರನ್ಯಾಳಿಗೆ ವಿದೇಶದಿಂದ ಗೋಲ್ಡ್ ಸ್ಮಗ್ಲಿಂಗ್ ನಡೆಸಲು ನೆರವು ನೀಡಿದ್ದ ಎಂದು ತಿಳಿದು ಬಂದಿದೆ. ಸಾಹಿಲ್ ಕುಟುಂಬ ಹಲವು ವರ್ಷಗಳಿಂದ ಬಳ್ಳಾರಿಯಲ್ಲಿ ಚಿನ್ನಾಭರಣ ಮಾರಾಟ ಅಂಗಡಿಯನ್ನು ಮುನ್ನಡೆಸುತ್ತಿದೆೆ. ಈತನಿಗೆ ತನ್ನ ಸ್ನೇಹಿತರ ಮೂಲಕ ರನ್ಯಾ ಪರಿಚಯವಾಗಿದ್ದು, ಹಣದಾಸೆಗೆ ಈತ ಚಿನ್ನ ಸ್ಮಗ್ಲಿಂಗ್‌ಗೆ ಕೈಜೋಡಿಸಿದ್ದ ಎಂದು ತಿಳಿದು ಬಂದಿದೆ. ಸಾಹಿಲ್‌ನನ್ನು ನಾಲ್ಕು ದಿನಗಳಿಗೆ ಡಿಆರ್‌ಐ ತನ್ನ ಕಸ್ಟಡಿಗೆ ಪಡೆದಿದೆ.