ದೆಹಲಿ: ಮನುಷ್ಯರನ್ನು ಕೊಲ್ಲುವುದಕ್ಕಿಂತಲೂ ಮರಗಳನ್ನು ಹತ್ಯೆ ಮಾಡುವುದು ಹೀನಾಯ ಕೃತ್ಯ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಅಕ್ರಮವಾಗಿ ಮರಗಳನ್ನು ಕಡೆದ ಶಿವಶಂಕರ್ ಅಗರ್ವಾಲ್ ಎಂಬವರಿಗೆ, ಅವರು ಕಡಿದ ಪ್ರತಿ ಮರಕ್ಕೂ 1 ಲಕ್ಷ ರೂ.ಗಳಂತೆ ದಂಡ ಸಲ್ಲಿಕೆಗೆ ಸಂಬಂಧಿಸಿದ ಹಾಗೆ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆಯ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿದೆ. ನ್ಯಾ.ಮೂ. ಅಭಯ್ ಎಸ್. ಓಕಾ ಮತ್ತು ಉಜ್ವಲ್ ಭುಯಾನ್ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ಪ್ರಕಟಿಸಿರುವುದಾಗಿದೆ. ತಾಜ್ ಮಹಲ್ ಸುತ್ತಲಿರುವ ಸಂರಕ್ಷಿತಾರಣ್ಯದಲ್ಲಿ 454 ಮರಗಳನ್ನು ಶಿವಶಂಕರ್ ಅಗರ್ವಾಲ್ ಕಡಿದಿದ್ದು, ಇದಕ್ಕೆ ಪ್ರತಿ ಮರಕ್ಕೆ 1 ಲಕ್ಷ ರೂ. ಗಳಂತೆ ಅವರಿಗೆ ಕೋರ್ಟ್ ದಂಡ ವಿಧಿಸಿತ್ತು. ದಂಡದ ಮೊತ್ತ ಇಳಿಸುವಂತೆ ಅಗರ್ವಾಲ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯ ಸಂದರ್ಭದಲ್ಲಿ ಮರಗಳ ಹತ್ಯೆ ಮನುಷ್ಯನ ಹತ್ಯೆಗಿಂತಲೂ ಹೀನಾಯ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿದೆ.