ಲಕ್ನೋ: ರಾಜ್ಯದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದರೆ, ಮುಸಲ್ಮಾನರೂ ಸುರಕ್ಷಿತರಾಗಿರುತ್ತಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನೂರು ಹಿಂದೂ ಕುಟುಂಬಗಳ ಮಧ್ಯೆ ಒಂದು ಮುಸ್ಲಿಂ ಕುಟುಂಬ ಇದ್ದಲ್ಲಿ ಅವರು ಸುರಕ್ಷಿತರಾಗಿರುತ್ತಾರೆ. ಅದೇ ಐವತ್ತು ಹಿಂದೂ ಕುಟುಂಬಗಳು ನೂರು ಮುಸ್ಲಿಂ ಕುಟುಂಬಗಳ ಮಧ್ಯೆ ಸುರಕ್ಷಿತವಾಗಿರುವುದು ಸಾಧ್ಯವಿಲ್ಲ ಎನ್ನುವುದಕ್ಕೆ ಬಾಂಗ್ಲಾದೇಶ ಉತ್ತಮ ಉದಾಹರಣೆ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ 2017 ರ ಬಳಿಕ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ. ಇಲ್ಲಿ ಮುಸಲ್ಮಾನರು ಸುರಕ್ಷಿತರಾಗಿದ್ದಾರೆ. ಹಿಂದೂಗಳು ಸುರಕ್ಷಿತರಾಗಿದ್ದರೆ ಮುಸ್ಲಿಮರೂ ಸುರಕ್ಷಿತ ಎಂದು ಯೋಗೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.