ಕಲ್ಬುರ್ಗಿ: 23 ಪ್ರಕರಣಗಳಲ್ಲಿ ಆರೋಪಿಯಾಗಿರುವ ರೌಡಿ ಶೀಟರ್ ಮೊಹ್ಮದ್ ರುಸ್ತುಂ ಅಹ್ಮದ್ (35) ನನ್ನು ಗೂಂಡಾ ಕಾಯ್ದೆಯಡಿ ನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ 15 ವರ್ಷಗಳಿಂದ ಕೊಲೆ ಯತ್ನ, ಹಲ್ಲೆ, ಅತ್ಯಾಚಾರ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಸಾಮಾಜಿಕ ಶಾಂತಿ, ಸ್ವಾಸ್ಥ್ಯ ಕದಡುವ, ಕಾನೂನು ಸುವ್ಯವಸ್ಥೆ ಭಂಗಗೊಳಿಸುವ ಕೆಲಸವನ್ನು ಈತ ಮಾಡಿದ್ದು, ಈ ಹಿನ್ನಲೆಯಲ್ಲಿ ಈತನನ್ನು ಗೂಂಡಾ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆಯೂ ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ ಆದೇಶಿಸಿದ್ದಾರೆ.