ಕಲ್ಬುರ್ಗಿ: ವೈದ್ಯಕೀಯ ತಪಾಸಣೆಗಾಗಿ ಕರೆದುಕೊಂಡು ಬಂದಿದ್ದ ಆರೋಪಿ ಜಿಮ್ಸ್ ಕಟ್ಟಡದಿಂದ ಹಾರಿ ಮೃತಪಟ್ಟ ಘಟನೆ 2022 ರಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಎಎಸ್‌ಐ ಸೇರಿದಂತೆ ಒಟ್ಟು ಮೂವರು ಪೊಲೀಸರ ವಿರುದ್ಧ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬ್ರಹ್ಮ ಪುರ ಪೊಲೀಸ್ ಠಾಣೆಯ ಎಎಸ್‌ಐ ಅಬ್ದುಲ್ ಖಾದರ್, ಕಾನ್ಸ್ಟೇಬಲ್‌ಗಳಾದ ಹುಣಚಪ್ಪ ಮಲ್ಲಪ್ಪ, ಕುಮಾರ್ ರಾಠೋಡ ವಿರುದ್ಧ ಪ್ರಕರಣ ದಾಖಲಾಗಿರುವುದಾಗಿದೆ. ಆರೋಪಿ ಸೊಹೇಬ್ ಎಂಬಾತನನ್ನು 2022 ರಲ್ಲಿ ವೈದ್ಯಕೀಯ ತಪಾಸಣೆ ನಡೆಸುವ ಹಿನ್ನೆಲೆಯಲ್ಲಿ ಜಿಮ್ಸ್‌ಗೆ ಕರೆತರಲಾಗಿತ್ತು. ನ್ಯಾಯಾಲಯದ ಮುಂದೆ ಹಾಜರುಪಡಿಸುವ ಉದ್ದೇಶದಿಂದ ಕೊರೋನಾ ಸಂಬಂಧಿತ ತಪಾಸಣೆಗಾಗಿ ಆರೋಪಿಯ ಕೈಕೋಳ ಬಿಚ್ಚಲಾಗಿತ್ತು. ಈ ಸಮಯದಲ್ಲಿ ಆತ ಪೊಲೀಸರಿಂದ ತಪ್ಪಿಸಿಕೊಂಡು ಜಿಮ್ಸ್‌ನಿಂದ ಜಿಗಿದು ಮೃತಪಟ್ಟಿದ್ದ. ಈ ಪ್ರಕರಣದ ತನಿಖೆಯನ್ನು ಸಿಐಡಿ ಗೆ ವಹಿಸಲಾಗಿತ್ತು.