ಪುತ್ತೂರು: ಜಾಗದ ತಕರಾರಿಗೆ ಸಂಬಂಧಿಸಿದಂತೆ ಮಹಿಳೆ ಮತ್ತು ಅವರ ಸಹೋದರನ ಮೇಲೆ ವ್ಯಕ್ತಿಯೊಬ್ಬ ತಲ್ವಾರ್ ಬೀಸಿ ಹಲ್ಲೆ ನಡೆಸಲು ಪ್ರಯತ್ನಿಸಿದ ಘಟನೆ ಸಂಪ್ಯದ ಮೂಲೆಯಲ್ಲಿ ನಡೆದಿದೆ. ಆರೋಪಿ ಹಸೈನಾರ್ ಎಂಬಾತ ರೇಖನಾಥ ರೈ ಮತ್ತು ಅವರ ಸಹೋದರಿ ಪುಷ್ಪಾವತಿ ಅವರ ಮೇಲೆ ತಲ್ವಾರ್‌ನಿಂದ ಹಲ್ಲೆಗೆ ಪ್ರಯತ್ನಿಸಿದ್ದಾನೆ. ಹಲವು ಸಮಯದಿಂದ ಇದ್ದ ಜಾಗದ ತಕರಾರಿನ ಕಾರಣಕ್ಕೆ ಈ ರೀತಿಯ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.