ಮಡಿಕೇರಿ: ಪತ್ನಿಯೂ ಸೇರಿದಂತೆ ಒಟ್ಟು ನಾಲ್ವರನ್ನು ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆ ಮಾಡಿದ ಆರೋಪಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಗಿರೀಶ್ (38) ಎಂದು ಗುರುತಿಸಲಾಗಿದೆ.
ಬಾಳಂಗಾಡಿನ ಒಂಟಿ ಗುಡಿಸಲಿನಲ್ಲಿ ವಾಸವಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ ಕರಿಯ, ಗೌರಿ, ನಾಗಿ ಮತ್ತು ನಾಗರಿಕ ಪುತ್ರಿ ಕಾವೇರಿ ಎಂಬ ನಾಲ್ವರನ್ನು ಗಿರೀಶ್ ಕತ್ತಿಯಿಂದ ಕಡಿದು ಕೊಲೆ ನಡೆಸಿ, ಪರಾರಿಯಾಗಿದ್ದ ಆರೋಪದಡಿ ಗಿರೀಶ್‌ನನ್ನು ಜಿಲ್ಲಾ ಪೊಲೀಸರ ವಿಶೇಷ ತನಿಖಾ ತಂಡ ಕೇರಳದ ತಲಪುಳದಲ್ಲಿ ವಶಕ್ಕೆ ಪಡೆದಿದ್ದಾರೆ.
ಗಿರೀಶ್ ಹತ್ಯೆಗೊಳಗಾದ ನಾಗಿಯ ಮೂರನೇ ಪತಿಯಾಗಿದ್ದು, ಒಂದು ವರ್ಷದಿಂದ ಒಟ್ಟಿಗೆ ಜೀವನ ನಡೆಸುತ್ತಿದ್ದರು. ಆದರೆ ನಾಗಿ ತನ್ನ ಎರಡನೇ ಪತಿ ಸುಬ್ರಹ್ಮಣಿಯ ಜೊತೆಗೆ ಮತ್ತೆ ಸಂಬಂಧ ಹೊಂದಿದ್ದಾಳೆ ಎನ್ನುವ ಸಂದೇಹದಿಂದ ಗಿರೀಶ್ ಈ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.