ಬೆಂಗಳೂರು: ಕರಿಯ ಚಲನಚಿತ್ರದ ಸ್ಟೈಲ್‌ನಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ ಪೊಲೀಸ್ ಬಲೆಗೆ ಬಿದ್ದಿದ್ದ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ರಜತ್, ವಿನಯ್ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೈಲಿನಿಂದ ಹೊರಬಂದಿರುವ ವಿನಯ್ ಗೌಡ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಲ್ಲಿ ತಮ್ಮಿಂದಾದ ಪ್ರಮಾದಕ್ಕೆ ಕ್ಷಮೆ ಯಾಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಡೀ ಕರ್ನಾಟಕದ ಜನತೆಯಲ್ಲಿ ಕ್ಷಮೆ ಕೇಳಿದ್ದಾರೆ. ನನ್ನ ಅಭಿಮಾನಿಗಳು, ನನ್ನ ಹೆಂಡತಿ, ಮಗನಿಗೆ, ಕುಟುಂಬಸ್ಥರಿಗೆ ಕ್ವಮೆ ಕೇಳುತ್ತಿದ್ದೇನೆ. ನನ್ನಿಂದ ತೊಂದರೆಯಾಗಿದೆ. ನಾವು ಮಚ್ಚು ಇಟ್ಟುಕೊಂಡು ವಿಡಿಯೋ ಮಾಡಬಾರದಿತ್ತು. ನಾನು ಹಾಗೆ ಮಾಡಬಾರದಿತ್ತು. ನನ್ನಿಂದ ತಪ್ಪಾಗಿದೆ. ಇದರಿಂದ ಇಷ್ಟು ಸಮಸ್ಯೆಯಾಗುತ್ತದೆ ಎಂದುಕೊಂಡಿರಲಿಲ್ಲ. ನನ್ನ ಎಚ್ಚರಿಕೆಯಲ್ಲಿ ನಾನಿರಬೇಕಾಗಿತ್ತು. ಈ ರೀತಿಯ ಸಂದೇಶವನ್ನು ನಾನು ನನ್ನ ಹಿಂಬಾಲಕರಿಗೆ ನೀಡಬಾರದಿತ್ತು ಎಂದಿದ್ದಾರೆ. ಪೊಲೀಸ್ ಇಲಾಖೆಯವರು ಉತ್ತಮವಾಗಿ ತನಿಖೆ ಮಾಡಿದ್ದಾರೆ. ಯಾರೂ ಅವರ ಮೇಲೆ ಆರೋಪ ಮಾಡಬೇಡಿ. ರೀಲ್ಸ್ ಮಾಡಲು ಫೈಬರ್ ಮಚ್ಚು ಬಳಸಿದ್ದೆ. ಆ ಮಚ್ಚು ನನ್ನದಲ್ಲ. ರಜತ್ ಅವರದ್ದು. ಶೋ ನಲ್ಲಿ ನನಗೆ ಪುಷ್ಪರಾಜ್ ಪಾತ್ರ ಕೊಟ್ಟಿದ್ದರು. ಹಾಗಾಗಿ ನಾನು ಬೀ ಡಾ ಹಾಕಿ ರೀಲ್ಸ್ ಮಾಡಿದ್ದೆ ಎಂದು ಅವರು ಹೇಳಿದ್ದಾರೆ.