ಮಂಗಳೂರು: ದೇರಳಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಕಳ್ಳತನ ಮಾಡುತ್ತಿದ್ದವರಲ್ಲಿ ಇಬ್ಬರು ಸೈರನ್ ಮೊಳಗಿದ ಕಾರಣ ಪೊಲೀಸರ ವಶವಾದ ಘಟನೆ ಶನಿವಾರ ರಾತ್ರಿ ನಡೆದಿದೆ. ಕೇರಳ ಮೂಲದ ಮೂವರು ಕಳ್ಳರು ನಡುರಾತ್ರಿ ಫೈನಾನ್ಸ್ ಬೀಗ ಮುರಿಯುವ ಸಂದರ್ಭದಲ್ಲಿ ಸೈರನ್ ಮೊಳಗಿದೆ. ಆ ತಕ್ಷಣವೇ ಸ್ಥಳಕ್ಕೆ ಪೊಲೀಸ್ ಬಂದಿದ್ದು ಆರೋಪಿಗಳಾದ ಕಾಞಂಗಾಡಿನ ಮುರಳಿ, ಕಾಸರಗೋಡಿನ ಹರ್ಷದ್‌ನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಫೈನಾನ್ಸ್ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಲು ಪ್ರಯತ್ನ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಫೈನಾನ್ಸ್‌ನ ಸೈರನ್ ಮೊಳಗಿದೆ. ಕೂಡಲೇ ಕೊಣಾಜೆ ಪೊಲೀಸ್ ಠಾಣೆಗೆ ಸಂದೇಶ ಹೋಗಿದ್ದು, ಪೊಲೀಸರು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಇಬ್ಬರು ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ.