ಕೋಟ: ಗಾಂಜಾ ಸೇವನೆ ಆರೋಪದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳೂರು ಗ್ರಾಮದ ದೇಲಟ್ಟುವಿನಲ್ಲಿ ನಡೆದಿದೆ. ಗಿಳಿಯಾರುವಿನ ರಾಘವೇಂದ್ರ ಮತ್ತು ಬೇಳೂರಿನ ಶಿವರಾಜ್ ಎಂಬವರೇ ಬಂಧಿತ ಆರೋಪಿಗಳು. ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಕೋಟಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.