ಬೆಂಗಳೂರು: ಸರ್ಕಾರ ಮುಂದಿನ ದಿನಗಳಲ್ಲಿ ‘ಜಾಡಮಾಲಿ’ ಪದಕ್ಕೆ ಪರ್ಯಾಯವಾಗಿ ‘ಸ್ವಚ್ಛತಾ ಸಹಾಯಕ’ ಎಂದು ಕರೆಯಬೇಕು ಎಂದು ಹೈಕೋರ್ಟ್ ಹೇಳಿದೆ. ಸ್ವಚ್ಛತಾ ಸಹಾಯಕರು ತಮ್ಮ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಕೋರಿ ರಾಜ್ಯದ ವಿವಿಧೆಡೆಯ ಪೊಲೀಸ್ ಠಾಣೆಗಳಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯ ಪೀಠ ಇಂದು ವಿಚಾರಣೆ ನಡೆಸಿತು. ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಅಡ್ವೋಕೇಟ್ ಅವರು, ಸರ್ಕಾರ ಜಾಡಮಾಲಿ ಎಂಬ ಪದ ಬಳಕೆ ಮಾಡುತ್ತಿರುವುದು ಸರಿಯಲ್ಲ. ಆದ್ದರಿಂದ ಸರ್ಕಾರ ಅದಕ್ಕೆ ಪರ್ಯಾಯವಾಗಿ ಸ್ವಚ್ಛತಾ ನೌಕರ ಎಂದು ಬಳಕೆ ಮಾಡಬೇಕು ಎಂದು ಆದೇಶಿಸುವಂತೆ ಕೋರಿಕೆ ಸಲ್ಲಿಸಿದ್ದಾರೆ. ಹೈಕೋರ್ಟ್ ಈ ಮನವಿಯನ್ನು ಶ್ಲಾಘಿಸಿದ್ದು, ಸಮಾಜಕ್ಕಾಗಿ ದುಡಿಯುವ ವರ್ಗವನ್ನು ಗೌರವದಿಂದ ಕಾಣಬೇಕು ಎಂದು ಅಭಿಪ್ರಾಯಪಟ್ಟಿದೆ. ಇನ್ನು ಮುಂದೆ ಸ್ವಚ್ಛತಾ ನೌಕರ ಎಂದೇ ಕರೆಯಬೇಕು ಎಂದು ಕೋರ್ಟ್ ಆದೇಶಿಸಿದೆ.