ದಾವಣಗೆರೆ: ಮದ್ಯ ಸೇವನೆ ಮಾಡಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತಾಯಿಯನ್ನೇ ಕೋಲಿನಿಂದ ಹೊಡೆದು ಹತ್ಯೆ ಮಾಡಿದ ಘಟನೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ. ರತ್ನಾ ಬಾಯಿ(62) ಎಂಬವರೇ ಮೃತ ದುರ್ದೈವಿ. ಆರೋಪಿ ರಾಘವೇಂದ್ರ ನಾಯ್ಕ ತನಗೆ ಮದ್ಯ ಸೇವನೆ ಮಾಡಲು ಅನಾರೋಗ್ಯ ಪೀಡಿತ ತಾಯಿಯನ್ನು ಹಣಕ್ಕಾಗಿ ಪೀಡಿಸಿದ್ದಾನೆ. ತಾಯಿ ಹಣ ನೀಡದೇ ಇದ್ದಾಗ ಕೋಲಿನಿಂದ ಅವರ ಮುಖಕ್ಕೆ ಜೋರಾಗಿ ಹೊಡೆದಿದ್ದಾನೆ. ಪರಿಣಾಮ ರತ್ನಾಬಾಯಿ ಮೃತಪಟ್ಟಿದ್ದಾರೆ. ಆರೋಪಿ ರಾಘವೇಂದ್ರ ಹೆಂಡತಿ, ಮಕ್ಕಳು ಜಾತ್ರೆಗೆಂದು ತನ್ನ ತವರು ಮನೆಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.