ಬೆಂಗಳೂರು: ಧರ್ಮಸ್ಥಳದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕೋರ್ಟ್ ಆದೇಶಕ್ಕೂ ತಲೆ ಬಾಗದೆ ಎರಡನೇ ವಿಡಿಯೋ ಬಿಟ್ಟ ದೂತ ಸಮೀರ್ ಯೂಟ್ಯೂಬರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಸೌಜನ್ಯ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಮತ್ತು ವಿರೇಂದ್ರ ಹೆಗ್ಡೆ ಕುಟುಂಬವನ್ನು ಗುರಿಯಾಗಿಸಿ ಈ ಹಿಂದೆ ಮಾಡಿದ ವಿಡಿಯೋವನ್ನು ತೆಗೆದು ಹಾಕುವಂತೆ ಮತ್ತು ಮುಂದೆಯೂ ಇಂತಹ ವಿಡಿಯೋ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಎರಡನೇ ವಿಡಿಯೋ ಬಿಟ್ಟ ಸಮೀರ್‌ಗೆ ಈಗ ಸಂಕಷ್ಟ ಎದುರಾಗಿದೆ. ಧರ್ಮಸ್ಥಳದ ಹರ್ಷೇಂದ್ರ ಹೆಗ್ಡೆ ಮತ್ತು ನಿಶ್ಚಲ್ ಅವರು 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿರುವುದಾಗಿದೆ. ಜೊತೆಗೆ ಈ ವಿಡಿಯೋವನ್ನು ಸಹ ಡಿಲೀಟ್ ಮಾಡಲು ಕೋರ್ಟ್ ಆದೇಶಿಸಿದ್ದು, ಅದರಂತೆ ಸಮೀರ್ ತನ್ನ ಚಾನೆಲ್‌ನಿಂದ ವಿಡಿಯೋ ಡಿಲೀಟ್ ಮಾಡಿದ್ದಾನೆ.