ತುಮಕೂರು: ಪ್ರೀತಿ ಯಾವಾಗ, ಎಲ್ಲಿ, ಯಾರಿಗೆ, ಯಾಕೆ ಹುಟ್ಟುತ್ತದೆ ಎನ್ನುವುದು ಗೊತ್ತಾಗಲ್ಲ. ಇಲ್ಲೊಬ್ಬ ಯುವಕನೊಬ್ಬ ಮಂಗಳಮುಖಿಯನ್ನು ಪ್ರೀತಿಸಿದ್ದಾನೆ. ಪ್ರೀತಿ ಕೊನೆಗೆ ಕೊಲೆ ಯತ್ನದಲ್ಲಿ ಅಂತ್ಯಗೊಂಡಿದೆ. ಯಾಕೆಂದರೆ ಮಂಗಳಮುಖಿ ಜೊತೆಗಿನ ಈತನ ಪ್ರೀತಿ ಏಕಾಏಕಿ ಉಕ್ಕಿ ಹರಿದಿದೆ. ಆದರೆ ಆಕೆ ಅದನ್ನು ನಿರಾಕರಿಸಿದ್ದಾಳೆ. ಪ್ರೀತಿ ನಿರಾಕರಿಸಿದ ಮಂಗಳ ಮುಖಿಗೆ ಚಾಕು ಇರಿದು ಯುವಕ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ನಡೆದಿದೆ. ಹನೀಷಾ ಎಂಬ ೨೧ ವರ್ಷದ ಮಂಗಳಮುಖಿಗೆ ಮಂಡ್ಯದ ಆದಿಲ್ ಎಂಬ ೨೩ ವರ್ಷದ ಯುವಕ ಚಾಕುವಿನಿಂದ ಇರಿದಿದ್ದಾನೆ.
ಹನೀಷಾ ಹಾಗೂ ಆದಿಲ್ ಕಳೆದ ಆರು ತಿಂಗಳಿನಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ನಿಮಿತ್ತ ಹನೀಷಾ ಆಗಾಗ ಬೇರೆ ಬೇರೆ ಊರುಗಳಿಗೆ ಹೋಗುತ್ತಿದ್ದಳು. ಇದನ್ನು ಸಹಿಸದ ಆದಿಲ್, ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸುತ್ತಿದ್ದ. ಸಾರ್ವಜನಿಕವಾಗಿ ಹನೀಷಾ ಬೇರೆಯ ವರೊಂದಿಗೆ ಬೆರೆಯುವುದನ್ನು ಕೂಡಾ ಆದಿಲ್ ಸಹಿಸಿಕೊ ಳ್ಳುತ್ತಿರಲಿಲ್ಲ. ಇದರಿಂದ ಬೇಸತ್ತು ಪ್ರೇಮ ನಿರಾಕರಿಸಿದ ಹಿನ್ನೆಲೆ ಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂದರ್ಭದಲ್ಲಿ ಆದಿಲ್ ಚಾಕುವಿನಿಂದ ಇರಿದಿದ್ದಾನೆ. ಇನ್ನು ಗಾಯಾಳು ಹನೀಷಾಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು ಆರೋಪಿ ಆದಿಲ್‌ಗಾಗಿ ಶೋಧ ನಡೆಸು ತ್ತಿದ್ದಾರೆ.