ಮಂಗಳೂರು: ನಗರದ ನೂತನ ಸಿಸಿಬಿ ಎಸಿಪಿ ಆಗಿ ಮನೋಜ್ ನಾಯ್ಕ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ವರ್ಷದ ಹಿಂದೆ ಮಂಗಳೂರಿನ ಪಣಂಬೂರು ಉಪವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿಕೊಂಡು ಬಂದ ಮನೋಜ್ ನಾಯ್ಕ್ ಅವರನ್ನು ಇದೀಗ ಮಂಗಳೂರು ನಗರದ ಸಿಸಿಬಿಯ ಸಹಾಯಕ ಪೋಲಿಸ್ ಆಯುಕ್ತರಾಗಿ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಸಿಸಿಬಿ ಎಸಿಪಿಯಾಗಿ ಗೀತಾ ಕುಲಕರ್ಣಿ ಅವರನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಇದೀಗ ಆ ಜಾಗಕ್ಕೆ ಮನೋಜ್ ನಾಯ್ಕ್ ಅವರ ನೇಮಕ ಮಾಡಲಾಗಿದೆ.