ಮಂಗಳೂರು ; ಇಬ್ಬರು ನೂತನ ಸಹಾಯಕ ಪೊಲೀಸ್ ಆಯುಕ್ತರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ. ಸೆನ್ ವಿಭಾಗದ ಪೊಲೀಸ್ ಸಹಾಯಕ ಆಯುಕ್ತರಾಗಿ ರವೀಶ್ ನಾಯಕ್ ಮತ್ತು ಸಿಸಿಆರ್ ಬಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ಗೀತಾ ಕುಲಕರ್ಣಿ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಮಾಡಿದೆ. ರವೀಶ್ ನಾಯಕ್ ಈ ಹಿಂದೆ ಮಂಗಳೂರು ನಗರದಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ ಸಮಯದಲ್ಲಿ ಉತ್ತಮ ಜನ ಮೆಚ್ಚುಗೆ ಪಡೆದಿದ್ದರು. ನಂತರ ಎಸಿಪಿ ಆಗಿ ನಗರದ ಸಿಸಿಆರ್ ಬಿ ಯಲ್ಲಿ ಕರ್ತವ್ಯ ಮಾಡಿದ್ದರು. ಇದೀಗ ಇವರಿಗೆ ಸೆನ್ ವಿಭಾಗದ ಸಹಾಯಕ ಆಯುಕ್ತರಾಗಿ ವರ್ಗಾವಣೆ ಆಗಿದೆ.
ಗೀತಾ ಕುಲಕರ್ಣಿ ಅವರು ಈ ಹಿಂದೆ ಮಂಗಳೂರು ನಗರದ ಸಂಚಾರ ವಿಭಾಗದ ಸಹಾಯಕ ಆಯುಕ್ತರಾಗಿ ಕರ್ತವ್ಯ ಮಾಡಿದ್ದರು, ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉತ್ತಮ ಸ್ಪಂದನೆ ಗೀತಾ ಕುಲಕರ್ಣಿ ಅವರ ಕಡೆಯಿಂದ ದೊರೆತಿತ್ತು. ನಂತರ ಚುನಾವಣೆಯ ಸಮಯದಲ್ಲಿ ಮಂಗಳೂರು ನಗರದ ಸಿಸಿಬಿ ವಿಭಾಗದ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಅವರಿಗೆ ಮಂಗಳೂರು ನಗರದ ಸಿಸಿಆರ್ ಬಿ ವಿಭಾಗದ ಸಹಾಯಕ ಆಯುಕ್ತರನ್ನಾಗಿ ಸರಕಾರ ಆದೇಶ ಮಾಡಿದೆ.