• Police Varthe
Saturday, November 15, 2025
Police Varthe
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
No Result
View All Result
Police Varthe
No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
Home Blog

ಭೂಮಿಯ ಮೇಲಿನ ನರಕ?!: ಮಂಗಳೂರು ವಿಶೇಷ ಆರ್ಥಿಕ ವಲಯ(SEZ)ನಲ್ಲಿರುವ ಮೀನು ಸಂಸ್ಕರಣಾ ಘಟಕಗಳ ಕರ್ಮಕಾಂಡ ಬಯಲು!

Ranjith Madanthyar by Ranjith Madanthyar
December 19, 2024
in Blog
0
ಭೂಮಿಯ ಮೇಲಿನ ನರಕ?!: ಮಂಗಳೂರು ವಿಶೇಷ ಆರ್ಥಿಕ ವಲಯ(SEZ)ನಲ್ಲಿರುವ ಮೀನು ಸಂಸ್ಕರಣಾ ಘಟಕಗಳ ಕರ್ಮಕಾಂಡ ಬಯಲು!
0
SHARES
290
VIEWS
WhatsappTelegramShare on FacebookShare on Twitter

ಮಂಗಳೂರು: 2022ರ ಎಪ್ರಿಲ್ 16ರಂದು ಎಂಎಸ್ಇಝಡ್‌ (ಮಂಗಳೂರು ವಿಶೇಷ ಆರ್ಥಿಕ ವಲಯ)ನಲ್ಲಿರುವ ಮೀನು ಸಂಸ್ಕರಣಾ ಕಂಪೆನಿಯೊಂದರಲ್ಲಿ ಘೋರ ದುರಂತವೊಂದು ಸಂಭವಿಸಿತು.

ಮೀನು ಸಂಸ್ಕರಣಾ ಕಂಪೆನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಕುಸಿದು ಬೀಳುತ್ತಾನೆ. ಈತನನ್ನು ರಕ್ಷಿಸಲೆಂದು ಕೆಲಸ‌ ಮಾಡುತ್ತಿದ್ದ ಸುಮಾರು ಏಳು ಮಂದಿ ತೊಟ್ಟಿಗೆ ಇಳಿದರು. ಆಮೇಲೆ ನಡೆದಿದ್ದು ಮಾತ್ರ ಮನುಕುಲವೇ ತಲೆ ಎತ್ತಲು ಸಾಧ್ಯವಾಗದಂತಹ ಘೋರ ದುರಂತ.

ಹೌದು ಈ ದುರಂತದಲ್ಲಿ ಬರೋಬ್ಬರಿ‌ 5 ಮಂದಿ ಇಹಲೋಕ ತ್ಯಜಿಸಿದರು. ಮೃತಪಟ್ಟ ಇಷ್ಟೂ ಮಂದಿ ಪಶ್ಚಿಮ ಬಂಗಾಳದವರು. ಇಂಥದೊಂದು ಘೋರ ದುರಂತ ಸಂಭವಿಸಿದ ಮೇಲೂ ಅಲ್ಲಿನ ಪರಿಸ್ಥಿತಿ ಸುಧಾರಿಸಬೇಕಿತ್ತು. ಆದರೆ ಅಲ್ಲಿನ ಪರಿಸ್ಥಿತಿ ಸುಧಾರಿಸಿದ್ದೇ ಇಲ್ಲ ಎನ್ನುವುದು ಇದೀಗ ಬಯಲಾಗಿದೆ.

ಆರೋಪವೇನು?
ನಿಜ ಹೇಳಬೇಕೆಂದರೆ ಈ ಫಿಶ್‌ಮೀಲ್ ಕಾರ್ಖಾನೆ ಎನ್ನುವುದೇ ಈ ಭೂಮಿ ಮೇಲಿನ ನರಕ ಎನ್ನುವಷ್ಟು ಗಬ್ಬೆದ್ದು ಹೋಗಿದೆ. ಇಲ್ಲಿನ ದುಸ್ಥಿತಿ ಬಗ್ಗೆ ಸಂಬಂಧಪಟ್ಟವರಿಗೆ ಅನೇಕ ಬಾರಿ ಮನವಿ ಮಾಡಿದರೂ ಸುಧಾರಿಸಿಲ್ಲ. ಹಾಗಾದರೆ ಸೆಝ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮತ್ತು ಅಧಿಕಾರಿಗಳಿಗೆ ಬರೆದ ಮನವಿಯಲ್ಲಿ ಇಲ್ಲಿನ‌ ಮೀನು ಸಂಸ್ಕರಣಾ ಘಟಕದ ಕರ್ಮಕಾಂಡ ಬಯಲಾಗಿದೆ.

ಲಾಭಕ್ಕಾಗಿ ನಿಯಮಗಳನ್ನೇ ಗಾಳಿಗೆ ತೂರಿದರೇ?

ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ (SEZ) ಪರಿಸರ ವಿರೋಧಿ ಮತ್ತು ಆರೋಗ್ಯ ಬಿಕ್ಕಟ್ಟು ಎದುರಿಸುವಂತಹ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ SEZ ಅಧಿಕಾರಿಗಳು ಮತ್ತು ಮಾಲಿನ್ಯ ಇಲಾಖೆಗೆ ಪದೇ ಪದೇ ದೂರು ನೀಡಿದರೂ, ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.

ಮಂಗಳೂರು SEZ ವ್ಯಾಪ್ತಿಯಲ್ಲಿ ಹಲವಾರು ಮೀನುಮೀಲ್ ಸಂಸ್ಕರಣಾ ಘಟಕಗಳಿದ್ದು ಇವೆಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿನ ಸ್ಥಾವರಗಳಲ್ಲಿ SEZ ನಿಯಮಗಳನ್ನು ಮೀರಿ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಕಾರ್ಯನಿರ್ವಿಸುತ್ತಿರುವ ಸುರಿಮಿ ಮೀನು ಸಂಸ್ಕರಣಾ ಘಟಕಗಳು ಮೀನುಗಳ ಉಪಉತ್ಪನ್ನಗಳನ್ನು ಮಾತ್ರ ಬಳಸಿ ಸಂಸ್ಕರಿಸುವುದಾಗಿ ಹೇಳಿಕೊಂಡು ಪರವಾನಿಗೆಯನ್ನು ಪಡೆದುಕೊಂಡಿವೆ.

ವಾಸ್ತವದಲ್ಲಿ ಅಲ್ಲಿ ನಡೆಯುತ್ತಿರುವುದೇ ಬೇರೆ…?!!!
ಯಾಕೆಂದರೆ ಇಲ್ಲಿ ಪೂರೈಕೆದಾರರಿಂದ ಇಡೀ ಮೀನುಗಳನ್ನು ಖರೀದಿಸಿ ಅದನ್ನು ಬೃಹತ್ ಪ್ರಮಾಣದಲ್ಲಿ ಸಂಸ್ಕರಿಸುವ ಮೂಲಕ ಪರವಾನಿಗೆಯನ್ನು ದುರುಪಯೋಗ ಪಡಿಸಲಾಗುತ್ತಿದೆ.

ಇಲ್ಲಿನ ಸ್ಥಾವರಗಳಲ್ಲಿ ಅನುಮತಿಸಿದ್ದಕ್ಕಿಂತ 5-6 ಪಟ್ಟು ಹೆಚ್ಚು ಸಾಮರ್ಥ್ಯದ ಯಂತ್ರಗಳನ್ನು ಸ್ಥಾಪಿಸಲಾಗಿದೆ. ತನಿಖೆಯಲ್ಲೂ ಇಲ್ಲಿರುವ ಯಂತ್ರಗಳು 10 ಪಟ್ಟು ದೊಡ್ಡದಾಗಿದೆ ಎನ್ನುವುದನ್ನು ಬಹಿರಂಗಪಡಿಸಿವೆ. ಲಾಭದ ಉದ್ದೇಶದಿಂದ ಪರಿಸರ ಮತ್ತು ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕಾದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.

ಇದಲ್ಲದೆ, SEZ ಗೆ ಮೀನುಗಳನ್ನು ಸಾಗಿಸಲು ಬಳಸಲಾಗುವ ಟ್ರಕ್‌ಗಳು ಮೀನಿನ ತ್ಯಾಜ್ಯವನ್ನು ರಸ್ತೆಗಳಲ್ಲಿ ಸುರಿಯುತ್ತಿವೆ. ಇದು ಇನ್ನಷ್ಟು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದಷ್ಟೇ ಅಲ್ಲದೆ ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ.

ಹಾಗಾಗಿ ಇಲ್ಲಿ ನಿಯಮ ಮೀರಿ ಪ್ರಮಾಣ ಪತ್ರ ಹಾಗೂ ರಫ್ತು ಪರವಾನಿಗೆಗಳನ್ನು ಪಡೆದಿರುವ ಬಗ್ಗೆ ಅನುಮಾನವಿದ್ದು ಈ ಬಗ್ಗೆ ತನಿಖೆ ನಡೆಯಬೇಕಿದೆ ಎನ್ನುವುದು ಅಧಿಕಾರಿಗಳಿಗೆ ನೀಡಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕ್ರಮಕ್ಕೆ ಆಗ್ರಹ!
ಈ ಅಕ್ರಮ ಫಿಶ್‌ಮೀಲ್ ಸಂಸ್ಕರಣಾ ಘಟಕಗಳನ್ನು ಮುಚ್ಚುವುದು ಮತ್ತು ನಿಯಮ ಮೀರಿದ ಕಾರಣ ಈ ಸಮಸ್ಯೆಗಳಿಗೆ ಕಾರಣರಾದ ಅಪರಾಧಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

ಪರಿಸರಕ್ಕೆ ಮಾರಕ!
ಇಲ್ಲಿ ನಡೆಯುವ ಕಾರ್ಯವು ಪರಿಸರದ ನಾಶಕ್ಕೆ ಕಾರಣವಾಗುವುದಷ್ಟೇ ಅಲ್ಲದೆ ಅಂತರ್ಜಲವನ್ನು ಕಲುಷಿತಗೊಳಿಸುತ್ತದೆ. ನಮ್ಮ ಪ್ರವಾಸೋದ್ಯಮ ಮತ್ತು ನಮ್ಮ ನಾಗರಿಕರ ಆರೋಗ್ಯದ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತದೆ. ವಿಶೇಷವಾಗಿ ಬಡವರು ಮತ್ತು ದುರ್ಬಲರು ಮಾತ್ರವಲ್ಲದೆ ಈ ರಾಕ್ಷಸ ನಿಗಮಗಳ ಅನಿಯಂತ್ರಿತ ಚಟುವಟಿಕೆಗಳಿಂದಾಗಿ ದೇಶ ಗಮನಾರ್ಹ ಪ್ರಮಾಣದ ಹಣಕಾಸು ನಷ್ಟವನ್ನೂ ಅನುಭವಿಸುತ್ತದೆ.

ಮನವಿಯಲ್ಲಿರುವ ಬೇಡಿಕೆಗಳೇನು?

ಮಂಗಳೂರು SEZ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಫಿಶ್‌ಮೀಲ್ ಸಂಸ್ಕರಣಾ ಘಟಕಗಳನ್ನು ಕೂಡಲೇ ಮುಚ್ಚಬೇಕು. ಈ ಸ್ಥಾವರಗಳಿಗೆ ಪರವಾನಗಿ ಮತ್ತು ಪ್ರಮಾಣಪತ್ರಗಳ ವಿತರಣೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದು. ಈ ಘೋರ ಉಲ್ಲಂಘನೆಗಳ ಬಗ್ಗೆ ಕಣ್ಣು ಮುಚ್ಚಿ ಕುಳಿತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುದು. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು SEZ ಅಧಿಕಾರಿಗಳು ಮತ್ತು ಮಾಲಿನ್ಯ ಇಲಾಖೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಖಚಿತಪಡಿಸಿಕೊಳ್ಳುವುದು. ವೈದ್ಯಕೀಯ ನೆರವು, ಶುದ್ಧ ಗಾಳಿ ಮತ್ತು ನೀರು ಮತ್ತು ಮಾಲಿನ್ಯ ತಡೆಗಟ್ಟುವಿಕೆ ಸೇರಿದಂತೆ ಪೀಡಿತ ಸಮುದಾಯಗಳಿಗೆ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸುವುದು.

Previous Post

ತಿರುಪತಿ ಲಡ್ಡಿನಲ್ಲಿ ಹಂದಿ-ದನದ ಕೊಬ್ಬು ಪತ್ತೆ ಬೆನ್ನಲ್ಲೇ!: ಕರ್ನಾಟಕದ ಕೈ ಸರ್ಕಾರ ಮಾಡಿದ್ದೇನು?

Next Post

ಮನಪಾ ನೂತನ ಆಯುಕ್ತರ ನಿರ್ಧಾರದಿಂದ ನಗರದ ಅಕ್ರಮ ಕಟ್ಟಡದ ಮಾಲಕರಿಗೆ ನಡುಕ ಶುರು?!ಚಿಲಿಂಬಿಯಲ್ಲಿರುವ ಅಕ್ರಮ ಕಟ್ಟಡಕ್ಕೆ ಉರುಳುವ ಭಾಗ್ಯ?

Related Posts

ವೃದ್ಧೆಗೆ ಡಿಜಿಟಲ್ ವಂಚನೆ ಯತ್ನ!; 17 ಲಕ್ಷ ಸೇಫ್ ಮಾಡಿದ ಮಂಗಳೂರು ಪೊಲೀಸರು! ಡಿಸಿಪಿಗಳ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Blog

November 1, 2025
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಂಧನ

October 31, 2025
ಕಾನೂನಿನ ಅನ್ವಯ ಕೆಂಪುಕಲ್ಲುಗೆ ಅವಕಾಶ ಕಲ್ಪಿಸಲು ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಸಭೆ  ಕೆಂಪುಕಲ್ಲು ಅಧಿಕೃತ ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಿ ಎಂದ ಸಚಿವ ದಿನೇಶ್ ಗುಂಡೂರಾವ್ ವಾರದೊಳಗೆ SOP ಸಿದ್ಧಪಡಿಸಲು ಸಭೆಯಲ್ಲಿ ನಿರ್ಧಾರ

July 23, 2025
ಕೋಟಿ ಕೋಟಿ ವಂಚಕನ ಐಷಾರಾಮಿ ಬಂಗಲೆಯ ಅಡಗುದಾಣವನ್ನೇ ಬ್ರೇಕ್ ಮಾಡಿದ ಪೊಲೀಸರು! ರಾಜ್ಯದ ವಿಶೇಷ ತನಿಖಾ ತಂಡಕ್ಕೂ ಸಿಗದೇ ಮನೆಯಲ್ಲೇ ತಲೆಮರೆಸಿದ್ದ ಸಲ್ದಾನ್ಹಾ! ಸಿನಿಮೀಯ ರೀತಿ ಆರೋಪಿಯ ಬಂಧಿಸಿದ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಂಡ!

July 18, 2025
ಧರ್ಮಸ್ಥಳ; ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಮರು ಜೀವ! ಎಸ್ಪಿಗೆ ದೂರು ನೀಡಿದ ತಾಯಿ

July 15, 2025
ಪುತ್ತೂರು; ತಲೆಮರೆಸಿಕೊಂಡಿದ್ದ ಆರೋಪಿ ಶ್ರೀ ಕೃಷ್ಣ ಜೆ ರಾವ್ ಮೈಸೂರಿನಲ್ಲಿ ಬಂಧನ

July 5, 2025
Next Post
ಮನಪಾ ನೂತನ ಆಯುಕ್ತರ ನಿರ್ಧಾರದಿಂದ ನಗರದ ಅಕ್ರಮ ಕಟ್ಟಡದ ಮಾಲಕರಿಗೆ ನಡುಕ ಶುರು?!ಚಿಲಿಂಬಿಯಲ್ಲಿರುವ ಅಕ್ರಮ ಕಟ್ಟಡಕ್ಕೆ ಉರುಳುವ ಭಾಗ್ಯ?

ಮನಪಾ ನೂತನ ಆಯುಕ್ತರ ನಿರ್ಧಾರದಿಂದ ನಗರದ ಅಕ್ರಮ ಕಟ್ಟಡದ ಮಾಲಕರಿಗೆ ನಡುಕ ಶುರು?!ಚಿಲಿಂಬಿಯಲ್ಲಿರುವ ಅಕ್ರಮ ಕಟ್ಟಡಕ್ಕೆ ಉರುಳುವ ಭಾಗ್ಯ?

Leave a Reply Cancel reply

Your email address will not be published. Required fields are marked *

Stay Connected test

  • 23.9k Followers
  • 99 Subscribers
  • Trending
  • Comments
  • Latest
ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್ ನಲ್ಲಿರುವ ಮಂಗಳೂರಿನ ಆರು ಹುಡುಗಿಯರು ಯಾರು?!

April 29, 2024
ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

ನಾಪತ್ತೆಯಾಗಿದ್ದ ದಿಗಂತ್ ಪತ್ತೆ! ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಪ್ರಯತ್ನಕ್ಕೆ ಫಲ!

March 8, 2025
ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

March 4, 2025
ದ.ಕ ಜಿಲ್ಲೆಯ ಬಂಟ್ವಾಳ, ಪುತ್ತೂರು,ಸುಳ್ಯ,ಕಡಬ, ಬೆಳ್ತಂಗಡಿ, ತಾಲೂಕು ಗಳಿಗೆ ನಾಳೆ ರಜೆ ಘೋಷಣೆ ಆಗಿದೆ ; ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಅಧಿಕೃತ ಪ್ರಕಟಣೆ

July 17, 2024
Neha Hiremath Murder Case: ನೇಹಾ ಹತ್ಯೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್! 5 ದಿನದಿಂದಲೂ ಮಾಡಿದ್ದನಾ ಕೊಲೆಗೆ ಸಂಚು?

ದೇಶದಲ್ಲಿ ನಿರುದ್ಯೋಗ ಹೆಚ್ಚಳ ಕಾರ್ಮಿಕರ ಸ್ಥಿತಿ ಶೋಚನೀಯ!; ಕೆ.ವಿಜಯಕುಮಾರ್ ಶೆಟ್ಟಿ

ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಉಗ್ರಾಣ ಮುಹೂರ್ತ, ಧಾರ್ಮಿಕ ಸಭೆ; ಎ.26ರಂದು ಬ್ರಹ್ಮಕುಂಭಾಭಿಷೇಕ

ಚುನಾವಣೆಗೂ ಮುನ್ನ ಬೆಂಗಳೂರಿನಲ್ಲಿ ಆತಂಕ: ವ್ಯಕ್ತಿಯ ಹತ್ಯೆ, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಚುನಾವಣೆಗೂ ಮುನ್ನ ಬೆಂಗಳೂರಿನಲ್ಲಿ ಆತಂಕ: ವ್ಯಕ್ತಿಯ ಹತ್ಯೆ, ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

0
ವೃದ್ಧೆಗೆ ಡಿಜಿಟಲ್ ವಂಚನೆ ಯತ್ನ!; 17 ಲಕ್ಷ ಸೇಫ್ ಮಾಡಿದ ಮಂಗಳೂರು ಪೊಲೀಸರು! ಡಿಸಿಪಿಗಳ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ವೃದ್ಧೆಗೆ ಡಿಜಿಟಲ್ ವಂಚನೆ ಯತ್ನ!; 17 ಲಕ್ಷ ಸೇಫ್ ಮಾಡಿದ ಮಂಗಳೂರು ಪೊಲೀಸರು! ಡಿಸಿಪಿಗಳ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

November 1, 2025
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಂಧನ

ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಂಧನ

October 31, 2025
ದ.ಕ ಜಿಲ್ಲೆಯ  ಅಧಿಕಾರಿಗಳ ಬದಲಾವಣೆ ಫಲ ತಂದಿದೆ!; ಸಿ.ಎಂ

October 20, 2025
ಕಾನೂನಿನ ಅನ್ವಯ ಕೆಂಪುಕಲ್ಲುಗೆ ಅವಕಾಶ ಕಲ್ಪಿಸಲು ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಸಭೆ  ಕೆಂಪುಕಲ್ಲು ಅಧಿಕೃತ ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಿ ಎಂದ ಸಚಿವ ದಿನೇಶ್ ಗುಂಡೂರಾವ್ ವಾರದೊಳಗೆ SOP ಸಿದ್ಧಪಡಿಸಲು ಸಭೆಯಲ್ಲಿ ನಿರ್ಧಾರ

ಕಾನೂನಿನ ಅನ್ವಯ ಕೆಂಪುಕಲ್ಲುಗೆ ಅವಕಾಶ ಕಲ್ಪಿಸಲು ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಸಭೆ ಕೆಂಪುಕಲ್ಲು ಅಧಿಕೃತ ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಿ ಎಂದ ಸಚಿವ ದಿನೇಶ್ ಗುಂಡೂರಾವ್ ವಾರದೊಳಗೆ SOP ಸಿದ್ಧಪಡಿಸಲು ಸಭೆಯಲ್ಲಿ ನಿರ್ಧಾರ

July 23, 2025

Recent News

Facebook Twitter
Police Varthe

We bring you the best Premium WordPress Themes that perfect for news, magazine, personal blog, etc. Check our landing page for details.

Follow Us

Browse by Category

  • Blog
  • ಕ್ರೈಂ ನ್ಯೂಸ್
  • ಪಿವಿ ವಿಶೇಷ
  • ಪೊಲೀಸ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ

Recent News

ವೃದ್ಧೆಗೆ ಡಿಜಿಟಲ್ ವಂಚನೆ ಯತ್ನ!; 17 ಲಕ್ಷ ಸೇಫ್ ಮಾಡಿದ ಮಂಗಳೂರು ಪೊಲೀಸರು! ಡಿಸಿಪಿಗಳ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ವೃದ್ಧೆಗೆ ಡಿಜಿಟಲ್ ವಂಚನೆ ಯತ್ನ!; 17 ಲಕ್ಷ ಸೇಫ್ ಮಾಡಿದ ಮಂಗಳೂರು ಪೊಲೀಸರು! ಡಿಸಿಪಿಗಳ ಕರ್ತವ್ಯ ನಿಷ್ಠೆಗೆ ಮೆಚ್ಚುಗೆ ವ್ಯಕ್ತಪಡಿಸಿದ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

November 1, 2025
ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಂಧನ

ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಬಂಧನ

October 31, 2025

© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.

No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper

© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.