ಮಂಗಳೂರು: ನಗರದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಬಹುಮೌಲ್ಯದ ಕಟ್ಟಡ ಮಾಲಕರಿಗೆ ಈಗ ನಡುಕ ಉಂಟು ಮಾಡುವ ನಿರ್ಧಾರವೊಂದನ್ನು ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರು ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಹೊರಬಿದ್ದಿದೆ. ನೂತನ ಆಯುಕ್ತರು ತೆಗೆದುಕೊಳ್ಳುವ ನಿರ್ಧಾರದಿಂದ ಅಕ್ರಮ ಕಟ್ಟಡಗಳು ಉರುಳುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಮೊದಲನೇಯ ಪ್ರಕರಣವಾಗಿ ಮಂಗಳೂರಿನ ಚಿಲಿಂಬಿಯಲ್ಲಿರುವ Gujjadi chambers ಎನ್ನುವ ಕಟ್ಟಡವಿದ್ದು, ಇದಕ್ಕೆ ಯಾವುದೇ ಪರವಾನಿಗೆ ಮತ್ತು (ಪೂರ್ಣಗೊಳಿಸುವಿಕೆ ಪ್ರಮಾಣಪತ್ರ)
ಕಂಪ್ಲಿಸನ್ ಸರ್ಟಿಫಿಕೇಟ್ ಇಲ್ಲದ ಅಕ್ರಮ ಕಟ್ಟಡ ಹೊಂದಿದೆ ಎನ್ನುವ ಆರೋಪದ ಹಿನ್ನೆಲೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ದೂರು ಮತ್ತು ಮನವಿ ಸಲ್ಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಇತಂಹ ಅಕ್ರಮಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ ಮಂಗಳೂರು ನಗರದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಸೆಟ್ ಬ್ಯಾಕ್, ಡೋರ್ ನಂಬರ್ ಹಾಗೂ ಪರವಾನಿಗೆ ಇಲ್ಲದ ಕಟ್ಟಡಗಳ ಮೇಲೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಕ್ರಮ ಕಟ್ಟಡದ ಮಾಲಕರಿಗೆ ಇದೀಗ ನಡುಕ ಉಂಟಾಗಿದೆ. ನಗರ ಪಾಲಿಕೆ ಆಯುಕ್ತರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಈ ರೀತಿಯ ಉತ್ತಮ ಬೆಳವಣಿಗಳು ನಡೆದಿರುವುದು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಮೊದಲು ಎನ್ನಲಾಗುತ್ತಿದೆ. ನಗರದಲ್ಲಿ ಈ ರೀತಿಯ ಹಲವಾರು ಅಕ್ರಮ ಕಟ್ಟಡಗಳಿದ್ದು, ಅನಧಿಕೃತವಾಗಿ ಕಾರ್ಯಾಚರಿಸುತ್ತದೆ. ಈ ಕಟ್ಟಡಗಳಿಂದ ಸಾರ್ವಜನಿಕರಿಗೆ ಅನೇಕ ರೀತಿಯ ತೊಂದರೆಗಳನ್ನುಂಟು ಮಾಡುವುದಲ್ಲದೆ ರಸ್ತೆ ಕಾಮಗಾರಿಗಳಿಗೂ ಅಡಚಣೆಯಾಗುತ್ತಿದೆ. ಇವುಗಳನ್ನು ತೆರವುಗೊಳಿಸದಂತೆ ಹಣಕಾಸು ಪ್ರಭಾವ ಬೀರಲಾಗುತ್ತಿದ್ದರಿಂದ ಇವುಗಳನ್ನು ಉರುಳಿಸಲು ಮುಂದಾಗುತ್ತಿರಲಿಲ್ಲ. ನೂತನ ಆಯುಕ್ತರ ಕಠಿಣ ನಿರ್ಧಾರದಿಂದ ನಗರದಲ್ಲಿರುವ ಅನೇಕ ಅಕ್ರಮ ಕಟ್ಟಡಗಳನ್ನು ಉರುಳಿಸುವ ಸಾಧ್ಯತೆ ಇದೆ.