ಬೆಂಗಳೂರು: ಎಟಿಎಂನಲ್ಲಿದ್ದ ನಗದನ್ನು ಗ್ಯಾಸ್ ಕಟ್ಟರ್ ಬಳಸಿ ಕಳ್ಳತನ ಮಾಡಿದ ಘಟನೆ ಸೂಲಿಬೆಲೆಯ ದೇವನಹಳ್ಳಿ ಕ್ರಾಸ್ ಬಳಿ ನಡೆದಿದೆ.
ಎಸ್‌ಬಿಐಗೆ ಸೇರಿದ ಎಟಿಎಂ ಇದಾಗಿದ್ದು, ಗ್ಯಾಸ್ ಕಟ್ಟರ್ ಬಳಸಿ ಇದರ ಷಟರ್ ಅನ್ನು ಕಳ್ಳರು ಮುರಿದಿದ್ದಾರೆ. ಆ ಬಳಿಕ ಎಟಿಎಂನಲ್ಲಿದ್ದ 30 ಲಕ್ಷ ರೂ. ಗಳಿಗೂ ಅಧಿಕ ಹಣವನ್ನು ಕಳ್ಳರು ದೋಚಿದ್ದಾರೆ.
ಸಿಸಿಟಿವಿಗೆ ಬಣ್ಣದ ಸ್ಪ್ರೇ ಸಿಂಪಡಿಸಿ ತಮ್ಮ ಗುರುತು ಸಿಗದಂತೆ ಮಾಡಿದ್ದಾರೆ. ಬಳಿಕ ಷಟರ್ ಮುರಿದು ಹಣ ದರೋಡೆ ಮಾಡಿರುವುದಾಗಿದೆ. ಕಳ್ಳರು ಆಂಧ್ರಪ್ರದೇಶದ ನೋಂದಣಿ ಹೊಂದಿರುವ ಕಾರಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.