Monday, July 6 , 2020 9:59 AM

ಕ್ರೈಂ












90ದಿನಗಳಿಂದ ಚಿದಂಬರಂ ಜೈಲುವಾಸ- ಜಾಮೀನಿಗಾಗಿ ಸುಪ್ರೀಂಕೋರ್ಟ್ ಮೊರೆ



147

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಸೋಮವಾರ ಸುಪ್ರೀಂಕೊರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಹಣಕಾಸು ದುರುಪಯೋಗ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಅಕ್ಟೋಬರ್ 22ರಂದು ಚಿದಂಬರಂಗೆ ಸಿಬಿಐ ಪ್ರಕರಣದಲ್ಲಿ ಜಾಮೀನು ದೊರಕಿತ್ತು. ಆದರೆ ಇ.ಡಿ ಪ್ರಕರಣದಲ್ಲಿ ಜಾಮೀನು ಸಿಗಲಿಲ್ಲವಾಗಿತ್ತು. ಚಿದಂಬರಂಗೆ ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್ ನ ನೂತನ ಸಿಜೆಐ ಎಸ್ .ಎ.ಬೋಬ್ಡೆ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿರುವುದಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.

ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರ ಜಾಮೀನು ಅರ್ಜಿ ಕಳೆದ ವಾರ ಹೈಕೋರ್ಟ್ ನಲ್ಲಿ ವಜಾಗೊಂಡಿರುವುದಾಗಿ ಸಿಬಲ್ ಸುಪ್ರೀಂಗೆ ತಿಳಿಸಿದರು. ಕಳೆದ 90ದಿನಗಳಿಂದ ಚಿದಂಬರಂ ಜೈಲಿನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ಅರ್ಜಿ ಮೇಲ್ಮನವಿಯನ್ನು ಶೀಘ್ರವೇ ವಿಚಾರಣೆ ನಡೆಸಬೇಕು ಎಂದು ಸಿಜೆಐ ಬೋಬ್ಡೆ ನೇತೃತ್ವದ ಜಸ್ಟೀಸ್ ಬಿಆರ್ ಗವಾಯಿ ಹಾಗೂ ಜಸ್ಟೀಸ್ ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠಕ್ಕೆ ಸಿಬಲ್ ಮನವಿ ಮಾಡಿಕೊಂಡರು. ಚಿದಂಬರಂ ಜಾಮೀನು ಅರ್ಜಿ ಕುರಿತು ಸಲ್ಲಿಕೆಯಾದ ಮೇಲ್ಮನವಿಯನ್ನು ಮಂಗಳವಾರ ಅಥವಾ ಬುಧವಾರ ಕೈಗೆತ್ತಿಕೊಳ್ಳುವುದಾಗಿ ಸಿಜೆಐ ಬೋಬ್ಡೆ ಈ ಸಂದರ್ಭದಲ್ಲಿ ತಿಳಿಸಿದರು.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಮಂಗಳೂರು; ನಗರದ ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೊರೊನಾ ಪಾಸಿಟಿವ್ ರೋಗಿ...

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ನಡೆಯುತ್ತಿರುವ ಅನಾಹುತಗಳನ್ನು ತಡೆಗಟ್ಟುವ...


ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆ ಕಳಿಯ ಗ್ರಾಮ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೆ...

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯವರಿಗೂ...


ಮಂಗಳೂರು: ಕೋವಿಡ್ 19 ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಒಂದೇ ದಿನ...

ನವದೆಹಲಿ: ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ...


ಮುಂಬೈ: ಬಾಲಿವುಡ್‍ನ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ (71) ಹೃದಯಾಘಾತದಿಂದ ಮುಂಜಾನೆ...

ಮಂಗಳೂರು: ಕೇಂದ್ರ ಅಪರಾಧ ದಳದ ಮಂಗಳೂರು ವಿಭಾಗದ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ...


Copyright 2019 www.policevarthe.com | All Right Reserved
error: Content is protected !!