Monday, March 30 , 2020 9:33 PM

ಕ್ರೈಂ












ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜನಸ್ನೇಹಿ ಐಎಎಸ್ ಅಧಿಕಾರಿ ಕೆ.ಎ. ದಯಾನಂದ್ ನೇಮಕ ಸಾಧ್ಯತೆ!



4121

Posted By; Ranjith Madanthyar

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜನಸ್ನೇಹಿ ಐಎಎಸ್ ಅಧಿಕಾರಿ ಎಂದೇ ಹೆಸರುಗಳಿಸಿರುವ ಕೆ.ಎ ದಯಾನಂದ್ ಅವರನ್ನು ಸರಕಾರ ನೇಮಕಗೊಳಿಸುವ ಸಾಧ್ಯತೆ ‌ಇದೆ ಎಂದು ಮೂಲಗಳು ತಿಳಿಸಿವೆ.

ಸರಳ ವ್ಯಕ್ತಿತ್ವದ ದಯಾನಂದ್ ಅವರ ಪ್ರಮಾಣಿಕ ಹಾಗೂ ಸಾರ್ವಜನಿಕ ಸ್ನೇಹಿ ನಿರ್ಧಾರಗಳಿಂದ ಸೇವೆ ಸಲ್ಲಿಸಿರುವ ಕ್ಷೇತ್ರಗಳಲ್ಲಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿರುವುದು ಇವರ ವಿಶೇಷ. ಇವರು ಕಳೆದ ಅನೇಕ ಸಮಯದಿಂದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

2007ರಲ್ಲಿ ಜುಲೈನಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿ. 2009ರಿಂದ ಬೆಂಗಳೂರಿನ ಬಿಡಿಎ ಕಚೇರಿಯಲ್ಲಿ ಕೆಲಸ 2011ರಲ್ಲಿ ಪುನಃ ಚಿಕ್ಕಮಗಳೂರು ಉಪವಿಭಾಗಾಧಿಕಾರಿಯಾಗಿ ನಂತರ ಮಂಗಳೂರಿನಲ್ಲಿ ಎಡಿಸಿಯಾಗಿ ಕಾರ್ಯ ನಿರ್ವಹಿಸಿದರು. 2014ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದರು. ಬಳಿಕ ಐಎಎಸ್‍ಗೆ ಉನ್ನತೀಕರಣವಾಯಿತು.

ನಂತರ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ, ಬೆಂಗಳೂರು ಗ್ರಾಮಾಂತರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಪ್ರಸ್ತುತ ಇವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರಕಾರ ಇವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸುವ ಎಲ್ಲಾ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಮಂಗಳೂರು: ಕೋವಿಡ್ -19 ಸೋಂಕು ತಡೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು...

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯಿಂದ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ಅಂಗಡಿ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮತ್ತೆ ನಾಲ್ಕು ಪ್ರಕರಣಗಳಲ್ಲಿ ಕೋವಿಡ್-19 ಸೋಂಕು...

ಬೀಜಿಂಗ್‌: ಕೋವಿಡ್ 19 ಸೋಂಕಿನಿಂದ ಆರ್ಥಿಕ ಕ್ಷೇತ್ರ, ಉದ್ಯಮ ಕ್ಷೇತ್ರ, ಷೇರು ಮಾರುಕಟ್ಟೆ,...


ಮಂಗಳೂರು; ನಗರದಲ್ಲಿ ಸರಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಏಳು ಜನರನ್ನು...

ಮಂಗಳೂರು: ಅಪಾಯಕಾರಿ ಕೋವಿಡ್-19 ಸೋಂಕು ಹರಡದಂತೆ ಮಂಜಾಗೃತಾ ಕ್ರಮವಾಗಿ ಮುಖ್ಯಮಂತ್ರಿ ಬಿ ಎಸ್...


ಬೆಂಗಳೂರು: ಕೋವಿಡ್ 19 ವೈರಸ್ ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್...

ಹೊಸದಿಲ್ಲಿ: ಅಪಾಯಕಾರಿ ಕೋವಿಡ್-19 ಸೊಂಕಿತರ ಪ್ರಮಾಣ ದೇಶದಲ್ಲಿ ಹೆಚ್ಚುತ್ತಿದ್ದು, ಹಲವು ರಾಜ್ಯಗಳು...


Copyright 2019 www.policevarthe.com | All Right Reserved
error: Content is protected !!