Monday, March 30 , 2020 8:56 PM

ಕ್ರೈಂ
ಕಳವು ಪ್ರಕರಣದಲ್ಲಿ ಗ್ರಾಮ ಕರಣಿಕನ ಕಾರ್ನಿಕ!, ನಟೋರಿಯಸ್ ಕಳ್ಳನ ಜತೆಗಿನ ನಂಟೇನು?!1279

Posted By; Ranjith Madanthyar

ಮಂಗಳೂರು; ನಗರದ ಬಲ್ಮಠ-ಬೆಂದೂರ್ ವೆಲ್ ರಸ್ತೆಯಲ್ಲಿರುವ ಅಪಾರ್ಟ್ಮೆಂಟಿನ ಕಳ್ಳತನ ಪ್ರಕರಣಕ್ಕೆ ಇದೀಗ ಹೊಸ ಟ್ವೀಸ್ಟ್ ಸಿಕ್ಕಿದೆ. ಹೌದು ಈ ಪ್ರಕರಣದಲ್ಲಿ ಕೆಲ ಕಾಣದ ಕೈಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ನಗರದ ಬಲ್ಮಠ- ಬೆಂದೂರ್ ವೆಲ್ ರಸ್ತೆಯಲ್ಲಿರುವ ಅನೀತಾ ಎನ್. ಶೆಟ್ಟಿಯವರ ಮನೆಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಟ್ಟು ಎಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ನಂತರ ಮತ್ತೊಬ್ಬ ಆರೋಪಿಯನ್ನು ಕೂಡ ಬಂಧಿಸಲಾಗಿತ್ತು. ನವೆಂಬರ್ ತಿಂಗಳಿನಲ್ಲಿ ಈ ಕಳ್ಳತನ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಂಗಳೂರು ಕದ್ರಿ ಶಿವಭಾಗ್ ನ ರಾಕೇಶ್ ಬೋನಿಪಾಸ್ ಡಿ” ಸೋಜಾ (೩೭ ವರ್ಷ), ಗೋವಾ ಮಾಡಗಾಂವ್ ನ ಅಶೋಕ್ ಬಂಡ್ರಗಾರ್ (೩೬ ವರ್ಷ), ಗಣೇಶ್ ಬಾಪು ಪರಾಬ್ (೩೭ ವರ್ಷ), ಮಂಗಳೂರು ಬೆಂದೂರ್ ವೆಲ್ ನ ಶಾಹೀರ್ ಮೊಹಮ್ಮದ್ (೪೩ ವರ್ಷ), ಮಂಗಳೂರು ಕೊಲ್ಯ ಜನಾರ್ಧನ ಆಚಾರ್ಯ (೪೧ ವರ್ಷ), ಮಂಗಳೂರು ಮಂಗಳಾ ನಗರ, ಮಂಗಳಾದೇವಿಯ ಚಂದನ್ ಆಚಾರ್ಯ (೪೪ ವರ್ಷ), ಮಂಗಳೂರು ಕೊಟೆಕಾರ್ ನ ಪುರುಷೊತ್ತಮ್ ಆಚಾರ್ಯ (೪೬ ವರ್ಷ) ರವರನ್ನು ಬಂಧಿಸಲಾಗಿತ್ತು. ಮಾತ್ರವಲ್ಲದೇ ಬಂಧಿತರಿಂದ ಸುಮಾರು ಅಂದಾಜು ೩೪ ಲಕ್ಷ ರೂ ಮೊತ್ತದ ಚಿನ್ನ ಹಾಗೂ ವಜ್ರ, ಕೃತ್ಯಕ್ಕೆ ಉಪಯೋಗಿಸಿದ ಒಂದು ಆಲ್ಟೊ ಕಾರ್, ೧ ಹುಂಡೈ ಕಾರ್, ಮೋಟಾರ್ ಸೈಕಲ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಕದ್ರಿ ಪೊಲೀಸ್ ಠಾಣೆಯ ಇನ್ಸ್ ಫೆಕ್ಟರ್ ಶಾಂತರಾಮ್ ಕುಂದರ್ ಅವರು ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ.

ಆದರೆ ಈ ಪ್ರಕರಣದಲ್ಲಿ ಕೆಲ ಕಾಣದ ಕೈಗಳ ಕೈವಾಡ ನಡೆದಿರುವುದು ಮಾತ್ರ ಸತ್ಯ. ಈ ಪ್ರಕರಣ ನಡೆದು ಕೆಲ ವಾರಗಳು ನಡೆದರು ಆರೋಪಿಗಳ ಬಂಧನವಾಗಿರಲಿಲ್ಲ. ಆದರೆ ಪೊಲೀಸರು ಏನು ಕೈ ಕಟ್ಟಿಕೂಳಿತ್ತಿರಲಿಲ್ಲ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಲೇ ಇತ್ತು. ಈ ವೇಳೆ ಆರೋಪಿಗಳ ಬಗ್ಗೆ ಒಂದು ಸುಳಿವು ಲಭ್ಯವಾಗಿತ್ತು. ಪ್ರಕರಣದ ಬೆನ್ನುಬಿದ್ದ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ಬಂಧನದ ಸುದ್ದಿಯಾಗುತ್ತಿದ್ದಂತೆ ನಗರದ ಬಿಜೈ-ಕಾಪಿಕಾಡುವಿನ ಆನೆಗುಂಡಿ ಎಂಬಲ್ಲಿ ಪಟಾಕಿ ಸಿಡಿಸಿ ಕೆಲ ಯುವಕರು ಸಂಭ್ರಮಿಸಿದ್ದರು. ಆದರೆ ಆರೋಪಿಯ ಬಂಧನಕ್ಕೂ ಯುವಕರು ಪಟಾಕಿ ಸಿಡಿಸಿರುವುದಕ್ಕೂ ಏನು ಸಂಬಂಧ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿತ್ತು. ಪೊಲೀಸರು ಬಂಧನ ಮಾಡಿರುವ ಏಳು ಮಂದಿ ಆರೋಪಿಗಳ ಪೈಕಿ ಪ್ರಮುಖ ಆರೋಪಿಯಾಗಿದ್ದ ಶಾಹೀರ್ ಮೊಹಮ್ಮದ್ ನ ಬಂಧನಕ್ಕಾಗಿ ಈ ಯುವಕರು ಸಂಭ್ರಮಿಸಿದ್ದರು. ಹೌದು ಶಾಹೀರ್ ಮೊಹಮ್ಮದ್ ಆನೆಗುಡಿಯಲ್ಲಿರುವ ವ್ಯಕ್ತಿಯೊಬ್ಬರ ಮನೆಯಲ್ಲಿ ಮಧ್ಯರಾತ್ರಿವರೆಗೆ ತನ್ನ ತಂಡವೊಂದನ್ನು ಕಟ್ಟಿಕೊಂಡು ಗದ್ದಲ, ಗಲಾಟೆ ನಡೆಸಿಕೊಂಡು ಸೆಡ್‌ವೊಂದರಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡುತ್ತ ಅಲ್ಲಿನ ನಾಗರಿಕರಿಗೆ ಬಹುದೊಡ್ಡ ತಲೆ ನೋವು ಆಗಿದ್ದ ಆತನ ಬಂಧನವೇ ಅಲ್ಲಿನ ಜನರಿಗೆ ಸಮಭ್ರಮವಾಗಿತ್ತು.

ಈ ಆರೋಪಿಯ ಬಂಧನದ ಖುಷಿಗಾಗಿ ಇಲ್ಲಿನ ಜನ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ ಎಂದಾದರೆ ಇಲ್ಲಿನ ಜನರು ಇತಂಹ ಕೀಡಿಗೇಡಿಗಳ ಉಪಟಳದಿಂದ ಎಷ್ಟು ಹಿಂಸೆ ಅನುಭವಿಸಿರಬಹುದು. ಒಟ್ಟಿನಲ್ಲಿ ಶಾಹೀರ್ ಮೊಹಮ್ಮದ್ ನ ಬಂಧನದಿಂದ ಇಲ್ಲಿನ ಜನರು ಋಷಿ ಪಟ್ಟಿದಂತು ನಿಜ. ಇನ್ನೂ ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಶಾಹೀರ್ ಮೊಹಮ್ಮದ್ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ವ್ಯಕ್ತಿಯೊಬ್ಬ ಆತ್ಮೀಯ ಸ್ನೇಹಿತನಾಗಿದ್ದ, ಅದು ಎಷ್ಟರಮಟ್ಟಿಗೆ ಇತ್ತು ಎಂದರೆ ಒಬ್ಬ ಸರಕಾರಿ ಅಧಿಕಾರಿಯಾಗಿ ಇತಂಹ ಕಳ್ಳತನ ಸಹಿತ ಮೂರು, ನಾಲ್ಕು ಪ್ರಕರಣದ ಆರೋಪಿಯ ಜೊತೆಗೆ ಬಹಳ ಸಂಪರ್ಕ ಇಟ್ಟುಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ. ಆರೋಪಿ ಶಾಹೀರ್ ಮೊಹಮ್ಮದ್ ನ ಕಾರು ಈ ಸರಕಾರಿ ಅಧಿಕಾರಿ ( ಗ್ರಾಮಕರಣಿಕ) ಧರ್ಮ ಸಾಮ್ರಾಜ್ಯ ಎಂಬಾತನ ಜೊತೆಯಲ್ಲಿ ಇತ್ತು. ಗ್ರಾಮಕರಣಿಕ (V.A) ಧರ್ಮ ಸಾಮ್ರಾಜ್ಯ ನ ಕಾರು ಕಳ್ಳತನ ಪ್ರಕರಣದ ಆರೋಪಿ ಶಾಹೀರ್ ಮೊಹಮ್ಮದ್ ನ ಜೊತೆಗೆ ಪತ್ತೆಯಾಗಿತ್ತು. ಈ ಕಾರಿಗೆ  ಟಿಂಟ್ ಹಾಕಲಾಗಿತ್ತು. ಇಷ್ಟು ಮಾತ್ರವಲ್ಲದೇ ಧರ್ಮ ಸಾಮ್ರಾಜ್ಯ ಎಂಬಾತನ ಹೊಸ ಕಾರು ಆಗಿದ್ದು, ಸುಮಾರು ತಿಂಗಳುಗಳಿಂದ ಈ ಕಾರಿಗೆ ನಂಬರ್ ಪ್ಲೇಟ್ ಆಗಿರಲಿಲ್ಲ. ಇನ್ನೂ ಒಬ್ಬ ಸರಕಾರಿ ಇಲಾಖೆಯಲ್ಲಿ ಅಧಿಕಾರಿ ಕಾನೂನು ಪಾಲನೆ ಮಾಡದೇ ನಂಬರ್ ಪ್ಲೇಟ್ ಕೂಡ ಹಾಕದೇ ಇಷ್ಟು ಸಮಯ ಸಂಬಂಧ ಪಟ್ಟ ಯಾವ ಅಧಿಕಾರಿಯ ಕಣ್ಣಿಗೂ ಬಿಳದೇ ಇರುವುದು ಕೂಡ ವಿಪರ್ಯಾಸವೇ.

ಇನ್ನೂ  ಶಾಹೀರ್ ಮೊಹಮ್ಮದ್ ನ ಬಂಧನದ ನಂತರ ಧರ್ಮ ಸಾಮ್ರಾಜ್ಯನ ವಾಹನ, ಆರೋಪಿಯ ಜೊತೆಗೆ ಪತ್ತೆಯಾಗಿದ್ದರು. ಯಾವ ಪ್ರಕಟಣೆಗಳಲ್ಲಿ ಕೂಡ ಈ ವಿಚಾರವೇ ಹೊರಬರಲಿಲ್ಲ. ಆರೋಪಿಯೊಬ್ಬನಿಗೆ ನೀರು ಕೊಟ್ಟರು ತಪ್ಪು ಎನ್ನುವ ಕಾನೂನಿನ ಮುಂದೆ. ಧರ್ಮ ಸಾಮ್ರಾಜ್ಯ ಒಬ್ಬ ಸರಕಾರಿ ಅಧಿಕಾರಿ ಎಂದ ಮಾತ್ರಕ್ಕೆ ಕಾನೂನು ಬದಲಾವಣೆ ಮಾಡಲಾಯಿತಾ?!. ಅಥವಾ ಆರೋಪಿಗೆ ಸಹಾಯ ಮಾಡಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಈ ಅಧಿಕಾರಿಯನ್ನು ಕೂಡ ಬಂಧನ ಮಾಡಲಾಗುತ್ತ ಎಂದು ಕಾದು ನೋಡಬೇಕಾಗಿದೆ. ಒಂದು ವೇಳೆ ಧರ್ಮ ಸಾಮ್ರಾಜ್ಯ ಕೇವಲ ಆತನ ಮತ್ತು ನನ್ನ ಕಾರುಗಳನ್ನು ಬದಲಾವಣೆ ಮಾಡಿವುದು ಮಾತ್ರ ಎಂದಾದರೆ. ಇಷ್ಟು ಸಮಯದಿಂದ ಯಾವ ಕಾರಣಕ್ಕೆ ತನ್ನ ಹೆಸರಿಗೆ ಮಾಡುವ ಪ್ರಯತ್ನಕ್ಕೂ ಇಳಿದಿರಲಿಲ್ಲ, ಎನ್ನುವುದು ಒಂದು ಪ್ರಶ್ನೇಯಾದರೆ ಶಾಹೀರ್ ಮಹಮ್ಮದ್‌ಗೂ ಆ ಅಧಿಕಾರಿಗೂ ಯಾವುದೇ ಸಂಪರ್ಕವೇ ಇಲ್ಲ ಎಂದಾದರೆ ಅವರ ಪೋನ್ ಸಂಪರ್ಕಗಳೇ ಸಾಕ್ಷಿಯಾಗಬಹುದೇ ಎನ್ನುವ ಕುತೂಹಲಕಾರಿಯಾದ ಗಂಭೀರ ವಿಚಾರಗಳು ಈ ಪ್ರಕರಣಗಳಲ್ಲಿ ಕಂಡು ಬಂದಿದೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ ಗ್ರಾಮ ಕರಣಿಕ ಧರ್ಮ ಸಾಮ್ರಾಜ್ಯ ಅವರ ವಿಚಾರ ಕೂಡ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಮಂಗಳೂರು: ಕೋವಿಡ್ -19 ಸೋಂಕು ತಡೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು...

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯಿಂದ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ಅಂಗಡಿ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮತ್ತೆ ನಾಲ್ಕು ಪ್ರಕರಣಗಳಲ್ಲಿ ಕೋವಿಡ್-19 ಸೋಂಕು...

ಬೀಜಿಂಗ್‌: ಕೋವಿಡ್ 19 ಸೋಂಕಿನಿಂದ ಆರ್ಥಿಕ ಕ್ಷೇತ್ರ, ಉದ್ಯಮ ಕ್ಷೇತ್ರ, ಷೇರು ಮಾರುಕಟ್ಟೆ,...


ಮಂಗಳೂರು; ನಗರದಲ್ಲಿ ಸರಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಏಳು ಜನರನ್ನು...

ಮಂಗಳೂರು: ಅಪಾಯಕಾರಿ ಕೋವಿಡ್-19 ಸೋಂಕು ಹರಡದಂತೆ ಮಂಜಾಗೃತಾ ಕ್ರಮವಾಗಿ ಮುಖ್ಯಮಂತ್ರಿ ಬಿ ಎಸ್...


ಬೆಂಗಳೂರು: ಕೋವಿಡ್ 19 ವೈರಸ್ ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್...

ಹೊಸದಿಲ್ಲಿ: ಅಪಾಯಕಾರಿ ಕೋವಿಡ್-19 ಸೊಂಕಿತರ ಪ್ರಮಾಣ ದೇಶದಲ್ಲಿ ಹೆಚ್ಚುತ್ತಿದ್ದು, ಹಲವು ರಾಜ್ಯಗಳು...


Copyright 2019 www.policevarthe.com | All Right Reserved
error: Content is protected !!