Tuesday, June 2 , 2020 3:43 PM

ಕ್ರೈಂ












ಸಿಎಎ ಭಾರತವನ್ನು ಭಾರತೀಯರನ್ನು ರಕ್ಷಿಸುವ ಉದ್ದೇಶವಿದೆಯೇ ಹೊರತು, ಮುಸ್ಲಿಮರನ್ನು ಭಾರತದಿಂದ ಹೊರಕಳಿಸುವ ಉದ್ದೇಶವಿಲ್ಲ; ರಾಮ್ ಮಾಧವ್



95

ಮಂಗಳೂರು: ಸಿಎಎ ಕೋಮು ವಿರೋಧಿ ಕಾಯ್ದೆಯಲ್ಲ. ಈ ಕಾಯ್ದೆಯ ಮೂಲಕ ಭಾರತವನ್ನು ಭಾರತೀಯರನ್ನು ರಕ್ಷಿಸುವ ಉದ್ದೇಶವಿದೆಯೇ ಹೊರತು, ಮುಸ್ಲಿಮರನ್ನು ಭಾರತದಿಂದ ಹೊರಕಳಿಸುವ ಉದ್ದೇಶವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದರು.

ನಗರದ ಉರ್ವ ಕೆನರಾ ಪ್ರೌಢಶಾಲೆಯ ಮಿಜಾರು ಗೋವಿಂದ ಪೈ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಸಿಎಎ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮ್ ಮಾಧವ್, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಸ್ವಾತಂತ್ರ್ಯ, ಹಕ್ಕು ಇಲ್ಲ. ಆದರೆ ಭಾರತದಲ್ಲಿ ಎಲ್ಲಾ ಅಲ್ಪಸಂಖ್ಯಾತರಿಗೂ ಸ್ವಾತಂತ್ರ್ಯ, ಭದ್ರತೆ ಹಾಗೂ ಹಕ್ಕು ಇದೆ. ಆದ್ದರಿಂದ ಸಿಎಎ ಕಾಯ್ದೆಯ ಪ್ರಕಾರ ಮುಸ್ಲಿಂರನ್ನು ದೇಶದಿಂದ ಹೊರಕಳಿಸಲಾಗುತ್ತದೆ ಎಂಬ ತಪ್ಪು ಕಲ್ಪನೆಯಿಂದ ಎಲ್ಲರೂ ಹೊರ ಬರಬೇಕಿದೆ ಎಂದು ಹೇಳಿದರು.

ಸಿಎಎ ವಿರುದ್ಧ ಬಹಳಷ್ಟು ಪ್ರತಿಭಟನೆಗಳು ನಡೆಯುತ್ತಿವೆ. ಆದರೆ, ಬಹಳಷ್ಟು ಪ್ರತಿಭಟನಾಕಾರರಿಗೆ ತಾವು ಯಾವುದರ ವಿರುದ್ಧ ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಅರಿವೇ ಇರುವುದಿಲ್ಲ. ಸುಲಭವಾಗಿ ಜನರ ದಾರಿ ತಪ್ಪಿಸುವ ಕೆಲಸ ನಡೆಸಲಾಗುತ್ತದೆ. ಈ ಕಾಯ್ದೆಯ ವಿರುದ್ಧ ನಡೆಯುತ್ತಿರುವ ಎಲ್ಲಾ ಪ್ರತಿಭಟನೆಗಳ ಹಿಂದೆ ರಾಜಕೀಯ ವ್ಯಕ್ತಿಗಳ ಕುಮ್ಮಕ್ಕು ಇದೆ. ಆದರೆ, ಇದು ಕೋಮುವಾದಿಯಲ್ಲದ ಕಾಯ್ದೆ ಎಂಬುದು ಸ್ಪಷ್ಟ ಎಂದು ರಾಮ್ ಮಾಧವ್ ಹೇಳಿದರು

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಉಡುಪಿ: ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಕೋವಿಡ್-19 ಸೋಂಕಿತರ ಸಂಖ್ಯೆ ಇಂದು ಉಡುಪಿಯಲ್ಲಿ ದೃಢವಾಗಿದೆ....

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮಂಗಳವಾರದಂದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ...


ಬೆಂಗಳೂರು: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಿಯಕರನ ವಿರುದ್ಧ ಕಿರುತೆರೆ ನಟಿಯೊಬ್ಬರು...

ಮಂಗಳೂರು: ದುಬಾೖಯಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ...


ಮಂಗಳೂರು: ಜಿಲ್ಲಾ ನ್ಯಾಯಾಲಯಗಳಲ್ಲಿ ಜೂ.1ರಿಂದ ಕೋರ್ಟ್‌ ಕಲಾಪ ಆರಂಭಿಸಬಹುದೆಂದು ಹೈಕೋರ್ಟ್‌ ತಿಳಿಸಿದ್ದರಿಂದ...

ಮಂಗಳೂರು: ಮಹಾರಾಷ್ಟ್ರದಿಂದ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವತಿಗೆ ಕೋವಿಡ್-19 ಸೋಂಕು...


ಮಂಗಳೂರು: ಕೋವಿಡ್-19 ಸೋಂಕಿನ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ....

ಮಂಗಳೂರು: ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಆಗಮಿಸಿದ ಎಂಟು ಜನರ...


Copyright 2019 www.policevarthe.com | All Right Reserved
error: Content is protected !!