Monday, March 30 , 2020 9:40 PM

ಕ್ರೈಂ












ತುಳುನಾಡಿನ ಕಂಬಳದ ‘ರನ್’ವೀರ ಶ್ರೀನಿವಾಸ ಗೌಡ



58

ಮಂಗಳೂರು: ಸಾಂಪ್ರದಾಯಿಕ ಸ್ಪರ್ಶದ ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ 100 ಮೀಟರ್ ಓಟವನ್ನು 9.55 ಸೆಕೆಂಡ್‌ಗಳಲ್ಲಿ ಕ್ರಮಿಸಿರುವ ಅಶ್ವತ್ಥಪುರ ಶ್ರೀನಿವಾಸ ಗೌಡ ಈಗ ನವತಾರೆ. ಕಂಬಳ ಕ್ಷೇತ್ರದಲ್ಲಿ ಓಟಗಾರನಾಗಿ ಹಲವು ವರ್ಷಗಳಿಂದ ಗುರುತಿಸಿಕೊಂಡು ಹೆಸರು ಮಾಡಿರುವ ಶ್ರೀನಿವಾಸ ಗೌಡ(ಸೀನು), ಈಗ ಮಾಡಿರುವುದು ಸಾರ್ವಕಾಲಿಕ ದಾಖಲೆ. ಫೆ.1ರಂದು ನಡೆದ ಐಕಳಬಾವ ಕಾಂತಬಾರೆ ಬೂದಬಾರೆ ಜೋಡುಕರೆ ಕಂಬಳದಲ್ಲಿ ಇವರು ಇರುವೈಲು ಪಾಣಿಲ ಬಾಡ ಪೂಜಾರಿ ಅವರ ಕೋಣಗಳೊಂದಿಗೆ ನೇಗಿಲು ಹಿರಿಯ ವಿಭಾಗದಲ್ಲಿ 142.50 ಮೀಟರ್ ಉದ್ದದ ಕರೆಯಲ್ಲಿ 13.62 ಸೆಕೆಂಡ್‌ಗಳಲ್ಲಿ ಓಡಿದ್ದಾರೆ.

ಇದನ್ನು 100 ಮೀಟರ್‌ಗೆ ಬದಲಾಯಿಸಿದರೆ 9.55 ಸೆಕೆಂಡ್‌ಗಳಲ್ಲಿ ಓಡಿದಂತಾಗುತ್ತದೆ. ಇಷ್ಟು ವೇಗದಲ್ಲಿ ಇದುವರೆಗೆ ಕಂಬಳ ಕರೆಯಲ್ಲಿ ಯಾರೂ ಓಡಿರುವ ದಾಖಲೆ ಇಲ್ಲ. ಈ ಹಿಂದಿನ ದಾಖಲೆಗಳತ್ತ ಗಮನ ಹರಿಸಿದಾಗ ಆನಂದ ಇರ್ವತ್ತೂರು ಮತ್ತು ಅಕ್ಕೇರಿ ಸುರೇಶ್ ಅವರು 100 ಮೀ. ದೂರವನ್ನು 9.57 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದಾರೆ. ವಿಶ್ವವಿಖ್ಯಾತ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಟ್ರಾೃಕ್‌ನಲ್ಲಿ 9.58 ಸೆಕೆಂಡ್‌ಗಳಲ್ಲಿ 100 ಮೀ. ಓಡಿರುವುದನ್ನು ಕೆಸರುಗದ್ದೆಯಲ್ಲಿ ಓಡಿರುವ ಶ್ರೀನಿವಾಸ ಗೌಡರು ಮೀರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇದರ ಹೋಲಿಕೆ ಸರಿಯಲ್ಲ ಎಂದು ಕಂಬಳ ಕ್ಷೇತ್ರದ ಪರಿಣತರೇ ಹೇಳುತ್ತಾರೆ.

ಮೂಡುಬಿದಿರೆ ಸಮೀಪದ ಮಿಜಾರು ನಿವಾಸಿ ಶ್ರೀನಿವಾಸ ಗೌಡ ಓದಿರುವುದು 10ನೇ ತರಗತಿ. ವಯಸ್ಸು 28. ವೃತ್ತಿಯಲ್ಲಿ ಕಟ್ಟಡ ಕಂಟ್ರಾೃಕ್ಟರ್-ಮೇಸ್ತ್ರಿ. ನವೆಂಬರ್‌ನಿಂದ ಮಾರ್ಚ್‌ವರೆಗೆ ಕಂಬಳದಲ್ಲಿ ಭಾಗವಹಿಸಿ ಉಳಿದ ಅವಧಿಯಲ್ಲಿ ಕಟ್ಟಡ ಸಹಿತ ಇತರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಪಡಿವಾಲ್ಸ್‌ನವರ ಕೋಣಗಳನ್ನು ಸಾಕುವುದು ಇವರೇ. ಇವರದ್ದು ಮೇಲ್ನೋಟಕ್ಕೆ ಜಿಮ್‌ಗಳಲ್ಲಿ ದೇಹವನ್ನು ದಂಡಿಸಿದಂತೆ ಕಾಣುವ ಮೈಕಟ್ಟು. ಕಂಬಳದಲ್ಲಿ ಬರಿಮೈಯಲ್ಲಿ ಓಡುವ ಕಟ್ಟುಮಸ್ತಿನ ದೇಹವನ್ನು ನೋಡಿ ಮೆಚ್ಚುಗೆ ಸೂಸದವರಿಲ್ಲ. ಇರುವೈಲು ಪಾಣಿಲ, ಮೂಡುಬಿದಿರೆ ನ್ಯೂ ಪಡಿವಾಲ್ಸ್, ಮಿಜಾರು ಪ್ರಸಾದ್ ನಿಲಯ, ಪದವು ಕಾನಡ್ಕ ಇವರ ಕೋಣಗಳನ್ನು ನೇಗಿಲು ಮತ್ತು ಹಗ್ಗ ವಿಭಾಗಗಳಲ್ಲಿ ಕಂಬಳಗಳಲ್ಲಿ ಓಡಿಸುವ ಶ್ರೀನಿವಾಸ್ ಗೌಡ ಸಾಮಾನ್ಯವಾಗಿ ಪ್ರತಿ ಕಂಬಳದಲ್ಲಿ 22 ಬಾರಿ ಓಡುತ್ತಾರೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಮಂಗಳೂರು: ಕೋವಿಡ್ -19 ಸೋಂಕು ತಡೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು...

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯಿಂದ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ಅಂಗಡಿ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮತ್ತೆ ನಾಲ್ಕು ಪ್ರಕರಣಗಳಲ್ಲಿ ಕೋವಿಡ್-19 ಸೋಂಕು...

ಬೀಜಿಂಗ್‌: ಕೋವಿಡ್ 19 ಸೋಂಕಿನಿಂದ ಆರ್ಥಿಕ ಕ್ಷೇತ್ರ, ಉದ್ಯಮ ಕ್ಷೇತ್ರ, ಷೇರು ಮಾರುಕಟ್ಟೆ,...


ಮಂಗಳೂರು; ನಗರದಲ್ಲಿ ಸರಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಏಳು ಜನರನ್ನು...

ಮಂಗಳೂರು: ಅಪಾಯಕಾರಿ ಕೋವಿಡ್-19 ಸೋಂಕು ಹರಡದಂತೆ ಮಂಜಾಗೃತಾ ಕ್ರಮವಾಗಿ ಮುಖ್ಯಮಂತ್ರಿ ಬಿ ಎಸ್...


ಬೆಂಗಳೂರು: ಕೋವಿಡ್ 19 ವೈರಸ್ ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್...

ಹೊಸದಿಲ್ಲಿ: ಅಪಾಯಕಾರಿ ಕೋವಿಡ್-19 ಸೊಂಕಿತರ ಪ್ರಮಾಣ ದೇಶದಲ್ಲಿ ಹೆಚ್ಚುತ್ತಿದ್ದು, ಹಲವು ರಾಜ್ಯಗಳು...


Copyright 2019 www.policevarthe.com | All Right Reserved
error: Content is protected !!