Tuesday, June 2 , 2020 4:02 PM

ಕ್ರೈಂ












ಕೋವಿಡ್ 19 ಭೀತಿ :ಬೀಜಿಂಗ್‌ನಲ್ಲಿ ಡೈವೋರ್ಸ್‌ ಪಡೆದುಕೊಳ್ಳುವವರ ಸಂಖ್ಯೆಲ್ಲಿ ಗಣನೀಯ ಏರಿಕೆ



262

ಬೀಜಿಂಗ್‌: ಕೋವಿಡ್ 19 ಸೋಂಕಿನಿಂದ ಆರ್ಥಿಕ ಕ್ಷೇತ್ರ, ಉದ್ಯಮ ಕ್ಷೇತ್ರ, ಷೇರು ಮಾರುಕಟ್ಟೆ, ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಹೆಚ್ಚುತ್ತದೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಸಂಬಂಧಗಳು ದೂರವಾಗುವ ಭೀತಿ ಕಾಡುತ್ತಿದ್ದು, ಅಂತಹ ಪರಿಸ್ಥಿತಿಗೆ ಬೀಜಿಂಗ್‌ ಸಾಕ್ಷಿಯಾಗಿದೆ.

ಹೌದು ಇಡೀ ವಿಶ್ವವೇ ಬೆಚ್ಚಿ ಬೀಳಿಸಿರುವ ಕೋವಿಡ್‌-19 ಬೀಜಿಂಗ್‌ನಲ್ಲಿ ಒಂದು ವಿಚಿತ್ರ ಘಟನೆಗೆ ಕಾರಣವಾಗಿದ್ದು, ಕೋವಿಡ್ 19 ಸೋಂಕು ಹಾವಳಿಯಿಂದಾಗಿ ಚೀನದಲ್ಲಿ ಡೈವೋರ್ಸ್‌ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎಂದು ಸುದ್ದಿಯಾಗಿದೆ.

ಡ್ರಾಗನ್‌ ದೇಶದಲ್ಲಿ ಅತಿ ಹೆಚ್ಚು ಕೋವಿಡ್ 19 ಸೋಂಕಿತ ಪ್ರಕರಣ ಕಂಡು ಬಂದಿರುವ ಕಾರಣ ಅವರು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ ಉಂಟಾಗಿತ್ತು. ಹೀಗಾಗಿ ಗಂಡ-ಹೆಂಡತಿ ನಡುವೆ ಅನೇಕ ರೀತಿಯ ಮುನಿಸು, ಮನಸ್ತಾಪ ಉಂಟಾಗಿ ಡೈವೋರ್ಸ್‌ ಕೇಸ್‌ಗಳು ಜಾಸ್ತಿಯಾಗಿವೆ ಎಂದು ವರದಿಯಾಗಿದೆ.

1ದಿನದಲ್ಲಿ 300 ಡಿವೋರ್ಸ್‌ ಕೇಸ್‌; ಈ ವಿಷಯಕ್ಕೆ ಸಂಬಂಧಿಸಿದಂತೆ ಚೀನದ ಮದುವೆ ನೋಂದಣಿ ಕಚೇರಿ ಮಾಹಿತಿ ನೀಡಿದ್ದು, ಫೆ.24ರಂದು ಒಂದೇ ಕೇಂದ್ರದಲ್ಲಿ ಬರೋಬ್ಬರಿ 300 ಡಿವೋರ್ಸ್‌ ಕೇಸ್‌ಗಳು ಬಂದಿವೆ ಎಂದು ತಿಳಿಸಿದೆ.

ಹೊಂದಾಣಿಕೆ ಆಗದ ಕಾರಣ ಈ ನಿರ್ಧಾರ; ಚೀನದಲ್ಲಿ ಕೊರೊನಾ ತಡೆಗಟ್ಟಲು ಹಲವು ನಗರಗಳ ಮೇಲೆ ನಿರ್ಬಂಧ ಹೇರಿ ಮನೆಯಿಂದ ಹೊರಗಡೆ ಬರದಂತೆ ದಿಗ್ಬಂಧನ ಹಾಕಲಾಗಿತ್ತು. ಈ ವೇಳೆ ಲಕ್ಷಾಂತರ ಜನರು ಅನೇಕ ದಿನಗಳ ಕಾಲ ಮನೆಯಲ್ಲಿ ಕಳೆದಿದ್ದು, ಅವರ ನಡುವೆ ಹೊಂದಾಣಿಕೆ ಇಲ್ಲದೇ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಉಡುಪಿ: ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಕೋವಿಡ್-19 ಸೋಂಕಿತರ ಸಂಖ್ಯೆ ಇಂದು ಉಡುಪಿಯಲ್ಲಿ ದೃಢವಾಗಿದೆ....

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಮಂಗಳವಾರದಂದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ...


ಬೆಂಗಳೂರು: ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಿಯಕರನ ವಿರುದ್ಧ ಕಿರುತೆರೆ ನಟಿಯೊಬ್ಬರು...

ಮಂಗಳೂರು: ದುಬಾೖಯಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗದೆ ಹೊಟ್ಟೆಯಲ್ಲೇ...


ಮಂಗಳೂರು: ಜಿಲ್ಲಾ ನ್ಯಾಯಾಲಯಗಳಲ್ಲಿ ಜೂ.1ರಿಂದ ಕೋರ್ಟ್‌ ಕಲಾಪ ಆರಂಭಿಸಬಹುದೆಂದು ಹೈಕೋರ್ಟ್‌ ತಿಳಿಸಿದ್ದರಿಂದ...

ಮಂಗಳೂರು: ಮಹಾರಾಷ್ಟ್ರದಿಂದ ಆಗಮಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಯುವತಿಗೆ ಕೋವಿಡ್-19 ಸೋಂಕು...


ಮಂಗಳೂರು: ಕೋವಿಡ್-19 ಸೋಂಕಿನ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಬಲಿಯಾಗಿದೆ....

ಮಂಗಳೂರು: ದೋಣಿಯ ಮೂಲಕ ಅಕ್ರಮವಾಗಿ ಕೇರಳದಿಂದ ಮಂಗಳೂರಿಗೆ ಆಗಮಿಸಿದ ಎಂಟು ಜನರ...


Copyright 2019 www.policevarthe.com | All Right Reserved
error: Content is protected !!