Monday, March 30 , 2020 9:18 PM

ಕ್ರೈಂ












ಆಹಾರವನ್ನು ಬಾಳೆ ಎಲೆಯಲ್ಲಿ ಕಟ್ಟುವುದು ಕರಾವಳಿಯ ಸಂಪ್ರದಾಯ! ಪ್ಲಾಸ್ಟಿಕ್ ಬದಲು ಬಾಳೆ ಎಲೆ ಬಳಸಿ; ವೇದವ್ಯಾಸ್ ಕಾಮತ್ ಮನವಿ



390

ಮಂಗಳೂರು: ಝೊಮೊಟೋ, ಸ್ವಿಗ್ಗಿ, ಊಬರ್ ಈಟ್ಸ್ ಮೂಲಕ ಆರ್ಡರ್‌ ಮಾಡಿ ಆಹಾರವನ್ನು ಮನೆ ಬಾಗಿಲಿಗೆ ತರಿಸುವುದು ಈಗ ಟ್ರೆಂಡ್ ಆಗಿದೆ. ಇದರಲ್ಲಿ ಬರುವ ಆಹಾರಗಳು ಪ್ಲಾಸ್ಟಿಕ್ ಕವರ್ ಗಳಲ್ಲಿ ಪ್ಯಾಕ್ ಆಗಿಬರುವುದೇ ಹೆಚ್ಚು. ಇದನ್ನು ಗಮನಿಸಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಪ್ಲಾಸ್ಟಿಕ್ ಬದಲು ಬಾಳೆ ಎಲೆ ಉಪಯೋಗಿಸಿ ಎಂದು ಝೊಮೊಟೋ, ಸ್ವಿಗ್ಗಿ, ಊಬರ್ ಈಟ್ಸ್ ಗೆ ಮನವಿ ಮಾಡಿದ್ದಾರೆ.

ಆಹಾರವನ್ನು ಬಾಳೆ ಎಲೆಯಲ್ಲಿ ಕಟ್ಟುವುದು ಕರಾವಳಿಯ ಸಂಪ್ರದಾಯ. ಕರಾವಳಿಯ ಹೆಚ್ಚಿನ ಹೋಟೆಲ್ ಗಳಲ್ಲಿ ತಿಂಡಿ ಅಥವಾ ಊಟವನ್ನು ಬಾಳೆ ಎಲೆಯಲ್ಲೇ ಬಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆಹಾರ ಪೊಟ್ಟಣ ಕಟ್ಟಲು ಬಾಳೆ ಎಲೆ ಬಳಸಿ ಎಂದು ಆಹಾರ ಡೆಲಿವರಿ ಸಂಸ್ಥೆಗಳಿಗೆ ಶಾಸಕರು ಮನವಿ ಮಾಡಿದ್ದಾರೆ. ಪರಿಸರ ಸಂರಕ್ಷಣೆಗೆ ಟೊಂಕ ಕಟ್ಟಿರುವ ವೇದವ್ಯಾಸ್ ಕಾಮತ್, ನಗರದಲ್ಲಿ ಪ್ಲಾಸ್ಟಿಕ್ ಹಾವಳಿಯನ್ನು ಕಡಿಮೆ ಮಾಡಲು ಆಹಾರ ಡೆಲಿವರಿ ಸಂಸ್ಥೆಗಳಿಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಲಿಖಿತ ಮನವಿ ಮಾಡಿದ್ದಾರೆ.

ಸಾಂಬಾರು ಪದಾರ್ಥಗಳನ್ನು ಬಿಟ್ಟು ಉಳಿದ ಆಹಾರವನ್ನು ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸುವಂತಹ ಕಾರ್ಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ. ಕರಾವಳಿಯ ಖಾದ್ಯಗಳಾದ ಮೂಡೆ, ಕೊಟ್ಟಿಗೆ, ಗಟ್ಟಿ ಮುಂತಾದುವುಗಳನ್ನು ಬಾಳೆ ಎಲೆಯಲ್ಲಿ ಪ್ಯಾಕ್ ಮಾಡಿಕೊಟ್ಟರೆ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಿದ್ದಾರೆ. ಶಾಸಕರ ಮನವಿಗೆ ಸ್ವಿಗ್ಗಿ ಸಂಸ್ಥೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಕಾರ್ಯಪ್ರವೃತ್ತರಾಗುತ್ತೇವೆ ಎಂದು ಭರವಸೆ ನೀಡಿದೆ. ವೇದವ್ಯಾಸ್ ಅವರ ಪರಿಸರ ಕಾಳಜಿಗೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಮಂಗಳೂರು: ಕೋವಿಡ್ -19 ಸೋಂಕು ತಡೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎರಡು...

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯಿಂದ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ಅಂಗಡಿ...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮತ್ತೆ ನಾಲ್ಕು ಪ್ರಕರಣಗಳಲ್ಲಿ ಕೋವಿಡ್-19 ಸೋಂಕು...

ಬೀಜಿಂಗ್‌: ಕೋವಿಡ್ 19 ಸೋಂಕಿನಿಂದ ಆರ್ಥಿಕ ಕ್ಷೇತ್ರ, ಉದ್ಯಮ ಕ್ಷೇತ್ರ, ಷೇರು ಮಾರುಕಟ್ಟೆ,...


ಮಂಗಳೂರು; ನಗರದಲ್ಲಿ ಸರಕಾರದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಏಳು ಜನರನ್ನು...

ಮಂಗಳೂರು: ಅಪಾಯಕಾರಿ ಕೋವಿಡ್-19 ಸೋಂಕು ಹರಡದಂತೆ ಮಂಜಾಗೃತಾ ಕ್ರಮವಾಗಿ ಮುಖ್ಯಮಂತ್ರಿ ಬಿ ಎಸ್...


ಬೆಂಗಳೂರು: ಕೋವಿಡ್ 19 ವೈರಸ್ ಮಹಾಮಾರಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಲಾಕ್ ಡೌನ್...

ಹೊಸದಿಲ್ಲಿ: ಅಪಾಯಕಾರಿ ಕೋವಿಡ್-19 ಸೊಂಕಿತರ ಪ್ರಮಾಣ ದೇಶದಲ್ಲಿ ಹೆಚ್ಚುತ್ತಿದ್ದು, ಹಲವು ರಾಜ್ಯಗಳು...


Copyright 2019 www.policevarthe.com | All Right Reserved
error: Content is protected !!