Tuesday, January 21 , 2020 9:01 AM

ಕ್ರೈಂ












ಐಎಂಎ ಪ್ರಕರಣದ ವಿಶೇಷ ತನಿಖಾಧಿಕಾರಿ ರಶ್ಮಿ ಮಹೇಶ್ ವರ್ಗಾವಣೆ



296

ಬೆಂಗಳೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸರ್ಕಾರ ರಶ್ಮಿ ಮಹೇಶ್ ಅವರನ್ನ ಬಹುಕೋಟಿ ಐಎಂಎ ವಂಚನೆ ಕೇಸ್​​​ಗೆ ಸಂಬಂಧಿಸಿದಂತೆ ವಿಶೇಷ ಬೆಂಗಳೂರು ಪ್ರಾದೇಶಿಕ ಆಯುಕ್ತೆಯಾಗಿ ನೇಮಕ ಮಾಡಿತ್ತು. ಆದರೆ, ರಶ್ಮಿಯವರನ್ನ ಬಿಜೆಪಿ ಸರ್ಕಾರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿದೆ.

ಐಎಂಎ ಪ್ರಕರಣದಲ್ಲಿ‌ ನಗರದ ಡಿಸಿ ವಿಜಯ್ ಶಂಕರ್ ಮನ್ಸೂರ್​​ಗೆ ಅನುಕೂಲವಾಗುವಂತೆ ವರದಿ ನೀಡಿದ್ದರು ಎಂಬ ಆರೋಪವಿದೆ. ಹೀಗಾಗಿ ಎಸ್ಐಟಿ ಅಧಿಕಾರಿಗಳು ವಿಜಯ್ ಶಂಕರ್ ಅವರನ್ನ ಬಂಧಿಸಿ ಜೈಲಿಗೆ ಕಳಿಸಿದ್ದರು.‌ ನಂತರ ಹೈಕೋರ್ಟ್ ಸೂಚನೆ ಮೇರೆಗೆ ಜುಲೈ 24ರಂದು ರಶ್ಮಿ ಅವರನ್ನು ನೇಮಕ ಮಾಡಲಾಗಿತ್ತು. ಆ ಬಳಿಕ ಐಎಂಎ ಕೇಸ್ ಗೆ ಸಂಬಂಧಿಸಿದ ಎಲ್ಲಾ ಪವರ್ ರಶ್ಮಿ ಅವರಿಗೆ ನೀಡಿ, ಪಿಐಡಿ ಕಾಯ್ದೆಯಡಿ ಕಾರ್ಯ ನಿವರ್ಹಿಸುವಂತೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು.

ಈ ವೇಳೆ ಐಎಂಎ ಕೇಸ್ ತನಿಖೆಗೆ ಕೈ ಜೋಡಿಸಿ ತನಿಖೆಗೆ ಇಳಿದಾಗ ಮನ್ಸೂರ್ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಜಪ್ತಿಯ ಮುಂದಾಳತ್ವ ಪಡೆದಿದ್ರು. ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಕೋಟಿ ಕೋಟಿ ಆಸ್ತಿ ಪತ್ತೆ ಮಾಡಿ, ಒಟ್ಟು 26 ಕಡೆ 279 ಕೋಟಿ ರೂ.ಆಸ್ತಿ ಪಾಸ್ತಿ ಜಪ್ತಿಗೆ ನೋಟಿಫಿಕೇಷನ್ ಹೊರಡಿಸಲಾಗಿತ್ತು. ಆದರೆ, ತನಿಖೆ ಚುರುಕು ಪಡೆಯುತ್ತಿದ್ದಂತೆ ಕೇವಲ 21 ದಿನದಲ್ಲಿ ಏಕಾಏಕಿ ವರ್ಗಾವಣೆ ಮಾಡಿದ್ದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಮಂಗಳೂರು; ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್‌ವೊಂದು ಪತ್ತೆಯಾದ...

ಉಳ್ಳಾಲ: ಉಳ್ಳಾಲಹೊಯ್ಗೆ ಬಳಿಯ ನೇತ್ರಾವತಿ ನದಿಯಲ್ಲಿ ನಡೆದ ದೋಣಿ ದುರಂತದಲ್ಲಿ ಯುವತಿಯೊಬ್ಬಳು...


ಮಂಗಳೂರು: ನಗರದಲ್ಲಿ ಡಿ. 19ರಂದು ನಡೆದ ಹಿಂಸಾಚಾರದಲ್ಲಿ ತೊಡಗಿದವರನ್ನು ಸಿಸಿ ಕೆಮರಾ,...

ನವದೆಹಲಿ: ಮಹತ್ವದ ಬೆಳವಣಿಗೆ ಎಂಬಂತೆ 2012ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ...


ಕೊಚ್ಚಿ: ದೇಶಾದ್ಯಂತ ಹಿಂದೂ ಸಂಘಟನೆಗಳು ಲವ್‌ ಜೆಹಾದ್‌ ಬಗ್ಗೆ ತಮ್ಮ ಆತಂಕ...

ಬೆಂಗಳೂರು: ಸಿಎಎ, ಎನ್​ಆರ್​ಸಿ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ...


ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಸರ್ವಾನುಮತದಿಂದ...

ಬೆಂಗಳೂರು: ಕೇರಳದ ಕಾಸರಗೋಡಿನ ಯುವತಿ ಮೇಲಿನ ಅತ್ಯಾಚಾರ ಮತ್ತು ಮತಾಂತರ ಪ್ರಕರಣವನ್ನು ಸಿಐಡಿಗೆ...


Copyright 2019 www.policevarthe.com | All Right Reserved
error: Content is protected !!