Sunday, October 13 , 2019 2:03 AM

ಕ್ರೈಂ












NCIB  ತನಿಖಾಧಿಕಾರಿಗಳೆಂದು ಜನರಿಗೆ ವಂಚಿಸುತ್ತಿದ್ದ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಮಂಗಳೂರು ಪೊಲೀಸರು



628

ಮಂಗಳೂರು;  ನಗರದ ಕದ್ರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿರುವ ಕುಖ್ಯಾತ ವಂಚಕ ಸ್ಯಾಮ್ ಪೀಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವನೊಂದಿಗೆ ವ್ಯವರಿಸುತ್ತಿದ್ದ ಮತ್ತು NCIB  ತನಿಖಾಧಿಕಾರಿಗಳೆಂದು ಪೋಸ್ ಕೊಟ್ಟು ಜನರಿಗೆ ವಂಚಿಸುತ್ತಿದ್ದ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನ ನಾಗರಾಜ N.S. (39) ನಾಗರಬಾವಿ ಬೆಂಗಳೂರು ಹಾಗೂ ರಾಘವೇಂದ್ರ (31) ನಾಗರಬಾವಿ ಬೆಂಗಳೂರು ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಗಳಿಂದ  NCIB ಬಾವುಟ,  ಬೋರ್ಡ್,  MLC PASS  ಇರುವ SCORPIO  KA02 MD7935 ಕಾರನ್ನು,  ID ಕಾರ್ಡ್ಗಳನ್ನು, ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

 MLC,  CR ಮನೋಹರ್ ರವರ ವಿಧಾನ ಸೌಧ  ವಾಹನ ಪಾಸ್ ನ್ನು ಕೂಡ ಮೇಲ್ಕಂಡ ಆರೋಪಿಗಳು ದುರುಪಯೋಗ ಪಡಿಸಿದ್ದು ಈ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ ಹಾಗೂ ರಾಘವೇಂದ್ರ ಸ್ವಾಮೀಜಿ , ಕಾಶಿ ಮಠ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಂದಿನ ತನಿಖೆ ಬಾಬ್ತು ಆಂಧ್ರ ಪ್ರದೇಶದ  CID ತನಿಖಾಧಿಕಾರಿಗಳು ಆಗಮಿಸಿರುತ್ತಾರೆ ಎಂದು ನಗರ ಪೊಲೀಸ್ ಆಯುಕ್ತರಾದ ಡಾ.ಪಿ.ಎಸ್ ಹರ್ಷ ಅವರು ತಿಳಿಸಿದ್ದಾರೆ. ಹಾಗೂ  ದಿಬ್ಬುರಲ್ಲಿ ಪೋಲಿಸ್ ಠಾಣೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಪೋಲಿಸ್ ಅಧಿಕಾರಿಗಳು  ರಿಯಾಜ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲೀಂ ಬಾಬ ಪಟೇಲ್ ಮಹಾರಾಷ್ಟ್ರ  ಇವನನ್ನು  ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ

More

ಮಂಗಳೂರು: ದುಬೈನಿಂದ ಮಂಗಳೂರಿಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸುತ್ತಿದ್ದ ಪ್ರಯಾಣಿಕನ...

ಮಂಗಳೂರು; ಇಲ್ಲಿನ ಹೋಟೆಲ್‌ವೊಂದರ ಕೊಠಡಿಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ....


ಮಂಗಳೂರು: ನಗರದ ಕಸಬಾ ಬೆಂಗ್ರೆ ಸಮೀಪದ ಅರಬ್ಭೀ ಸಮುದ್ರ ತೀರದಲ್ಲಿ ಸುಮಾರು 50...

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಮನೆ ಮತ್ತು ಸಂಸ್ಥೆಗಳ...


ವಿಟ್ಲ; ಮರಳು ಸಾಗಾಟದ ಟಿಪ್ಪರ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ...

ಬಜಪೆ: ಇಲ್ಲಿನ ಪೆರಾರ ಕಿನ್ನಿಮಜಲು ನಾಗಬ್ರಹ್ಮ ಶಾಸ್ತ ಬಲವಂಡಿ ದೇವ ದೈವಸ್ಥಾನದಲ್ಲಿ ಚಾಕರಿ ಮಾಡುತ್ತಿದ್ದ...


ಮಂಗಳೂರು: ಭಾರತೀಯ ಅಂಚೆ ಇಲಾಖೆ ವತಿಯಿಂದ 12ನೇ ರಾಜ್ಯ ಮಟ್ಟದ ಅಂಚೆ ಚೀಟಿಗಳ...

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ ಶಾಸಕ ಡಾ| ಜಿ. ಪರಮೇಶ್ವರ್‌ ಹಾಗೂ...


Copyright 2019 www.policevarthe.com | All Right Reserved
error: Content is protected !!