Sunday, October 13 , 2019 2:29 AM

ಕ್ರೈಂ












ಕುಂದಾಪುರದ ಎಎಸ್ಪಿಯಾಗಿ ಹರಿರಾಂ ಶಂಕರ್‌ ಅಧಿಕಾರ ಸ್ವೀಕಾರ



275

ಕುಂದಾಪುರ: ಕುಂದಾಪುರ ಉಪವಿಭಾಗದ ನೂತನ ಎಎಸ್ಪಿಯಾಗಿ 2017ರ ಬ್ಯಾಚಿನ ಐಪಿಎಸ್‌ ಅಧಿಕಾರಿ ಹರಿರಾಂ ಶಂಕರ್‌ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಇಲ್ಲಿನ ಪೊಲೀಸ್‌ ಉಪಾಧೀಕ್ಷಕರ ಕಚೇರಿಯಲ್ಲಿ ನಿರ್ಗಮನ ಡಿವೈಎಸ್ಪಿ ಬಿ.ಪಿ. ದಿನೇಶ್‌ ಕುಮಾರ್‌ ಅಧಿಕಾರ ಹಸ್ತಾಂತರಿಸಿದರು.

2018 ರ ಮಾ. 22 ರಿಂದ ಕುಂದಾಪುರ ಉಪ ವಿಭಾಗದ ಡಿವೈಎಸ್‌ಪಿ ಆಗಿದ್ದ ಬಿ.ಪಿ. ದಿನೇಶ್‌ ಕುಮಾರ್‌ ಅವರು ಈಗ ವರ್ಗಾವಣೆಗೊಂಡಿದ್ದು, ಹೊಸ ಹುದ್ದೆಗೆ ಇನ್ನಷ್ಟೇ ನಿಯೋಜನೆಗೊಳಿಸಬೇಕಿದೆ. ಈ ಸಂದರ್ಭದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಮಂಜಪ್ಪ, ಬೈಂದೂರು ವೃತ್ತ ನಿರೀಕ್ಷಕ ಪರಮೇಶ್ವರ್‌ ಗುನಗ, ಉಪ ವಿಭಾಗದ ವಿವಿಧ ಠಾಣೆಗಳ ಎಸ್‌ಐಗಳು, ಪೊಲೀಸ್‌ ಸಿಬಂದಿ ಉಪಸ್ಥಿತರಿದ್ದರು.

ಕೇರಳದ ತೃಶ್ಶೂರ್‌ ಮೂಲದ ಹರಿರಾಂ ಶಂಕರ್‌ ಅವರು 2017 ಬ್ಯಾಚಿನ ಐಪಿಎಸ್‌ ಅಧಿಕಾರಿಯಾಗಿದ್ದು, ಬೆಳಗಾವಿಯ ಅಥಣಿಯಲ್ಲಿ ಪ್ರೊಬೇಶನರಿ ಎಎಸ್ಪಿಯಾಗಿ ಕಾರ್ಯನಿರ್ವಹಿಸಿ, ಬಳಿಕ 2 ತಿಂಗಳು ಹೈದರಬಾದಿನಲ್ಲಿ 2ನೇ ಹಂತದ ತರಬೇತಿ ಮುಗಿಸಿ, ಈಗ ಕುಂದಾಪುರಕ್ಕೆ ವರ್ಗವಣೆಗೊಂಡಿದ್ದಾರೆ. ಕ್ಯಾಲಿಕಟ್‌ ಎನ್‌.ಐ.ಟಿ.ಯಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ವ್ಯಾಸಂಗ ಮುಗಿಸಿ, ಸಿವಿಲ್‌ ಸರ್ವಿಸ್‌ ಪರೀಕ್ಷೆ ಬರೆದಿದ್ದರು.

 

More

ಮಂಗಳೂರು: ದುಬೈನಿಂದ ಮಂಗಳೂರಿಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸುತ್ತಿದ್ದ ಪ್ರಯಾಣಿಕನ...

ಮಂಗಳೂರು; ಇಲ್ಲಿನ ಹೋಟೆಲ್‌ವೊಂದರ ಕೊಠಡಿಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ....


ಮಂಗಳೂರು: ನಗರದ ಕಸಬಾ ಬೆಂಗ್ರೆ ಸಮೀಪದ ಅರಬ್ಭೀ ಸಮುದ್ರ ತೀರದಲ್ಲಿ ಸುಮಾರು 50...

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಮನೆ ಮತ್ತು ಸಂಸ್ಥೆಗಳ...


ವಿಟ್ಲ; ಮರಳು ಸಾಗಾಟದ ಟಿಪ್ಪರ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ...

ಬಜಪೆ: ಇಲ್ಲಿನ ಪೆರಾರ ಕಿನ್ನಿಮಜಲು ನಾಗಬ್ರಹ್ಮ ಶಾಸ್ತ ಬಲವಂಡಿ ದೇವ ದೈವಸ್ಥಾನದಲ್ಲಿ ಚಾಕರಿ ಮಾಡುತ್ತಿದ್ದ...


ಮಂಗಳೂರು: ಭಾರತೀಯ ಅಂಚೆ ಇಲಾಖೆ ವತಿಯಿಂದ 12ನೇ ರಾಜ್ಯ ಮಟ್ಟದ ಅಂಚೆ ಚೀಟಿಗಳ...

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ ಶಾಸಕ ಡಾ| ಜಿ. ಪರಮೇಶ್ವರ್‌ ಹಾಗೂ...


Copyright 2019 www.policevarthe.com | All Right Reserved
error: Content is protected !!