Sunday, October 13 , 2019 1:42 AM

ಕ್ರೈಂ












ಲಾಭಾಂಶ, ಹೂಡಿಕೆ ಹಣ ವಾಪಸ್‌ ನೀಡುವ ಆಮಿಷವೊಡ್ಡಿ ಸಾವಿರಾರು ಮಂದಿಗೆ ವಂಚಿಸಿದ್ದ ಮೂವರು ಆರೋಪಿಗಳ ಬಂಧನ



480

ಬೆಂಗಳೂರು: ಆ್ಯಂಬಿಡೆಂಟ್, ಐ ಮಾನಿಟರಿ ಅಡ್ವೈಸ್‌ (ಐಎಂಎ) ಕಂಪನಿಗಳ ಬಹುಕೋಟಿ ವಂಚನೆ ಪ್ರಕರಣಗಳ ಬೆನ್ನಲ್ಲೇ ಹಣ ದ್ವಿಗುಣಗೊಳಿಸಿ ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಕೋಟ್ಯಾಂತರ ರೂ. ಸಂಗ್ರಹಿಸಿ ವಂಚಿಸಿರುವ ಮತ್ತೂಂದು ವಂಚಕ ಕಂಪನಿಯ ಬಂಡವಾಳ ಬಯಲಾಗಿದೆ. ವ್ಯಾಮ್‌ ಸರ್ವೀಸ್‌ ಪ್ರೈವೆಟ್ ಲಿಮೆಟೆಡ್‌ (WAM Services (opc) Pvt. Ltd ) ನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಕೆಲವೇ ವಾರಗಳಲ್ಲಿ ಹೆಚ್ಚಿನ ಲಾಭಾಂಶ ಹಾಗೂ ಹೂಡಿಕೆ ಹಣ ವಾಪಸ್‌ ನೀಡುವ ಆಮಿಷವೊಡ್ಡಿ ಸಾವಿರಾರು ಮಂದಿಗೆ ವಂಚಿಸಿದ್ದ ಮೂವರು ಆರೋಪಿಗಳನ್ನು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹರ್ಯಾಣ ಮೂಲದ ಮಾಜಿ ಸೈನಿಕ ಸುನೀಲ್ ಕುಮಾರ್‌ ಚೌಧರಿ (36) ಕೇರಳದ ಕಣ್ಣೂರು ಜಿಲ್ಲೆಯ ರಿಜೇಶ (36) ಕೆ.ಎಸ್‌ ರಾಜೇಶ್‌ (41) ಬಂಧಿತರು. ಆರೋಪಿಗಳು ಕೇರಳ ಸೇರಿ ಕರ್ನಾಟಕದ 2500ಕ್ಕೂ ಅಧಿಕ ಮಂದಿಯಿಂದ 20 ಕೋಟಿ ರೂ.ಗಿಂತಲೂ ಅಧಿಕ ಹಣ ಸಂಗ್ರಹಿಸಿ ವಂಚಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಗಳು ಇನ್ನೂ ಹೆಚ್ಚು ವಂಚಿಸಿರುವ ಸಾಧ್ಯತೆಯಿದ್ದು, ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ.

 ಆರೋಪಿಗಳು ಸಾರ್ವಜನಿಕರನ್ನು ವಂಚಿಸಲೆಂದೇ ಕಂಪನಿ ವೆಬ್‌ಸೈಟ್ ಸೃಷ್ಟಿಸಿದ್ದು, ಅದರಲ್ಲಿ ಹಣ ದ್ವಿಗುಣಗೊಳ್ಳುವ ಬಗೆಯನ್ನು ವಿವರಿಸಿದ್ದರು. ಹೂಡಿಕೆದಾರರು ಆರಂಭದಲ್ಲಿ 25 ಸಾವಿರ ರೂ. ಪಾವತಿಸಿದರೆ 20 ವಾರಗಳ ಕಾಲ ಪ್ರತಿವಾರ 1250 ರೂ. ಬ್ಯಾಂಕ್‌ ಅಕೌಂಟ್‌ಗೆ ನೀಡಲಾಗುತ್ತದೆ. ಜತೆಗೆ, 21ನೇ ವಾರದಲ್ಲಿ ಹೂಡಿಕೆ ಮಾಡಿದ್ದ 25 ಸಾವಿರ ರೂ. ಕೂಡ ವಾಪಸ್‌ ನೀಡಲಾಗುತ್ತದೆ. ಇದೇ ಮಾದರಿಯಲ್ಲಿ 50 ಸಾವಿರ, ಒಂದು ಲಕ್ಷ ರೂ. ಹೂಡಿಕೆ ಮಾಡಿದವರಿಗೂ ಹಣ ವಾಪಸ್‌ ನೀಡುವುದಾಗಿ ಘೋಷಿಸಿದ್ದರು. ಇದನ್ನು ನಿಜ ಎಂದು ನಂಬಿದ ಸಾವಿರಾರು ಮಂದಿ ಕಂಪನಿಗೆ ಕರೆ ಮಾಡಿ ವಿಚಾರಿಸುತ್ತಲೇ ಅವರನ್ನು ಪ್ರತಿಷ್ಠಿತ ಹೋಟೆಲ್ಗಳಿಗೆ ಕರೆಸಿಕೊಂಡು ಮತ್ತಷ್ಟು ಸುಳ್ಳು ಹೇಳಿ ಕಂಪನಿ ಬ್ಯಾಂಕ್‌ ಖಾತೆಗೆ ಹಣ ಕಟ್ಟಿಸಿಕೊಳ್ಳುತ್ತಿದ್ದರು. ಇದೇ ರೀತಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಸಂಜೀವ್‌ಕುಮಾರ್‌ ದಾನಾ ಎಂಬವರು ಇ-ಮೇಲ್ ಮೂಲಕ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಇನ್ಸ್‌ಪೆಕ್ಟರ್‌ ಅಯ್ಯಣ್ಣ ರೆಡ್ಡಿ ನೇತೃತ್ವದ ತಂಡ, ಮೂವರು ಆರೋಪಿಗಳನ್ನು ಬಂಧಿಸಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

More

ಮಂಗಳೂರು: ದುಬೈನಿಂದ ಮಂಗಳೂರಿಗೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಆಗಮಿಸುತ್ತಿದ್ದ ಪ್ರಯಾಣಿಕನ...

ಮಂಗಳೂರು; ಇಲ್ಲಿನ ಹೋಟೆಲ್‌ವೊಂದರ ಕೊಠಡಿಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ....


ಮಂಗಳೂರು: ನಗರದ ಕಸಬಾ ಬೆಂಗ್ರೆ ಸಮೀಪದ ಅರಬ್ಭೀ ಸಮುದ್ರ ತೀರದಲ್ಲಿ ಸುಮಾರು 50...

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಮನೆ ಮತ್ತು ಸಂಸ್ಥೆಗಳ...


ವಿಟ್ಲ; ಮರಳು ಸಾಗಾಟದ ಟಿಪ್ಪರ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ...

ಬಜಪೆ: ಇಲ್ಲಿನ ಪೆರಾರ ಕಿನ್ನಿಮಜಲು ನಾಗಬ್ರಹ್ಮ ಶಾಸ್ತ ಬಲವಂಡಿ ದೇವ ದೈವಸ್ಥಾನದಲ್ಲಿ ಚಾಕರಿ ಮಾಡುತ್ತಿದ್ದ...


ಮಂಗಳೂರು: ಭಾರತೀಯ ಅಂಚೆ ಇಲಾಖೆ ವತಿಯಿಂದ 12ನೇ ರಾಜ್ಯ ಮಟ್ಟದ ಅಂಚೆ ಚೀಟಿಗಳ...

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ, ಕಾಂಗ್ರೆಸ್‌ ಶಾಸಕ ಡಾ| ಜಿ. ಪರಮೇಶ್ವರ್‌ ಹಾಗೂ...


Copyright 2019 www.policevarthe.com | All Right Reserved
error: Content is protected !!