Thursday, November 21 , 2019 5:55 AM

ಕ್ರೈಂ












ಸಸಿಕಾಂತ್ ಸೆಂಥಿಲ್ ಅವರ ಹಠಾತ್‌ ರಾಜೀನಾಮೆ‌ ಎಲ್ಲರಿಗೂ ಆಘಾತ ಉಂಟುಮಾಡಿದೆ; ಎಂ.ಬಿ.ಸದಾಶಿವ



206

ಮಂಗಳೂರು: ಕಳೆದ ಎರಡು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನಸ್ನೇಹಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಸಿಕಾಂತ್ ಸೆಂಥಿಲ್ ಅವರ ಹಠಾತ್‌ ರಾಜೀನಾಮೆ‌ ಎಲ್ಲರಿಗೂ ಆಘಾತ ಉಂಟುಮಾಡಿದೆ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ, ಯಾವ ಒತ್ತಡ ಇದೆ ಎಂಬುವುದನ್ನು ನಾವು ತಿಳಿದುಕೊಂಡು ಅದನ್ನು ಬಯಲಿಗೆಳೆಯಬೇಕಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಹೇಳಿದರು‌.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಯಾಗಿ ಸೇವೆ ಸಲ್ಲಿಸುವವರು ಈ ರೀತಿಯಲ್ಲಿ ರಾಜೀನಾಮೆ ನೀಡಿದ್ದಾರೆಂದರೆ ಬಹುಶಃ ಅವರ ಪರಿಸರದಲ್ಲಿ ಒತ್ತಡ ಬಂದಿದೆ. ಅದನ್ನು ಅವರು ತಮ್ಮ ಒಳ್ಳೆಯತನದಿಂದ ಹೇಳಲಿಚ್ಛಿಸಿಲ್ಲ. ಆದರೆ ಅದನ್ನು ತಿಳಿಯಬೇಕಾದ ಅಗತ್ಯವಿದೆ ಎಂದು ಹೇಳಿದರು. ಕೇರಳದ ಗೋಪಿನಾಥ್ ಕಣ್ಣನ್, ನಮ್ಮ ಪಕ್ಕದ ಅಣ್ಣಾಮಲೈ ರಾಜೀನಾಮೆ ನೀಡಿದಾಗ ಏನೋ ವೈಯುಕ್ತಿಕ ಕಾರಣ ಎಂದು ಸುಮ್ಮನಾದೆವು. ಆದರೆ ನಮ್ಮ ಊರಿನಲ್ಲೇ ಸೇವೆ ಮಾಡಿದ, ಉತ್ತಮ ವ್ಯಕ್ತಿತ್ವದ ಜಿಲ್ಲಾಧಿಕಾರಿಯೋರ್ವರು ರಾಜೀನಾಮೆ ನೀಡಿರುವುದು ಎಲ್ಲೋ ಏನೋ ತಪ್ಪಿದೆ ಎಂದೆನಿಸುತ್ತದೆ ಎಂದರು.

ಮುಂದೆ ಇಂತಹ ಅಧಿಕಾರಿಗಳಿಗೆ ಆತ್ಮವಿಶ್ವಾಸ ತುಂಬಿ ಆಡಳಿತ ಯಂತ್ರವನ್ನು ಬಲಿಷ್ಠಗೊಳಿಸಬೇಕಾಗಿದೆ. ಆ ದೃಷ್ಟಿಯಿಂದ ಸಸಿಕಾಂತ್ ಸೆಂಥಿಲ್ ಅವರು ಯಾವ ಕಾರಣಕ್ಕೆ ರಾಜೀನಾಮೆ ನೀಡಿದರು ಎಂದು ತಿಳಿದುಕೊಂಡು, ಮತ್ತೆ ಅವರ ಸೇವೆ ರಾಷ್ಟ್ರಕ್ಕೆ ದೊರುಕುವಂತೆ ಮಾಡಬೇಕೆಂದು ಜನತಾದಳ ಒತ್ತಾಯ ಮಾಡುತ್ತದೆ ಎಂದು ಎಂ.ಬಿ.ಸದಾಶಿವ ಹೇಳಿದರು.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಪುತ್ತೂರು: ಇಲ್ಲಿನ ಕುರಿಯ ಅಜಲಾಡಿಯಲ್ಲಿ ಜೋಡಿ ಕೊಲೆ ನಡೆದಿದೆ. ಕುಗ್ಗ ಸಾಹೇಬ್...

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಹಣಕಾಸು...


ಬೆಂಗಳೂರು : ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಅವರ ಮೇಲೆ...

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಫೇಲ್ ಯುದ್ಧ ವಿಮಾನ...


ಮಂಗಳೂರು: ಕೆರೆಯಲ್ಲಿ ಈಜಾಡುತ್ತಿದ್ದ ವೇಳೆ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಕ್ಷಿಣ...

ಮಂಗಳೂರು; ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು...


ಮಂಗಳೂರು ಮಹಾನಗರ ಪಾಲಿಕೆ _2019 ಫಲಿತಾಂಶAd code after FIRST paragraph...

ಮಂಗಳೂರು ಮಹಾನಗರ ‌ಪಾಲಿಕೆ ಚುನಾವಣೆ; 56ನೇ ವಾರ್ಡ್ ನಲ್ಲಿ ಬಿಜೆಪಿ ಜಯಭೇರಿAd...


Copyright 2019 www.policevarthe.com | All Right Reserved
error: Content is protected !!