Monday, December 9 , 2019 3:09 PM

ಕ್ರೈಂ












ಬಿಜೆಪಿ ಪಾಲಾದ ಮಹಾನಗರ ಪಾಲಿಕೆ; ಮಂಗಳೂರಿನಲ್ಲಿ ಅರಳಿದ ಕಮಲ



1482

ಮಂಗಳೂರು; ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಬೆಳಿಗ್ಗೆ ಆರಂಭವಾಗಿದೆ. ನಗರದ ರೋಸಾರಿಯೋ ಮತ ಎಣಿಕೆ ನಡೆಯುತ್ತಿದ್ದು, ಭಾರತೀಯ ಜನತಾ ಪಕ್ಷವು ಸರಳ ಬಹುಮತದತ್ತ ಮುನ್ನುಗ್ಗುತ್ತಿದೆ.  ಮತ ಎಣಿಕೆ ಮುಕ್ತಾಯವಾದ ಎಲ್ಲಾ ವಾರ್ಡ್ ಗಳ ಮಾಹಿತಿ ಇಲ್ಲಿದೆ.

ದೇರೆಬೈಲು ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯ ರಂಜಿನಿ ಕೋಟ್ಯಾನ್ 2849 ಮತ ಗಳಿಸಿ ಜಯ ಸಾಧಿಸಿದರು. ಜ್ಯೋತಿ ಎಲ್ ದೇವಾಡಿಗ ಕಾಂಗ್ರೆಸ್ ನಿಂದ ಸ್ಪರ್ಧಿಸಿ 1583 ಮತ ಪಡೆದರು.

ದೇರೆಬೈಲು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಎಂ ಶಶಿಧರ ಹೆಗ್ಡೆ 2235 ಮತ ಪಡೆದು ಜಯ ಸಾಧಿಸಿದರು. ಬಿಜೆಪಿಯ ಚರಿತ್ ಕುಮಾರ್ 1908 ಮತ ಪಡೆದರು.

ಕೋಡಿಯಾಲ್ ಬೈಲ್ ಕ್ಷೇತ್ರದಲ್ಲಿ ಬಿಜೆಪಿಯ ಸುಧೀರ್ ಶೆಟ್ಟಿ 1846  ಮತ ಗಳಿಸಿ ಜಯ ಸಾಧಿಸಿದರೆ, ಕಾಂಗ್ರೆಸ್ ನ ಪ್ರಕಾಶ್ ಸಾಲಿಯಾನ್ 1661 ಮತ ಪಡೆದರು.

ಮರಕಡ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಲೋಹಿತ್ ಅಮೀನ್ ಅವರು 2055 ಮತ ಗಳಿಸಿ ಜಯ ಸಾಧಿಸಿದರು. ಎದುರಾಳಿ ಕಾಂಗ್ರೆಸ್ ನ ಹರಿನಾಥ 1704 ಮತ ಪಡೆದರು.

ಕದ್ರಿ ದಕ್ಷಿಣ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿಯ ಕದ್ರಿ ಮನೋಹರ ಶೆಟ್ಟಿ 1526 ಮತ ಪಡೆದು ಜಯ ಸಾಧಿಸಿದರು. ಕಾಂಗ್ರೆಸ್ ನ ಅಶೋಕ್ ಕುಮಾರ್ ಡಿ ಕೆ 1277 ಮತ ಪಡೆದರು.

ಕಂಬ್ಳ ಕ್ಷೇತ್ರದಲ್ಲಿ ಬಿಜೆಪಿಯ ಲೀಲಾವತಿ 1884 ಮತ ಪಡೆದು ಜಯ ಸಾಧಿಸಿದರು. ಕಾಂಗ್ರೆಸ್ ನ ರೇಖಾ ಸುರೇಖ 318 ಮತ ಪಡೆದರು.

ಇಡ್ಯಾ ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯ ಸರಿತಾ ಶಶಿಧರ್ 2233 ಮತಗಳಿಸಿ ಜಯ ಸಾಧಿಸಿದರೆ, ಕಾಂಗ್ರೆಸ್ ನ ವಿನಿತಾ ಆರ್ ರಾವ್ 1759 ಮತ ಪಡೆದರು.

ಪಚ್ಚನಾಡಿ ಕ್ಷೇತ್ರದಲ್ಲಿ ಬಿಜೆಪಿಯ ಸಂಗೀತಾ ಆರ್ ನಾಯಕ್ 2708 ಮತ ಪಡೆದು ಜಯ ಸಾಧಿಸಿದರೆ, ಕಾಂಗ್ರೆಸ್ ನ ವಿಶಾಲಾಕ್ಷಿ 1544 ಮತ, ಪಕ್ಷೇತರ ರೇಖಾ ಮೋಹನ್ 1112 ಮತ ಪಡೆದರು.

ಮಣ್ಣಗುಡ್ಡ ವಾರ್ಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಸಂಧ್ಯಾ ಭರ್ಜರಿ ಜಯ ಸಾಧಿಸಿದರು. ಅವರು 3019 ಮತ ಪಡೆದರೆ, ಎದುರಾಳಿ ಕೈ ಪಕ್ಷದ ಮೇಘ್ನ ದಾಸ್ 698 ಮತ ಪಡೆದರು.

ಕಾಟಿಪಳ್ಳ – ಕೃಷ್ಣಾಪುರ ವಾರ್ಡ್ ನಲ್ಲಿ ಬಿಜೆಪಿಯ ಲಕ್ಷ್ಮೀ ಶೇಖರ ದೇವಾಡಿಗ 2675 ಮತ ಗಳಿಸಿ ಜಯ  ಸಾಧಿಸಿದ್ದಾರೆ. ಎದುರಾಳಿ ಕಾಂಗ್ರೆಸ್ ನ ಸವಿತಾ ಶೆಟ್ಟಿ 2127 ಮತ ಪಡೆದರು.

ಕುದ್ರೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಶುದ್ದೀನ್ 1256 ಮತ ಪಡೆದು ಜಯ ಸಾಧಿಸಿದರೆ, ಎಸ್ ಡಿಪಿಐನ ಮಝೈನ್ ಕುದ್ರೋಳಿ 1121 ಮತ ಪಡೆದರು.

ಕಾವೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ 3296 ಮತ ಪಡೆದು ಜಯ ಸಾಧಿಸಿದರೆ, ಎದುರಾಳಿ ಕಾಂಗ್ರೆಸ್ ನ ಭವ್ಯ ಪೂಜಾರಿ 1725 ಮತ ಪಡೆದರು.

ಪಂಜಿಮೊಗರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ 1690 ಮತ ಪಡೆದು ಜಯ ಸಾಧಿಸಿದರೆ, ಎದುರಾಳಿ ಬಿಜೆಪಿಯ ನವೀನ್ ಚಂದ್ರ ಬಿ ಪೂಜಾರಿ 1358 ಮತ, ಸಿಪಿಐಎಂ ನ ಅಹಮದ್ ಬಶೀರ್ 569 ಮತ ಪಡೆದರು.

ಬೋಳೂರು ಅಭ್ಯರ್ಥಿ ಬಿಜೆಪಿ ಜಗದೀಶ್ ಶೆಟ್ಟಿ 2364 ಮತ ಪಡೆದು ಜಯ ಸಾಧಿಸಿದರೆ, ಕಾಂಗ್ರೆಸ್ ನ ಕಮಲಾಕ್ಷ ಸಾಲಿಯಾನ್ 992 ಮತ, ಪಕ್ಷೇತರ ರಾಜಕುಮಾರ್ ಕೋಟ್ಯಾನ್ 757 ಮತ ಪಡೆದರು.

ಇಡ್ಯಾ ಕ್ಷೇತ್ರದಲ್ಲಿ ಬಿಜೆಪಿಯ ನಯನ ಆರ್ ಕೋಟ್ಯಾನ್ 2228 ಜಯ ಗಳಿಸಿದ್ದಾರೆ. ಎದುರಾಳಿ ಕಾಂಗ್ರೆಸ್ ನ ಮಾಜಿ ಮೇಯರ್ ಪ್ರತಿಭಾ ಕುಳಾಯಿ 1710 ಮತ ಪಡೆದರು.

ಕದ್ರಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ಶಖಿಲ ಕಾವ 1813 ಮತ ಪಡೆದು ಜಯ ಗಳಿಸಿದರೆ, ಕಾಂಗ್ರೆಸ್ ನ ಮಮತಾ ಶೆಟ್ಟಿ 791 ಮತ ಪಡೆದರು.

ಪಣಂಬೂರು ಕ್ಷೇತ್ರದಲ್ಲಿ ಬಿಜೆಪಿ ಸುನಿತಾ 1236 ಮತ ಪಡೆದರು. ಎದುರಾಳಿ ಕಾಂಗ್ರೆಸ್ ನ ಚಂದ್ರಿಕಾ 1081 ಮತ, ಸಿಪಿಐಎಂನ ಸುನೀತಾ ಕೃಷ್ಣ 888 ಮತ ಪಡೆದರು.

ಕಾಟಿಪಳ್ಳ ಪೂರ್ವ ಕ್ಷೇತ್ರದಲ್ಲಿ ಬಿಜೆಪಿಯ ಲೋಕೇಶ್ ಬೊಳ್ಳಾಜೆ 2486 ಮತ ಪಡೆದು ಜಯಗಳಿಸಿದರು. ಎದುರಾಳಿ ಕಾಂಗ್ರೆಸ್ ಪಕ್ಷದ ಬಶೀರ್ ಅಹಮದ್ 1680 ಮತಗಳು, ನವಾಜ್ ಕಾಟಿಪಳ್ಳ 484 ಮತ, ಪಕ್ಷೇತರ ಹುಸೈನ್ ಕಾಟಿಪಳ್ಳ 67 ಮತ ಪಡೆದರು.

ದೇರೆಬೈಲ್ (ಉತ್ತರ) ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್ ಕುಮಾರ್ 2146 ಮತ ಪಡೆದರೆ, ಕಾಂಗ್ರೆಸ್ ನ ಮಲ್ಲಿಕಾರ್ಜುನ್ ಎಂ 1930 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ಧಾರೆ.

ಹೈಗೆ ಬಜಾರ್ ಕ್ಷೇತ್ರದಲ್ಲಿ ಬಿಜೆಪಿಯ ರೇವತಿ 2116 ಮತ ಗಳಿಸಿ ಜಯ ಸಾಧಿಸಿದರು. ಎದುರಾಳಿ ಕಾಂಗ್ರೆಸ್ ನ ಶರ್ಮಿಳಾ ಶರತ್ 1238 ಮತ ಪಡೆದರು.

ಕಣ್ಣೂರು ಕ್ಷೇತ್ರದ ಚಂದ್ರಾವತಿ ಅವರು ಬಿಜೆಪಿ ಪಕ್ಷದಿಂದ ಸ್ಪರ್ಧಸಿ 1862 ಮತ ಪಡೆದು ಜಯ ಸಾಧಿಸಿದರು. ಎದುರಾಳಿ ಕಾಂಗ್ರೆಸ್ ನ ರಜಿಯಾ ಅಬ್ದುಲ್ ಖಾದರದ 1591 ಮತ, ಎಸ್ ಡಿಒಇಐ ನ ಮಿಶ್ರಿಯಾ 990 ಮತ ಪಡೆದರು.

ಪದವು ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್ ನ  ಅಭ್ಯರ್ಥಿ, ಮಾಜಿ ಮೇಯರ್ ಭಾಸ್ಕರ್ ಕೆ ಅವರು ಜಯ ಗಳಿಸಿದ್ದಾರೆ. ಅವರು 2492 ಮತ ಪಡೆದರೆ, ಬಿಜೆಪಿಯ ಸುಜನ್ ದಾಸ್ ಕೆ 1921 ಮತ ಗಳಿಸಿದರು.
ಇಷ್ಟರವೆಗಿನ ಮತೆಣಿಕೆಯಲ್ಲಿ ಮೊದಲ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ.

ಬಿಜೈ ವಾರ್ಡ್ ನಲ್ಲಿ ಲೇನ್ಸ್ ಲೋಟ್ ಪಿಂಟೋ 1939 ಮತ ಪಡೆದು ಜಯ ಗಳಿಸಿದೆರು. ಎದುರಾಳಿ ಬಿಜೆಪಿಯ ಪ್ರಶಾಂತ್ ಆಳ್ವ 1527 ಮತ ಪಡೆದಿದ್ದಾರೆ.

ಸುರತ್ಕಲ್ ಪೂರ್ವ ಕ್ಷೇತ್ರದಲ್ಲಿ ಬಿಜೆಪು ಪಕ್ಷದ ಶ್ವೇತಾ ಎ 2496 ಮತ ಪಡೆದು ಎದುರಾಳಿ ಕಾಂಗ್ರೆಸ್ ನ ಇಂದಿರಾ ವಿರುದ್ದ ಜಯ ಸಾಧಿಸಿದರು. ಇಂದಿರಾ ಅವರು 1133  ಮತ ಪಡೆದರು.

ಮಂಗಳಾದೇವಿ ಕ್ಷೇತ್ರದಲ್ಲಿ ಬಿಜೆಪಿಯ ಪ್ರೇಮಾನಂದ ಶೆಟ್ಟಿ ಭರ್ಜರಿ ಜಯ ಸಾಧಿಸಿದ್ದಾರೆ. ಅವರು 2187 ಮತ ಪಡೆದರೆ ಅವರ ಎದುರಾಳಿ ಕಾಂಗ್ರೆಸ್ ಪಕ್ಷದ  ದಿನೇಶ್ ಬಿ ರಾವ್ 874 ಪತ ಪಡೆದರು.

ಜೆಡಿಎಸ್ ನ ಮಹೇಶ್ ರಾವ್ 60 ಮತ, ನೋಟಾ ಪರ 17 ಮತ ಚಲಾವಣೆಯಾಯಿತು. ಅಳಪೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ರೂಪ ಶ್ರೀ 2033 ಮತ ಪಡೆದು ಗೆಲುವು ಸಾಧಿಸಿದರು.  ಎದುರಾಳಿ ಕಾಂಗ್ರೆಸ್ ನ ಶೋಭಾ 2007 ಪತ ಪಡೆದರೆ, 51 ಮತಗಳು ನೋಟಾ ಪಾಲಾದವು.

ವಾರ್ಡ್ ಸಂಖ್ಯೆ 21 ಆಗಿರುವ ಪದವು ಪಶ್ಚಿಮ ಕ್ಷೇತ್ರದ್ಲಲಿ ಬಿಜೆಪಿಯ ವನಿತಾ ಪ್ರಸಾದ್ ಭರ್ಜರಿ ಜಯ ಸಾಧಿಸಿದ್ದಾರೆ. ಅವರು 1051 ಮತ ಪಡೆದರೆ, ಎದುರಾಳಿ ಕಾಂಗ್ರೆಸ್ ನ ಆಶಾಲತಾ 605 ಪಡೆದರು.

ಸೆಂಟ್ರಲ್ ಮಾರ್ಕೆಟ್ ವಾರ್ಡ್ ನಲ್ಲಿ ಬಿಜೆಪಿಯ ಪೂರ್ಣಿಮಾ ಭರ್ಜರಿ ಜಯ ಸಾಧಿಸಿದ್ದಾರೆ. ಪೂರ್ಣಿಮಾ ಅವರು 2039 ಮತ ಪಡೆದರೆ ಎದುರಾಳಿ ಕಾಂಗ್ರೆಸ್ ನ ಮಮತಾ ಶೆಣೈ 426 ಮತ ಪಡೆದರು. ಪಕ್ಷೇತರ ಅಭ್ಯರ್ಥಿ 210 ಮತ ಪಡೆದರು.

ಈ ಚುನಾವಣೆಯ ಮೊದಲ ವಾರ್ಡ್ ನ ಫಲಿತಾಂಶ ಹೊರಬಿದ್ದಿದ್ದು, ಸುರತ್ಕಲ್ ಪಶ್ಚಿಮದಲ್ಲಿ ಭಾರತೀಯ ಜನತಾ ಪಕ್ಷದ ಶೋಭಾ ರಾಜೇಶ್ ಜಯ ಗಳಿಸಿದ್ದಾರೆ. ಶೋಭಾ ರಾಜೇಶ್  985 ಮತ ಪಡೆದರೆ, ಕಾಂಗ್ರೆಸ್ ನ ಶಾಂತ ಎಸ್ ರಾವ್ 548 ಮತ ಪಡೆದರು. ಮತ್ತೋರ್ವ ಅಭ್ಯರ್ಥಿ ರೇವತಿ ಪುತ್ರನ್ 760 ಮತ ಪಡೆದರು. ಒಟ್ಟು 21 ನೋಟಾ ಮತಗಳು ಚಲಾವಣೆಯಾಗಿದ್ದವು.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಮಂಗಳೂರು; ಬಲ್ಮಠ ಬೆಂದೂರ್ ವೆಲ್ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್​​ವೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ...

ಮಂಗಳೂರು; ತಂದೆ ಮಗನ ನಡುವೆ ಜಗಳ ಉಂಟಾಗಿ ಮಗ ತಂದೆಯನ್ನೇ ಹತ್ಯೆಗೈದಿರುವ ಘಟನೆ...


ಮಂಗಳೂರು; ಕಾಸರಗೋಡಿನ ಸುದರ್ಶನ್ ಎಂಬುವರನ್ನು ತೊಕ್ಕೊಟ್ಟುವಿನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ...

ಮಂಗಳೂರು; ಕೃಷಿ ಬೆಳೆಗಳನ್ನು ನಾಶ ಮಾಡುವ ಪ್ರಾಣಿಗಳನ್ನು ಕೊಲ್ಲಲು ಬಳಸುವ ಸ್ಫೋಟಕ ತಯಾರಿಸುತ್ತಿದ್ದ...


ಮಂಗಳೂರು; ಲೈಟ್‌ ಫಿಶಿಂಗ್‌, ಬುಲ್‌ಟ್ರಾಲ್‌ ಸೇರಿದಂತೆ ಅಕ್ರಮ ಮೀನುಗಾರಿಕೆಯಲ್ಲಿ ತೊಡಗಿರುವ ಬೋಟ್‌ಗಳ ವಿರುದ್ಧ...

ಹೈದರಾಬಾದ್: ಎನ್ ಕೌಂಟರ್ ಸ್ಪೆಷಲಿಸ್ಟ್ ವಿಶ್ವನಾಥ್ ಸಜ್ಜನರ ಮೂಲತಃ ಹುಬ್ಬಳ್ಳಿಯ ಪಗಣಿ...


ಹೈದರಾಬಾದ್: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ದಿಶಾ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಎಲ್ಲಾ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ...

ಹೈದರಾಬಾದ್ : ದೇಶವನ್ನೆ ತಲ್ಲಣಗೊಳಿಸಿದ್ದ ದಿಶಾ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧಿಸಿದಂತೆ...


Copyright 2019 www.policevarthe.com | All Right Reserved
error: Content is protected !!