ಕೋವಿಡ್ 19 ಭೀತಿ :ಬೀಜಿಂಗ್‌ನಲ್ಲಿ ಡೈವೋರ್ಸ್‌ ಪಡೆದುಕೊಳ್ಳುವವರ ಸಂಖ್ಯೆಲ್ಲಿ ಗಣನೀಯ ಏರಿಕೆ | Karnataka Crime News: Latest Crime Headlines | Police Varthe
Sunday, November 29 , 2020 3:16 PM

ಕ್ರೈಂ












ಕೋವಿಡ್ 19 ಭೀತಿ :ಬೀಜಿಂಗ್‌ನಲ್ಲಿ ಡೈವೋರ್ಸ್‌ ಪಡೆದುಕೊಳ್ಳುವವರ ಸಂಖ್ಯೆಲ್ಲಿ ಗಣನೀಯ ಏರಿಕೆ



380

ಬೀಜಿಂಗ್‌: ಕೋವಿಡ್ 19 ಸೋಂಕಿನಿಂದ ಆರ್ಥಿಕ ಕ್ಷೇತ್ರ, ಉದ್ಯಮ ಕ್ಷೇತ್ರ, ಷೇರು ಮಾರುಕಟ್ಟೆ, ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಹೆಚ್ಚುತ್ತದೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಸಂಬಂಧಗಳು ದೂರವಾಗುವ ಭೀತಿ ಕಾಡುತ್ತಿದ್ದು, ಅಂತಹ ಪರಿಸ್ಥಿತಿಗೆ ಬೀಜಿಂಗ್‌ ಸಾಕ್ಷಿಯಾಗಿದೆ.

ಹೌದು ಇಡೀ ವಿಶ್ವವೇ ಬೆಚ್ಚಿ ಬೀಳಿಸಿರುವ ಕೋವಿಡ್‌-19 ಬೀಜಿಂಗ್‌ನಲ್ಲಿ ಒಂದು ವಿಚಿತ್ರ ಘಟನೆಗೆ ಕಾರಣವಾಗಿದ್ದು, ಕೋವಿಡ್ 19 ಸೋಂಕು ಹಾವಳಿಯಿಂದಾಗಿ ಚೀನದಲ್ಲಿ ಡೈವೋರ್ಸ್‌ ಪಡೆದುಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ ಎಂದು ಸುದ್ದಿಯಾಗಿದೆ.

ಡ್ರಾಗನ್‌ ದೇಶದಲ್ಲಿ ಅತಿ ಹೆಚ್ಚು ಕೋವಿಡ್ 19 ಸೋಂಕಿತ ಪ್ರಕರಣ ಕಂಡು ಬಂದಿರುವ ಕಾರಣ ಅವರು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯಬೇಕಾದ ಅನಿವಾರ್ಯತೆ ಉಂಟಾಗಿತ್ತು. ಹೀಗಾಗಿ ಗಂಡ-ಹೆಂಡತಿ ನಡುವೆ ಅನೇಕ ರೀತಿಯ ಮುನಿಸು, ಮನಸ್ತಾಪ ಉಂಟಾಗಿ ಡೈವೋರ್ಸ್‌ ಕೇಸ್‌ಗಳು ಜಾಸ್ತಿಯಾಗಿವೆ ಎಂದು ವರದಿಯಾಗಿದೆ.

1ದಿನದಲ್ಲಿ 300 ಡಿವೋರ್ಸ್‌ ಕೇಸ್‌; ಈ ವಿಷಯಕ್ಕೆ ಸಂಬಂಧಿಸಿದಂತೆ ಚೀನದ ಮದುವೆ ನೋಂದಣಿ ಕಚೇರಿ ಮಾಹಿತಿ ನೀಡಿದ್ದು, ಫೆ.24ರಂದು ಒಂದೇ ಕೇಂದ್ರದಲ್ಲಿ ಬರೋಬ್ಬರಿ 300 ಡಿವೋರ್ಸ್‌ ಕೇಸ್‌ಗಳು ಬಂದಿವೆ ಎಂದು ತಿಳಿಸಿದೆ.

ಹೊಂದಾಣಿಕೆ ಆಗದ ಕಾರಣ ಈ ನಿರ್ಧಾರ; ಚೀನದಲ್ಲಿ ಕೊರೊನಾ ತಡೆಗಟ್ಟಲು ಹಲವು ನಗರಗಳ ಮೇಲೆ ನಿರ್ಬಂಧ ಹೇರಿ ಮನೆಯಿಂದ ಹೊರಗಡೆ ಬರದಂತೆ ದಿಗ್ಬಂಧನ ಹಾಕಲಾಗಿತ್ತು. ಈ ವೇಳೆ ಲಕ್ಷಾಂತರ ಜನರು ಅನೇಕ ದಿನಗಳ ಕಾಲ ಮನೆಯಲ್ಲಿ ಕಳೆದಿದ್ದು, ಅವರ ನಡುವೆ ಹೊಂದಾಣಿಕೆ ಇಲ್ಲದೇ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಗ್ರಾಹಕರಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿ ಅವಧಿ ಪೂರ್ಣಗೊಂಡಾಗ ಅದನ್ನು ಹಿಂದಿರುಗಿಸದೆ...

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್​ ಅವರನ್ನು...


ಮಂಗಳೂರು: ನಗರದಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಕರಿಮಣಿ ಸರ ಕಳೆದುಕೊಂಡಿದ್ದಾರೆ. ಮೊದಲ...

ಮಂಗಳೂರು; ಅಕ್ರಮ ಬಾಕ್ಸೈಟ್ ದಂಧೆಯಲ್ಲಿ ಬಂಟ್ವಾಳ ಶಾಸಕರ ಪತ್ನಿ ಮತ್ತು ಕೈರಂಗಳ...


ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕಾಂಗ್ರೆಸ್ಸಿನಲ್ಲಿ ಕಳೆದುಹೋಗುವ ಭಯವಿದೆ. ಕಾಂಗ್ರೆಸ್ಸಿನಲ್ಲಿ ಅವರ ನಾಯಕತ್ವಕ್ಕೆ...

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)...


ಬೆಂಗಳೂರು; ಡಿಜೆಹಳ್ಳಿ ಮತ್ತು ಕೆಜೆಹಳ್ಳಿ ಗಲಭೆ ಪ್ರಕರಣದ ಆರೋಪಿಯಾಗಿರುವ ಪುಲಕೇಶಿನಗರದ ಮಾಜಿ ಕಾರ್ಪೊರೇಟರ್...

ಬಂಟ್ವಾಳ: ತುಳು ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!