ರೋಗ ತಡೆಗೆ ಆಯುಷ್ ಕ್ವಾತಾ ರಾಮ‌ಬಾಣ! ಯಶಸ್ವಿ ಉದ್ಯಮಿಗಳ ಅಭಿಮತ - Karnataka Crime News: Latest Crime Headlines | Police Varthe
Saturday, June 12 , 2021 8:48 PM

ಕ್ರೈಂ












ರೋಗ ತಡೆಗೆ ಆಯುಷ್ ಕ್ವಾತಾ ರಾಮ‌ಬಾಣ! ಯಶಸ್ವಿ ಉದ್ಯಮಿಗಳ ಅಭಿಮತ



1032

ಮಂಗಳೂರು ; ನಾವು ನಮ್ಮ ತಲೆಮಾರಿನ ಅತ್ಯಂತ ಸವಾಲಿನ ದಿನಗಳನ್ನು ಕಳೆಯುತ್ತಿದ್ದೇವೆ. ಕೋವಿಡ್ 19 ಎನ್ನುವ ವೈರಾಣು ಯಾರನ್ನು, ಯಾವಾಗ ಆಕ್ರಮಿಸಿಕೊಂಡು ಬಿಡುತ್ತದೆ ಎನ್ನುವ ಸುಳಿವು ಕೂಡ ಸಿಗದೇ ಮಾನವ ಲೋಕವೇ ಚಿಂತೆಗೆ ಒಳಗಾಗಿದೆ. ಈ ಸಮಯದಲ್ಲಿ ನಾವು ಯಾವ ರೀತಿಯ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡರೆ ಕೊರೊನಾ ಎನ್ನುವ ಅಪಾಯದಿಂದ ತಪ್ಪಿಸಿಕೊಳ್ಳಹುದು ಎನ್ನುವ ಪ್ರಶ್ನೆ ನಮ್ಮಲ್ಲಿ ಉದ್ಭವವಾಗುತ್ತದೆ. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಅದೇ ಆಯುಷ್ ಕ್ವಾತಾ ಎನ್ನುವ ರಾಮಬಾಣ.

ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತವಾಗಿರುವ ಆಯುಷ್ ಕ್ವಾತಾವನ್ನು ನಾವು ನಿತ್ಯ ಸೇವಿಸುವುದರಿಂದ ನಿಸ್ಸಂದೇಹವಾಗಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತಾ ಹೋಗುತ್ತದೆ. ನಮಗೆಲ್ಲರಿಗೂ ಗೊತ್ತಿರುವಂತೆ ಕೋವಿಡ್ 19 ವೈರಾಣು ನಾಶಕ್ಕೆ ಇನ್ನು ಸೂಕ್ತ ಔಷಧ ಪ್ರಮಾಣೀಕರಿಸಲಾಗಿಲ್ಲ. ಆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ಅಂತಹ ವ್ಯಕ್ತಿಗಳ ದೇಹವನ್ನು ಕೋವಿಡ್ 19 ಪ್ರವೇಶಿಸಿದರೂ ಕಾಯಿಲೆಯನ್ನು ಉಂಟುಮಾಡುವುದರಲ್ಲಿ ವಿಫಲವಾಗುತ್ತದೆ. ಹಾಗಾದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾವು ಮಾಡಬೇಕಾದ ಸೂಕ್ತ ಕಾರ್ಯ ಆಯುಷ್ ಕ್ವಾತಾ ಸೇವನೆ. ಇದರ ಮಹತ್ವವನ್ನು ಮನಗಂಡಿರುವ ಅನೇಕ ಗಣ್ಯರು ತಮ್ಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ, ಸಿಬ್ಬಂದಿಗಳ ಕುಟುಂಬದವರಿಗೆ ಆಯುಷ್ ಕ್ವಾತಾವನ್ನು ವಿತರಿಸಿದ್ದಾರೆ. ಅದರ ಪ್ರಯೋಜನವನ್ನು ಕೂಡ ಕಂಡುಕೊಂಡಿದ್ದಾರೆ.

ಅಷ್ಟೇ ಅಲ್ಲ, ತಮ್ಮ ಹಿತೈಷಿಗಳಿಗೆ ಕೂಡ ಈ ಬಗ್ಗೆ ಮಾಹಿತಿ ನೀಡಿ ಆಯುಷ್ ಕ್ವಾತಾ ಸೇವಿಸಲು ಹಾಗೂ ಅವರ ಕಚೇರಿ, ಸಂಸ್ಥೆ, ಫ್ಯಾಕ್ಟರಿಗಳಲ್ಲಿ ಸಿಬ್ಬಂದಿಗಳಿಗೆ ನೀಡಲು ಸಲಹೆ ಮಾಡುತ್ತಿದ್ದಾರೆ.
ಶ್ರೀ ವಿಜಯಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್, ಬಂಟ್ವಾಳ್ ರೋಡ್, ಮೂಡಬಿದ್ರೆ, ಬೈಕಂಪಾಡಿಯ ಕ್ಲಾಸಿಕ್ ಫ್ಯೂಶನ್ ಮೆಟಲ್, ಮಂಗಳೂರಿನ ಪ್ರಭು ಸರ್ವಿಸ್ ಸ್ಟೇಶನ್, ಬಲ್ಮಠದ ಐಒಸಿ ಡೀಲರ್ಸ್, ಪಿ.ಸಿ.ಪೈ ಅಂಡ್ ಕೋ., ಇಂಡಿಯನ್ ಆಯಿಲ್ ಡೀಲರ್ ಸಂಸ್ಥೆ ಉಜಿರೆ, ಬೆಂಗಳೂರಿನ ರೋವಿನ್ ಇಕ್ಯುಪ್ ಮೆಂಟ್, ಖ್ಯಾತ ಲೆಕ್ಕಪರಿಶೋಧಕರಾದ ಜಗನ್ನಾಥ ಕಾಮತ್ ಸಹಿತ ನಾಡಿನ ಗಣ್ಯರು ಇದನ್ನು ಬಳಸಿ ಇದರ ಲಾಭ ಅರಿತಿದ್ದಾರೆ.

ಯಾವುದೇ ಉದ್ಯಮದಲ್ಲಿ ಕೆಲಸಗಾರರು ಪೂರ್ಣ ಪ್ರಮಾಣದಲ್ಲಿ ತಮ್ಮ ಶ್ರಮ ಹಾಕಿದರೆ ಮಾತ್ರ ಕಂಪೆನಿ ಬೆಳೆಯುತ್ತದೆ. ಆದರೆ ಇವತ್ತಿನ ದಿನಗಳಲ್ಲಿ ಮಾಲೀಕರು, ಕೆಲಸದವರು ಆತಂಕದಿಂದ ದಿನದೂಡುತ್ತಿದ್ದಾರೆ. ಕೊರೊನಾ ಭಯ ಕಾಡದೇ ನಾವು ಈ ಸಮರವನ್ನು ಗೆಲ್ಲಬೇಕಾದರೆ ನಮ್ಮ ಮನೆಗಳಲ್ಲಿ ಇರಲೇಬೇಕಾದದ್ದು ಆಯುಷ್ ಕ್ವಾತಾ. ಅದನ್ನು ಸೇವಿಸಿ ನಿಶ್ಚಿಂತೆಯಿಂದ ಉದ್ಯೋಗದಲ್ಲಿ ತೊಡಗಿಕೊಳ್ಳಿ ಎನ್ನುವುದು ಆಯುರ್ವೇದ ತಜ್ಞರ ಸಲಹೆ ಕೂಡ ಹೌದು. ಯಶಸ್ವಿ ಉದ್ಯಮಿಗಳ ಅಭಿಪ್ರಾಯವೂ ಹೌದು.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಮನೆಗೆ ಪುಂಜಾಲಕಟ್ಟೆ...

ಸುಳ್ಯ: ಕೊಡಗು ಗಡಿ ಭಾಗದಲ್ಲಿ ಬರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್​​​ನಲ್ಲಿ, ಹಣ...


ಮಂಗಳೂರು: ಕೊರೊನಾ ಲಾಕ್​​ಡೌನ್ ಮಾರ್ಗಸೂಚಿಯಂತೆ ಮದುವೆಗೆ ಅನುಮತಿ ಪಡೆದು, ವಿವಾಹದ ಮುನ್ನ ಮೆಹಂದಿ...

ಮಂಗಳೂರು : ಮೀನಿನ ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 200 ಕೆಜಿ ಗಾಂಜಾವನ್ನು...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಕಳೆದ ಸುಮಾರು ಮೂರು...

ಮಂಗಳೂರು:  ತೌಕ್ತೆ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ಮಂಗಳೂರಿನಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ತೌಕ್ತೆ...


ಮಂಗಳೂರು; ನದಿಯಿಂದ ಮರಳನ್ನು ತೆಗೆದು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ...

ಬೆಂಗಳೂರು: ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಮಹಾದೇವ ಪ್ರಕಾಶ್(65) ಕೊರೊನಾಗೆ ಬಲಿಯಾಗಿದ್ದಾರೆ. 10...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!