ವೈದ್ಯ ಡಾ| ಗೌತಮ್‌ ಕುಳಮರ್ವ ರಚಿಸಿದ ವೀಡಿಯೋವೊಂದು ವೈರಲ್; ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಮೆಚ್ಚುಗೆ - Karnataka Crime News: Latest Crime Headlines | Police Varthe
Saturday, June 12 , 2021 8:16 PM

ಕ್ರೈಂ












ವೈದ್ಯ ಡಾ| ಗೌತಮ್‌ ಕುಳಮರ್ವ ರಚಿಸಿದ ವೀಡಿಯೋವೊಂದು ವೈರಲ್; ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಮೆಚ್ಚುಗೆ



405

ಮಂಗಳೂರು: ವೈದ್ಯರ ದಿನಾಚರಣೆಯಂದು ಕೋವಿಡ್‌ ವಾರಿಯರ್‌ಗಳಿಗೆ ನಮನ ಸಲ್ಲಿಸಲೆಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಅವರ ಗಾಯನವನ್ನು ಬಳಸಿಕೊಂಡು ವೈದ್ಯ ಡಾ| ಗೌತಮ್‌ ಕುಳಮರ್ವ ರಚಿಸಿದ ವೀಡಿಯೋವೊಂದು ವೈರಲ್‌ ಆಗಿದೆ. ಸ್ವತಃ ಲತಾ ಮಂಗೇಶ್ಕರ್‌ ಅವರೇ ವೀಡಿಯೋ ಮೆಚ್ಚಿ ಡಾ| ಕುಳಮರ್ವ ಅವರನ್ನು ಸಂಪರ್ಕಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಹಾಡಿದ “ಯೇ ಮೇರೇ ವತನ್‌ ಕೇ ಲೋಗೋಂ’ ಎಂಬ ದೇಶಭಕ್ತಿ ಗೀತೆಯ ತುಣುಕನ್ನು ಅವರು ತಮ್ಮ ವೀಡಿಯೋದಲ್ಲಿ ಬಳಸಿಕೊಂಡಿದ್ದು, ವೈದ್ಯಕೀಯ ವಲಯದಲ್ಲಿ ಹಂಚಿಕೊಳ್ಳುವುದಕ್ಕಾಗಿ ವೀಡಿಯೋ ಮಾಡಿದ್ದರು. ಆದರೆ ಭಾರತೀಯ ವೈದ್ಯವಿಜ್ಞಾನ ಸಂಸ್ಥೆ (ಐಎಂಎ) ಸದಸ್ಯರೊಂದಿಗೆ ವಾಟ್ಸ್‌ಆ್ಯಪ್‌ ಮೂಲಕ ಹಂಚಿಕೊಂಡಿದ್ದ ವೀಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಇದು ಪದ್ಮಭೂಷಣ ಲತಾ ಮಂಗೇಶ್ಕರ್‌ ಅವರಿಗೂ ತಲುಪಿದೆ. ವೀಡಿಯೋ ನೋಡಿದ ಮಂಗೇಶ್ಕರ್‌ ತಮ್ಮ ಪರಿಚಯದ ವೈದ್ಯರ ಮೂಲಕ ಡಾ| ಕುಳಮರ್ವ ಅವರನ್ನು ಸಂಪರ್ಕಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಹಾಡು ಭಾರತ-ಚೀನ ನಡುವೆ 1962ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿ ಮಡಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ರಚನೆಯಾಗಿತ್ತು. ಕವಿ ಪ್ರದೀಪ್‌ ಅವರು ರಚಿಸಿದ್ದ ಹಾಡನ್ನು ಲತಾ ಹಾಡಿದ್ದರು. ಮೂಲತಃ ಕಾಸರಗೋಡಿನವರಾಗಿರುವ ಡಾ| ಕುಳಮರ್ವ ಅವರು ಇಎನ್‌ಟಿ ತಜ್ಞರಾಗಿದ್ದು, ಕಾಸರಗೋಡು / ಮಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇರೆಬೈಲ್‌ ಕೊಂಚಾಡಿಯ ಲ್ಯಾಂಡ್‌ಲಿಂಕ್ಸ್‌ ಟೌನ್‌ಶಿಪ್‌ನಲ್ಲಿ ನೆಲೆಸಿದ್ದಾರೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಮನೆಗೆ ಪುಂಜಾಲಕಟ್ಟೆ...

ಸುಳ್ಯ: ಕೊಡಗು ಗಡಿ ಭಾಗದಲ್ಲಿ ಬರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್​​​ನಲ್ಲಿ, ಹಣ...


ಮಂಗಳೂರು: ಕೊರೊನಾ ಲಾಕ್​​ಡೌನ್ ಮಾರ್ಗಸೂಚಿಯಂತೆ ಮದುವೆಗೆ ಅನುಮತಿ ಪಡೆದು, ವಿವಾಹದ ಮುನ್ನ ಮೆಹಂದಿ...

ಮಂಗಳೂರು : ಮೀನಿನ ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 200 ಕೆಜಿ ಗಾಂಜಾವನ್ನು...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಕಳೆದ ಸುಮಾರು ಮೂರು...

ಮಂಗಳೂರು:  ತೌಕ್ತೆ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ಮಂಗಳೂರಿನಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ತೌಕ್ತೆ...


ಮಂಗಳೂರು; ನದಿಯಿಂದ ಮರಳನ್ನು ತೆಗೆದು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ...

ಬೆಂಗಳೂರು: ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಮಹಾದೇವ ಪ್ರಕಾಶ್(65) ಕೊರೊನಾಗೆ ಬಲಿಯಾಗಿದ್ದಾರೆ. 10...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!