ಬೆಳ್ತಂಗಡಿಯಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯ ನಿಂತವರೇ ಕಿಂಗ್ ಗಳು…!! ವಿಧಾನಸಭೆ ಗೆದ್ದ ಸಾಹಸಿಗೇ ಸವಾಲಾದ ಯುವಕರು ಪೂಂಜಾ ಅವರ ವಿರೋಧ ಕಟ್ಟಿಕೊಂಡರೇ..?? ಎತ್ತು ಏರಿಗೆಳೆದರೆ ಕೋಣ ನೀರಿಗೆಳೆದಂತಾಗಿದೆ ಬೆಳ್ತಂಗಡಿಯ ಯುವಕರ ರಾಜಕೀಯ ಜೀವನ….! - Karnataka Crime News: Latest Crime Headlines | Police Varthe
Thursday, May 6 , 2021 4:03 PM

ಕ್ರೈಂ
ಬೆಳ್ತಂಗಡಿಯಲ್ಲಿ ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯ ನಿಂತವರೇ ಕಿಂಗ್ ಗಳು…!! ವಿಧಾನಸಭೆ ಗೆದ್ದ ಸಾಹಸಿಗೇ ಸವಾಲಾದ ಯುವಕರು ಪೂಂಜಾ ಅವರ ವಿರೋಧ ಕಟ್ಟಿಕೊಂಡರೇ..?? ಎತ್ತು ಏರಿಗೆಳೆದರೆ ಕೋಣ ನೀರಿಗೆಳೆದಂತಾಗಿದೆ ಬೆಳ್ತಂಗಡಿಯ ಯುವಕರ ರಾಜಕೀಯ ಜೀವನ….!1946

ಮಂಗಳೂರು; ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಒಲಿಸಿಕೊಂಡರೆ, ಬೆಳ್ತಂಗಡಿಯಲ್ಲಿ ಅಲ್ಲಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳೂ ಕೂಡ ವಿಜಯಪತಾಕೆ ಹಾರಿಸಿರುವುದು ಗೌಪ್ಯವೇನಲ್ಲ.‌ ಅಂತಹ ಬಂಡಾಯ‌ ಅಭ್ಯರ್ಥಿಗಳಲ್ಲಿ‌ ಒಬ್ಬರಾದ ಪುನೀತ್ ಮಡಂತ್ಯಾರು‌ ಅವರು ಬಿಜೆಪಿಯ ಬೆಂಬಲಿತ ಅಭ್ಯರ್ಥಿಯಾಗಿ ಕಳೆದ ಬಾರಿ ವಿಜಯಿಯಾಗಿದ್ದು, ಈ ಬಾರಿ ಪಕ್ಷ ಟಿಕೆಟ್ ನಿರಾಕರಿಸಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿ‌ ಸ್ಪರ್ಧಿಸಿ ಭಾರೀ ಅಂತರದಲ್ಲಿ ಗೆದ್ದಿದ್ದು ಸುದ್ದಿಗೆ ಕಾರಣವಾಗಿದೆ.

ಇನ್ನೂ ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತ್ ಗಳ‌ ಪೈಕಿ ಸರಿಸುಮಾರು 40 ಗ್ರಾಮಗಳಲ್ಲಿ ಬಿಜೆಪಿ ಬೆಂಬಲಿತರೇ ಗ್ರಾಮ ಪಂಚಾಯತ್ ಚುಕ್ಕಾಣಿ ಹಿಡಿಯಲಿದ್ದಾರೆ.‌ ಆದರೆ ಕೆಲವು ಕಡೆ ಮೂಲ ಬಿಜೆಪಿಗರು ಟಿಕೆಟ್ ಸಿಗದ ಕಾರಣ ಮುನಿಸಿಕೊಂಡು ಸ್ವತಂತ್ರವಾಗಿ ಗೆದ್ದಿರುವುದನ್ನು ನೋಡಿದರೆ ಬೆಳ್ತಂಗಡಿಯ ಬಿಜೆಪಿ ಥಿಂಕ್ ಟ್ಯಾಂಕ್ ಕೈ ಕೊಟ್ಟಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪುನಿತ್ ಮಡಂತ್ಯಾರು ಅವರು ರಾಜಕೀಯವಾಗಿ ಅಲ್ಲದೇ ರಾಜಕೀಯೇತರವಾಗಿಯೂ ಪ್ರಬಲರಾಗಿದ್ದು, ತಮ್ಮ ಸಾಮಾಜಿಕ ಕಳಕಳಿಯಿಂದಲೇ ಮುನ್ನೆಲೆಗೆ ಬಂದವರು. ಮಾತ್ರವಲ್ಲದೇ ಅದೆಷ್ಟು ಜನರ ಕಷ್ಟದಲ್ಲಿದ್ದ ಸಮಯದಲ್ಲಿ ಅವರ ಕಣ್ಣೀರು ಒರೆಸುವ ಕೆಲಸದಲ್ಲಿ ತನ್ನನ್ನು ತಾನೂ ತೊಡಗಿಸಿಕೊಂಡವರು. ಒಬ್ಬ ಅಪ್ಪಟ ರಾಷ್ಟ್ರೀಯ ಚಿಂತನೆಯ ವ್ಯಕ್ತಿಯಾಗಿರುವ ಪುನೀತ್ ಅನೇಕ ಹಿಂದೂ ಸಂಘಟನೆಯ ಕಾರ್ಯ ಚಟುವಟಿಕೆಗಳಲ್ಲಿ ಕೂಡ ಮುಂಚೂಣಿಯಲ್ಲಿ ಕಾಣಿಸಿಕೊಂಡವರು.

ಬಿಜೆಪಿಯಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಪುನೀತ್ ಗೆ ಅನೇಕ ಸವಾಲುಗಳು ಎದುರಾಗಿದ್ದವು, ಮಾತ್ರವಲ್ಲದೇ ರಾಜಕೀಯ ಕಾರಣಗಳಿಂದ ಅನೇಕ ಜನರನ್ನು ಕೂಡ ಎದುರು ಹಾಕಿಕೊಳ್ಳುವ ಸಂದರ್ಭಗಳು ಎದುರಾಗಿದ್ದವು. ಇದನ್ನೆಲ್ಲಾ ಯಶಸ್ವಿಯಾಗಿ ನಿಭಾಯಿಸಿದ ಪುನೀತ್ ಬಿಜೆಪಿಯ ಬೆಂಬಲಿತನಾಗಿ ಮಾಲಾಡಿ ಗ್ರಾಮ ಪಂಚಾಯತ್ ನಲ್ಲಿ ಸದಸ್ಯನಾಗಿ ಅನೇಕ ಜನಪರ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸಗಳನ್ನು ಮಾಡುವ ಮೂಲಕ ಒಬ್ಬ ಯಶಸ್ವಿ ಜನಪ್ರತಿನಿಧಿಯಾಗಿದ್ದ. ಪುನೀತ್ ಬಿಜೆಪಿಯ ಹಾಗೂ ಹಿಂದುತ್ವದ ಪ್ರತಿ ಹೋರಾಟದಲ್ಲಿ ಕೂಡ ತನ್ನ ಇರುವಿಕೆಯನ್ನು ಸಾರಿದ್ದ, ಜೊತೆಗೆ ಸಂಘಟಿತ ಯೋಜನೆಯ ಮೂಲಕ ಸಂಘಟನಾ ಚತುರನಾಗಿಯೂ ಗುರುತಿಸಿಕೊಂಡಿದ್ದ.

ಅಂತಹ ನಾಯಕತ್ವ ಗುಣ ಹೊಂದಿರುವ ಪುನಿತ್ ಅವರಿಗೆ ಟಿಕೆಟ್ ನಿರಾಕರಿಸಿ ಬಿಜೆಪಿ ಪಕ್ಷ ತಪ್ಪು ಮಾಡಿದೆ ಎಂದು ಖಡಾಖಂಡಿತವಾಗಿ ಹೇಳಬಹುದಾಗಿದೆ. ಬೆಳೆಯುತ್ತಿರುವ ಯುವಕರನ್ನು ಮುಂದೆ ನಿಂತು ಬೆಳೆಸಿ ಪ್ರೋತ್ಸಾಹ ನೀಡಬೇಕಿದ್ದ ತಾಲ್ಲೂಕಿನ ನಾಯಕರುಗಳು ಜಿದ್ದಿಗೆ ಬಿದ್ದವರಂತೆ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನಿರಾಕರಿಸಿದ್ದು ನೋಡಿದರೆ ಬೆಳೆಯುತ್ತಿರುವವರ ಏಳ್ಗೆ ನೋಡಲಾಗದೆ ಅಡ್ಡಗಾಲಿಕ್ಕಿದ್ದಾರೋ ಎಂಬ ಅನುಮಾನ ಮೂಡುತ್ತಿದೆ‌. ಕಳೆದ ವಿಧಾನಸಭಾ ಚುನಾವಣೆಯ ವೇಳೆ ಹಾಲಿ ಶಾಸಕ ಹರೀಶ್ ಪೂಂಜಾ ಅವರ ಗೆಲುವಿಗೆ ಶತಾಯಗತಾಯ ಹೋರಾಡಿದ ಕೆಲ ಯುವಕರನ್ನು ಸದ್ಯ ಪಕ್ಷದಿಂದಲೇ ದೂರ ಇಡುವ ಕಾರ್ಯಗಳಾಗುತ್ತಿರುವುದು ಕೂಡ ಇಲ್ಲಿ ಗಮನಿಸಬೇಕಾದ ವಿಚಾರ ಎನ್ನುತ್ತಾರೆ ಬಿಜೆಪಿಯ ಹಿರಿಯ ಮುಖಂಡರೊಬ್ಬರು.

ಪುನೀತ್ ಕೂಡ ಹರೀಶ್ ಪೂಂಜ ಅವರ ಚುನಾವಣೆಯ ವೇಳೆ‌ ಅವಿರತವಾಗಿ ನಿಂತು ಕೆಲಸ ಮಾಡಿದ ಯುವಕ‌. ಆದರೆ ತನ್ನ ಗೆಲುವಿನ ನಂತರ ಶಾಸಕ ಹರೀಶ್ ಪೂಂಜಾ ಅವರೇ ಕೆಲ ಯುವಕರನ್ನು ಮೂಲೆಗುಂಪು ಮಾಡಿದ್ದಾರೆ ಎಂಬ ಅಸಮಾಧಾನದ ಮಾತುಗಳು ಕೆಲವರ ಬಾಯಲ್ಲಿ ಕೇಳಿಬರುತ್ತಿದ್ದು, ಅಂತಹ ಯಾವುದೇ ಕಾರ್ಯ ಆಗುತ್ತಿಲ್ಲ‌ ಎಂಬುದಾಗಿ ಬೆಳ್ತಂಗಡಿ ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ.‌ ಆದರೆ ಬೆಂಕಿ ಇಲ್ಲದೇ ಹೊಗೆಯಾಡದು ಎಂಬುದು ವಾಸ್ತವಿಕ ಸತ್ಯ. ಇಂತಹ ಒಡೆದು ಆಳುವ‌ ನೀತಿ ಸರಿಪಡಿಸಿಕೊಂಡರೆ ಬೆಳ್ತಂಗಡಿ ಬಿಜೆಪಿಗೆ ಭವಿಷ್ಯ ಇರುವುದು ಸುಳ್ಳಲ್ಲ. ಒಂದು ವೇಳೆ ಬಿಜೆಪಿ ಪಕ್ಷಕ್ಕಾಗಿ ದುಡಿದ ಯುವಕರನ್ನು ಗುರುತಿಸಿ ಸರಿಯಾದ ರೀತಿಯಲ್ಲಿ ನ್ಯಾಯ ಕೊಡುತ್ತಿದ್ದರೆ ಬೆಳ್ತಂಗಡಿ ಬಿಜೆಪಿಯಲ್ಲಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ 46 ಗ್ರಾ.ಪಂ ಗಳಲ್ಲಿ ಕೂಡ ಬಿಜೆಪಿ ಅಧಿಕಾರ ಪಡೆಯುವ ಮೂಲಕ ಇತಿಹಾಸ ಸೃಷ್ಟಿ ಆಗಿದ್ದರೂ ಕೂಡ ಆಶ್ಚರ್ಯ ಪಡಬೇಕಾಗಿರಲಿಲ್ಲ. ಆದರೆ ಬೆಳ್ತಂಗಡಿ ಬಿಜೆಪಿಯ ದಂಡಯಾತ್ರೆಗೆ ತನ್ನ ಸ್ವಯಂಕೃತಪರಾಧವೇ ಶಾಪವಾಗಿ ಪರಿಣಮಿಸಿದ್ದು ಕಾಕತಾಳೀಯವೋ ಏನೋ..!!

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!