ಪಬ್ ಜಿ ಗೆ ಬಲಿಯಾದ ಆಕೀಫ್ ನ ಕೊಲೆ ಮಾಡಿದಾತ ಇನ್ನೂ ಅಪ್ರಾಪ್ತ..!?ಸದಾ ಗೆಲ್ಲುತ್ತಿದ್ದ ಆಕೀಫ್ ನ ಒಂದು ಸೋಲು ಆತನನ್ನೇ ಬಲಿಪಡೆದದ್ದು ಯಾಕೆ ಗೊತ್ತಾ..!?ಆಕೀಫ್‌ vs ದೀಪಕ್ - ಪೋಲಿಸ್ ವಾರ್ತೆ ಸ್ಪೆಷಲ್ ಕ್ರೈಂ ರಿಪೋರ್ಟ್ - Karnataka Crime News: Latest Crime Headlines | Police Varthe
Saturday, June 12 , 2021 8:01 PM

ಕ್ರೈಂ
ಪಬ್ ಜಿ ಗೆ ಬಲಿಯಾದ ಆಕೀಫ್ ನ ಕೊಲೆ ಮಾಡಿದಾತ ಇನ್ನೂ ಅಪ್ರಾಪ್ತ..!?ಸದಾ ಗೆಲ್ಲುತ್ತಿದ್ದ ಆಕೀಫ್ ನ ಒಂದು ಸೋಲು ಆತನನ್ನೇ ಬಲಿಪಡೆದದ್ದು ಯಾಕೆ ಗೊತ್ತಾ..!?ಆಕೀಫ್‌ vs ದೀಪಕ್ – ಪೋಲಿಸ್ ವಾರ್ತೆ ಸ್ಪೆಷಲ್ ಕ್ರೈಂ ರಿಪೋರ್ಟ್1887

ಮಂಗಳೂರು : ಮಕ್ಕಳಿಗೆ ಆಟವಾಡಲು ಮೊಬೈಲ್ ಕೊಡದಿರಿ ಎಂದು ಪದೇ ಪದೇ ಪೋಲಿಸರು ಎಚ್ಚರಿಕೆ ನೀಡುತ್ತಿದ್ದರೂ ಕ್ಯಾರೇ ಎನ್ನದ ಅದೆಷ್ಟೋ ಮನೆಯವರು ತನ್ನ ಮಕ್ಕಳನ್ನು ಬ್ಲೂ ವೇಲ್ ಗೇಮ್ ಆಟವಾಡುವ ವೇಳೆ ಕಳೆದುಕೊಂಡಿದ್ದರು. ಭಾರತದಲ್ಲಿ ಬ್ಲೂ ವೇಲ್ ಗೆ ಅಷ್ಟಾಗಿ ಮಕ್ಕಳು ಬಲಿಯಾಗದಿದ್ದರೂ ಪಬ್ ಜಿ ಆಟ ಹಲವರ ಪಾಲಿಗೆ ಚಟವಾಗಿ ಅಂಟಿಕೊಂಡುಬಿಟ್ಟಿದೆ. ಪಬ್ ಜಿ ಬ್ಯಾನ್ ಆದಾಗ ಸ್ವಲ್ಪ ನಿರಾಳರಾಗಿದ್ದ ಜನರಿಗೆ ಶಾಕ್ ನೀಡಿದ್ದು ಇಂದಿನ ಉಳ್ಳಾಲದ ಬಾಲಕನ ಕೊಲೆ ಪ್ರಕರಣ..

ಹೌದು, ಆಕೀಫ್ ಎಂಬ ಹನ್ನೆರಡರ ಪ್ರಾಯದ ಇನ್ನೂ ಬದುಕಿ ಬಾಳಬೇಕಾದವ ಪಬ್ ಜಿ ಆಟಕ್ಕೆ ಬಲಿಯಾಗಿ ಹೋಗಿದ್ದಾನೆ. ಪಬ್ ಜಿ ಯಲ್ಲಿ ಯಾರೆಂದರೆ ಯಾರಿಗೂ ಸೋಲದ, ಸದಾ ಗೆಲ್ಲುತ್ತಲೇ ಇದ್ದ ಆಕೀಫ್ ಕೊಲೆ ಯಾಕಾಗಿ ಆಗಿದೆ ಎಂಬುದು ವಾಸ್ತವವಾಗಿ ಹೇಳಬಹುದಾದರೂ ಅದರ ಹಿಂದಿನ ಕಥೆ ಇದೆಯಲ್ವಾ ಅದು ಹೇಳೋದು ಬಲು ಕಷ್ಟ. ಇನ್ನೂ ಪ್ರಪಂಚದ ಸುಖ ಕಷ್ಟ ಕಾಣದ, ಪ್ರಪಂಚವೆಂದರೆ ಏನೆಂದೂ‌ ಗೊತ್ತಿರದ ಪ್ರಾಯದಲ್ಲಿ‌ ಆಕೀಫ್ ಹೆಣವಾಗಿದ್ದಾನೆ. ಆದರೆ ಕೊಂದವನೂ ಕೂಡ ಸಣ್ಣ ಪ್ರಾಯದವನೇ ಎಂಬ ಅನುಮಾನ ಮೂಡಿದೆಯಾದರೂ ಪೋಲಿಸರ ತನಿಖೆಗೂ ಮೊದಲು ಹೇಳುವುದು ಕಷ್ಟ.‌ ತಾರ್ಕಿಕವಾಗಿ ಹೇಳುವುದಾದರೆ ಸಣ್ಣ ಪ್ರಾಯದಲ್ಲೇ ಗೆಳೆಯನನ್ನೆ ಕೊಲ್ಲುವ ಮನಸ್ಸು ಬಂದಿದೆಯಾದರೆ ಪಬ್ ಜಿ ಮಕ್ಕಳ ಮನಸ್ಸನ್ನು ಅದೆಷ್ಟು ಹಾಳು ಮಾಡಿರಬಹುದು…!??

ಸತ್ಯ ಏನೆಂದರೆ, ಪಬ್ ಜಿ ಯಲ್ಲಿ ಯಾವಾಗಲೂ ಗೆಲ್ಲುತ್ತಿದ್ದ ಆಕೀಫ್ ನ ಮೇಲೆ ಆತನ ಗೆಳೆಯ ದೀಪಕ್ ಗೆ ಅಸಮಾಧಾನ ಇತ್ತು. ಈ ಬಗ್ಗೆ ದೀಪಕ್ ಸವಾಲು ಹಾಕಿ ಆನ್ ಲೈನ್ ನಲ್ಲಿ ಆಡೋಣ ಬಾ ಎಂದು ಕರೆದ ಮೇಲೆ ಆಕೀಫ್ ನೂ ಒಂದು ಕೈ ನೋಡೇ ಬಿಡೋಣ ಅಂತ ಮನೆಯಿಂದ ಮೊಬೈಲ್ ತೆಗೆದುಕೊಂಡು ಹೊರನಡೆದಿದ್ದಾನೆ. ಅದರಂತೆ ಕಳೆದ ರಾತ್ರಿ ಇಬ್ಬರೂ ಪಬ್ ಜೀ ಆಡಿದ್ದು, ಆಗ ಸೋಲೇ ಕಾಣದ ಆಕೀಫ್ ಸೋತಿದ್ದಾನೆ. ಸೋತ ಸಿಟ್ಟಿನಲ್ಲಿದ್ದ ಆಕೀಫ್ ಹಾಗೂ ಗೆದ್ದ ದೀಪಕ್ ನಡುವೆ ಜಗಳವುಂಟಾಗಿದ್ದು, ಈ ವೇಳೆ ದೀಪಕ್ ನು ಆಕೀಫ್ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಕಲ್ಲಲ್ಲಿ ಹೊಡೆದ ಮೇಲೆ ದೀಪಕ್ ಎಸ್ಕೇಪ್ ಆಗಿರುವ ಸಾಧ್ಯತೆ ಇದೆಯಾದರೂ ವಿಪರೀತ ರಕ್ತಸ್ರಾವದಿಂದ ಆಕೀಫ್ ಅಲ್ಲೇ ಹೆಣವಾಗಿದ್ದಾನೆ…!! ಮೊಗ್ಗೊಂದು ಅರಳುವ ಮೊದಲೇ ಬಾಡಿ ಹೋಗಿದೆ…

ಕಮೀಷನರ್ ಶಶಿಕುಮಾರ್ ಹೇಳಿರುವಂತೆ ತನಿಖೆಯಾದ ಮೇಲೆ ಸತ್ಯಾಂಶ ಗೊತ್ತಾಗಲಿದೆಯಾದರೂ ಮಕ್ಕಳನ್ನು ಮೊಬೈಲ್ ನಿಂದ ದೂರ ಇಡಬೇಕಾದ ಅನಿವಾರ್ಯತೆ ಎಲ್ಲಾ ಪೋಷಕರಿಗೂ ಇರಲಿದೆ. ತಮ್ಮ ಮಕ್ಕಳನ್ನು ಹಾಳು ಮಾಡುವ ಅಥವಾ ಕಳೆದುಕೊಳ್ಳುವ ಮುನ್ನ ನಾವು ಎಚ್ಚರ ತಪ್ಪದಿರೋಣ..

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಅಕ್ರಮವಾಗಿ ಮದ್ಯ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದ ಮನೆಗೆ ಪುಂಜಾಲಕಟ್ಟೆ...

ಸುಳ್ಯ: ಕೊಡಗು ಗಡಿ ಭಾಗದಲ್ಲಿ ಬರುವ ಅರಣ್ಯ ಇಲಾಖೆಯ ಚೆಕ್ ಪೋಸ್ಟ್​​​ನಲ್ಲಿ, ಹಣ...


ಮಂಗಳೂರು: ಕೊರೊನಾ ಲಾಕ್​​ಡೌನ್ ಮಾರ್ಗಸೂಚಿಯಂತೆ ಮದುವೆಗೆ ಅನುಮತಿ ಪಡೆದು, ವಿವಾಹದ ಮುನ್ನ ಮೆಹಂದಿ...

ಮಂಗಳೂರು : ಮೀನಿನ ಕಂಟೈನರ್ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ 200 ಕೆಜಿ ಗಾಂಜಾವನ್ನು...


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಕಳೆದ ಸುಮಾರು ಮೂರು...

ಮಂಗಳೂರು:  ತೌಕ್ತೆ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ಮಂಗಳೂರಿನಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡಿದೆ. ತೌಕ್ತೆ...


ಮಂಗಳೂರು; ನದಿಯಿಂದ ಮರಳನ್ನು ತೆಗೆದು ಕಳ್ಳತನ ಮಾಡಿ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ...

ಬೆಂಗಳೂರು: ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಮಹಾದೇವ ಪ್ರಕಾಶ್(65) ಕೊರೊನಾಗೆ ಬಲಿಯಾಗಿದ್ದಾರೆ. 10...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!