ಕೊಲೆ ಯಾರೇ ಮಾಡಿರಲಿ, ಕಾನೂನಿನ ಅಡಿಯಲ್ಲಿ ತಕ್ಕ ಶಾಸ್ತಿ..!ಉಳ್ಳಾಲದಲ್ಲೇ ಇದ್ದು ಸಾವಿಗೆ ಸೂಕ್ತ ನ್ಯಾಯ ಕೊಡಿಸುವ ಭರವಸೆ!ಪೋಷಕರ ನೋವಿಗೆ ಸ್ಪಂದಿಸಿದ ಕಮೀಷನರ್ ಎನ್.ಶಶಿಕುಮಾರ್ ಮಾನವೀಯ ನುಡಿ - Karnataka Crime News: Latest Crime Headlines | Police Varthe
Thursday, May 6 , 2021 2:41 PM

ಕ್ರೈಂ












ಕೊಲೆ ಯಾರೇ ಮಾಡಿರಲಿ, ಕಾನೂನಿನ ಅಡಿಯಲ್ಲಿ ತಕ್ಕ ಶಾಸ್ತಿ..!ಉಳ್ಳಾಲದಲ್ಲೇ ಇದ್ದು ಸಾವಿಗೆ ಸೂಕ್ತ ನ್ಯಾಯ ಕೊಡಿಸುವ ಭರವಸೆ!ಪೋಷಕರ ನೋವಿಗೆ ಸ್ಪಂದಿಸಿದ ಕಮೀಷನರ್ ಎನ್.ಶಶಿಕುಮಾರ್ ಮಾನವೀಯ ನುಡಿ



567

ಮಂಗಳೂರು : ಮಂಗಳೂರು ಹೊರವಲಯದ ಉಳ್ಳಾಲದ ಕೆ.ಸಿ.ರೋಡ್ ಬಳಿ 12 ವರ್ಷ ಪ್ರಾಯದ ಬಾಲಕನ ಕೊಲೆಗೈದ ಘಟನೆ ಇಂದು ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಪೋಷಕರು, ಕೊಲೆಯಾದ ಬಾಲಕನ ಸ್ನೇಹಿತ ದೀಪಕ್ ಎಂಬಾತನ ಮೇಲೆ ದೂರು ನೀಡಿದ್ದಾರೆ. ಇದೆಲ್ಲದರ ನಡುವೆ ಸ್ಥಳಕ್ಕಾಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದು, ಸಾರ್ವಜನಿಕರ ಜೊತೆಗೆ ಮಾತನಾಡಿದ ಮಂಗಳೂರು ನಗರ ಕಮೀಷನರ್ ಎನ್. ಶಶಿಕುಮಾರ್ ಅವರ ಮಾತಿಗೆ ಎಲ್ಲೆಡೆ ಪ್ರಶಂಸೆಯ ಸುರಿಮಳೆ‌ ಸಿಕ್ಕಿದೆ.

ಆಕೀಫ್ ಕೊಲೆಯಾದ ಸುದ್ದಿ ಸಿಗುತ್ತಲೇ ಧಾವಿಸಿ‌ ಬಂದ ಕಮೀಷನರ್ ಶಶಿಕುಮಾರ್ ಮನೆಯವರಿಗೆ‌ ಸಾಂತ್ವನದ ಮಾತನ್ನಾಡಿದ್ದು, ಮೆಚ್ಚುಗೆ ಗಳಿಸಿದೆ. ಕೊಲೆ ಯಾರೇ ಮಾಡಿರಲಿ, ಕಾನೂನಿನ ಅಡಿಯಲ್ಲಿ ಅದಕ್ಕೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದ ಕಮೀಷನರ್ ಯಾರೂ ಕೂಡ ಗಾಳಿಮಾತಿಗೆ ಕಿವಿ ಕೊಡದೇ ಪೋಲಿಸರ ಮೇಲೆ ನಂಬಿಕೆಯಿಟ್ಟು‌ ಸಹಕರಿಸುವಂತೆ ಮನವಿ ಮಾಡಿದರು. ಮಕ್ಕಳು ತಪ್ಪು ಮಾಡಿದಾಗ ಹೊಡೆಯುವುದನ್ನು ನೋಡುವುದೇ ಬೇಸರವಾಗುವ ನಮಗೆ ಇಂತಹ ಘಟನೆ ಮತ್ತಷ್ಟು ನೋವುಂಟು ಮಾಡಿದೆ ಎಂದರು.

ನಮ್ಮ ಮನೆಯ ಮಕ್ಕಳಿಗೆ ನೆರೆಹೊರೆಯವರು ಅಥವಾ ಸಂಬಂಧಿಕರು ಒಂದೇಟು ಹೊಡೆದರೂ ಸಹಿಸಕ್ಕಾಗಲ್ಲ, ಅಂಥಾದ್ದರಲ್ಲಿ ಬಾಲಕನ ತಂದೆ ತನ್ನ ಮಗನ ಶವವನ್ನು ಹೇಗೆ ನೋಡಿದರೋ ತಿಳಿಯದು ಎಂದು‌ ಮರುಗಿದ ಅವರು ಸಾವಿಗೆ ಯಾರೇ ಕಾರಣವಾದರೂ ಅವರಿಗೆ ಶಿಕ್ಷೆ ನೀಡಿಯೇ ಸಿದ್ಧ ಎಂದು ನೊಂದು‌ ನುಡಿದಿದ್ದಾರೆ. ಕೊಲೆಗಾರ ಪತ್ತೆಯಾಗುವವರೆಗೆ ಉಳ್ಳಾಲದಲ್ಲೇ ಇದ್ದು ಸಾವಿಗೆ ಸೂಕ್ತ ನ್ಯಾಯ ಕೊಡಿಸುವ ಭರವಸೆ ನೀಡಿದ್ದು ಗಮನ ಸೆಳೆಯಿತು.

ಐಪಿಎಸ್ ಅಧಿಕಾರಿಯಾದರೂ ಸಾಮಾಜಿಕವಾಗಿ ಜನರೊಡನೆ ಬೆರೆತು ಮಗನನ್ನು ಕಳೆದುಕೊಂಡ ಪೋಷಕರ ಹಾಗೂ ಸಂಬಂಧಿಕರ ನೋವಿಗೆ ಸ್ಪಂದಿಸಿದ ಕಮೀಷನರ್ ಎನ್.ಶಶಿಕುಮಾರ್ ಅವರು ಪೋಲಿಸರ ಮೇಲಿನ ಗೌರವವನ್ನು ಹೆಚ್ಚಿಸಿದ್ದಾರೆ. ಇದೆಲ್ಲದರ ನಡುವೆ ದೀಪಕ್ ಎಂಬಾತನ ಮೇಲೆ ಅನುಮಾನ ಇರುವ ಬಗ್ಗೆ ಆಕೀಫ್ ನ ತಂದೆ ದೂರು ನೀಡಿದ್ದು ಆದಷ್ಟು ಬೇಗ ತನಿಖೆಯಾಗಿ ತಪ್ಪಿತಸ್ಥರು ಯಾರೆಂಬುದು ಗೊತ್ತಾಗಲಿ ಎಂಬ ಆಶಯ ಸಾರ್ವಜನಿಕರದ್ದು.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!