ಯೇನಪೋಯ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಜೀವನ್ ರಾಜ್ ಗೆ ಪಿಎಚ್.ಡಿ. ಪದವಿ: ಹಂಪಿ ವಿವಿಯಿಂದ ಗೌರವ.. - Karnataka Crime News: Latest Crime Headlines | Police Varthe
Thursday, May 6 , 2021 3:47 PM

ಕ್ರೈಂ
ಯೇನಪೋಯ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಜೀವನ್ ರಾಜ್ ಗೆ ಪಿಎಚ್.ಡಿ. ಪದವಿ: ಹಂಪಿ ವಿವಿಯಿಂದ ಗೌರವ..122

ಮಂಗಳೂರು : ಯೇನಪೋಯ (ಡಿಮ್ಡ್ ಟು ಬಿ ಯುವರ್ಸಿಟಿ)ಯ, ದಿ ಯೇನಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್ ನ ಆಸಿಸ್ಟೆಂಟ್ ಪ್ರೋಫೆಸರ್ ಹಾಗೂ ಆಸಿಸ್ಟೆಂಟ್ ಕಂಟ್ರೋಲರ್ ಆಫ್ ಎಗ್ಸಾಮಿನೇಶನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಜೀವನ್ ರಾಜ್ ರವರು, ಡಾ‌.ಗಾಂವ್ಕರ್ ಗೋಪಾಲಕೃಷ್ಣ ಎಂ.ರವರ ಮಾರ್ಗದರ್ಶನದಲ್ಲಿ ರಚಿಸಿದ “ಹೊಸ ಆರ್ಥಿಕ ನೀತಿ ಮತ್ತು ಶೈಕ್ಷಣಿಕ ವಲಯ: ದಕ್ಷಿಣ ಕನ್ನಡ ಜಿಲ್ಲೆಯನ್ನು‌ ಅನುಲಕ್ಷಿಸಿ ಒಂದು‌ ಅಧ್ಯಯನ” (New Economic Policy and Education Sector: A study with Reference to Dakshina Kannada District) ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿ ವಿಶ್ವ ವಿದ್ಯಾನಿಲಯದಿಂದ ಪಿಎಚ್.ಡಿ. ಪದವಿ ಪಡೆದಿದ್ದಾರೆ.

ಪ್ರಾಧ್ಯಾಪಕರಾಗಿ 11 ವರ್ಷಗಳ ಅನುಭವವುಳ್ಳ ಇವರು ಹಿಂದೆ ಸಂತ ಆಲೋಶಿಯಸ್ ಮತ್ತು ಕಣಚೂರು ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ.
ಇವರು ಎಂ.ಕಾಮ್ ಪದವಿಯನ್ನು ಸೈಂಟ್ಆಲೋಶಿಯಸ್ ಕಾಲೇಜ್ ನಲ್ಲಿ ಪಡೆದಿದ್ದಾರೆ. ಮಾತ್ರವಲ್ಲದೆ
ಯೇನಪೋಯ ವಿವಿಯ “ಉತ್ತಮ ಶಿಕ್ಷಕ -2019” ಎಂಬ ಪ್ರಶಸ್ತಿಯನ್ನೂ‌ ಪಡೆದಿದ್ದಾರೆ.

ವಿದ್ಯಾರ್ಥಿಜೀವನದಲ್ಲಿ ವಿದ್ಯಾರ್ಥಿ ನಾಯಕರಾಗಿ ರಾಜ್ಯ ಮಟ್ಟದ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ‌ ಹಲವಾರು‌ ಕಾರ್ಯಕ್ರಮಗಳನ್ನು‌ ರೂಪಿಸಿದ್ದಾರೆ. ಸರಕಾರಿ ಶಾಲೆ ಉಳಿಸಿ ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಅನೇಕ ಸಾಮಾಜಿಕ ಮತ್ತು ಸಾಹಿತ್ಯ ಸೇವೆಗಳಲ್ಲಿ ತನ್ನನ್ನು ತಾನು‌ ತೊಡಗಿಸಿಕೊಂಡಿರುತ್ತಾರೆ‌. ಸೌಹಾರ್ದ ಕಲಾವಿದರು ಕುತ್ತಾರ್ ಇಲ್ಲಿ ಸಾಂಸ್ಕೃತಿಕ ಚಟುವಟಿಕೆ ಆರಂಭಿಸಿದ ಅವರು, ನಿರ್ದೇಶಕರಾಗಿ‌ ಕಾರ್ಯನಿರ್ವಹಿಸಿದ್ದಾರೆ. ಮಾತ್ರವಲ್ಲದೆ ಮುನ್ನೂರು ಗ್ರಾಮದ ಹೆಸರಾಂತ ಸಂಸ್ಥೆ ಹನುಮಾನ್ ಕ್ರೀಡಾಮಂಡಳಿಯ ಗೌರವಾನ್ವಿತ ಸದಸ್ಯರು ಆಗಿದ್ದಾರೆ. ಸದ್ಯ ಅಭಿಮತ ಮಂಗಳೂರು ಇದರ ಮುಖ್ಯ ಸಂಘಟಕರಾಗಿರುವ ಜೀವನ್ ರಾಜ್ ಕುತ್ತಾರ್ ಸಾಹಿತ್ಯ ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ. ಜನರಿಗಾಗಿ ಸಾಹಿತ್ಯ ಎಂಬ ನಿಲುವಿನೊಂದಿಗೆ ನಡೆಯುತ್ತಿರುವ “ಜನನುಡಿ” ಸಂಘಟಕರಲ್ಲಿ ಜೀವನ್ ರಾಜ್ ಕೂಡಾ ಒಬ್ಬರು. ಸಾಹಿತ್ಯ, ಸಾಂಸ್ಕೃತಿಕ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಜೀವನ್ ರಾಜ್, ಹಂಪಿ ವಿವಿಯಿಂದ ಪಿಎಚ್ ಡಿ ಪದವಿ ಪಡೆದಿರುವ ಹಿನ್ನಲೆಯಲ್ಲಿ ಸಾಮಾಜಿಕ ಕ್ಷೇತ್ರದ ಹಲವರು ಅಭಿನಂದಿಸಿದ್ದಾರೆ

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!